ಕಾಸರಗೋಡು: ತರಕಾರಿ ಕೃಷಿಯಲ್ಲಿ ನಾವು ಸ್ವಾವಲಂಬಿಗಳಾಗುವುದು ಜೀವನಿ ಯೋಜನೆಯ ಗುರಿ ಎಂದು ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಏರಿಕುಳಂ ತರಕಾರಿ ಕ್ಲಸ್ಟರ್, ಏರಿಕುಳಂ ಶ್ರೀ ವೇಟ್ಟಕ್ಕೊರುಮಗನ್ ದೇವಾಲಯ ಬ್ರಹ್ಮಕಲಶೋತ್ಸವ ಸಮಿತಿ ಜಂಟಿ ವತಿಯಿಂದ, ಕೇರಳ ಕೃಷಿ ಅಭಿವೃದ್ಧಿ ಇಲಾಖೆ, ಮಡಿಕೈ ಗ್ರಾಮಪಂಚಾಯತ್ ಗಳ ಸಹಕಾರದೊಂದಿಗೆ ಏರಿಕ್ಕುಳಂ ಬಯಲಿನಲ್ಲಿ ಗುರುವಾರ ನಡೆದ ಕೊಯ್ಲು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2016ರಲ್ಲಿ ರಾಜ್ಯದಲ್ಲಿ 6 ಲಕ್ಷ ಟನ್ ತರಕಾರಿ ಉತ್ಪಾದಿಸಲಾಗಿತ್ತು. 2019ರ ವೇಳೆಗೆ ಇದು ಹನ್ನೆರಡು ಮುಕ್ಕಾಲು ಟನ್ ಆಗಿ ಹೆಚ್ಚಳಗೊಂಡಿದೆ. ಜೀವನಿ ಎಂಬ ಹೆಸರಿನ 470 ದಿನಗಳ ಕ್ರಿಯಾ ಕಾರ್ಯಕ್ರಮದಲ್ಲಿ ತರಕಾರಿ ಉತ್ಪಾದನೆ 16 ಲಕ್ಷ ಟನ್ ಆಗಿ ಹೆಚ್ಚಿಸುವ ಗುರಿಯಿದೆ. ಗೆಡ್ಡೆಗೆಣಸು, ಸೊಪ್ಪುಗಳು, ಹಣ್ಣುಗಳು ಇತ್ಯಾದಿಗಳ ಉತ್ಪಾನೆಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದವರು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಮತನಾಡಿ ಎಡರಂಗ ಸರಕಾರ ಅಧಿಕ್ಕಾರಕ್ಕೇರಿದ ನಂತರ ರಾಜ್ಯದ ಕೃಷಿರಂಗದಲ್ಲಿ ವ್ಯಾಪಕ ಅಭಿವೃದ್ಧಿ ಕಂಡುಬಂದಿದೆ. ಜನತೆಗೆ ವಿಷಮುಕ್ತ ಆಹಾರ ಒದಗಿಸುವಲ್ಲಿ ಸರಕಾರ ಸ್ವಯಂ ಹೊಣೆಗಾರಿಕೆ ವಹಿಸಿಕೊಂಡಿದೆ. ಗ್ರಾಮೀಣ ಕೃಷಿ ಒಕ್ಕೂಟಗಳ ಮೂಲಕ ಕೃಷಿ ವಲಯದಲ್ಲಿ ನೂತನ ಚೇತನ ಸೃಷ್ಟಿ ಸಾಧ್ಯವಾಗಿದೆ ಎಂದವರು ನುಡಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಕೃಷಿ ಅಧಿಕಾರಿ ಎಸ್.ಅಂಜು ಪ್ರಧಾನ ಭಾಷಣ ಮಾಡಿದರು. ಗ್ರಾಮಪಂಚಾಯತ್ ಕೆ.ಪ್ರಮೀಳಾ, ಕಾಞಂಗಾಡ್ ಬ್ಲೋಕ್ ಪಂಚಾಯತ್ ಕಲ್ಯಾಣ ಸ್ಥಾಯೀ ಸಮಿತಿ ಎಂ.ಕುಮಞಂಬು, ಗ್ರಾಮಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶಶೀಂದ್ರನ್ ಮಡಿಕೈ, ಸದಸ್ಯರಾದ ಎ.ದಾಮೋದರನ್, ಇ.ಕೆ.ಕುಂuಟಿಜeಜಿiಟಿeಜಕೃಷ್ಣನ್, ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಸಜಿನಿ ಮೋಳ್ ಕೆ., ಕೃಷಿ ಸಹಾಯಕ ನಿರ್ದೇಶಕರಾದ ಆರ್.ವೀಣಾರಾಣಿ, ಜಾನ್ ಜೋಸೆಫ್, ಮಾಜಿ ಪಿ.ಎ.ಒ. ಮಧು ಜಾರ್ಜ್ ಮತ್ತಾಯಿ, ಮಾಜಿ ಪಂಚಾಯತ್ ಅಧ್ಯಕ್ಷ ಎಂ.ರಾಜನ್, ಪಿ.ಕುಂuಟಿಜeಜಿiಟಿeಜಕೃಷ್ಣನ್, ಪಿ.ಅರವಿಂದನ್ ಮೊದಲಾದವರು ಉಪಸ್ಥಿತರಿದ್ದರು. ಮಡಿಕೈ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಸ್ವಾಗತಿಸಿದರು. ಏರಿಕುಳಂ ತರಕಾರಿಕ್ಲಸ್ಟರ್ ಸಂಚಾಲಕ ಎಂ.ವಿ.ವಿನೋದ್ ವಂದಿಸಿದರು.
ಮುಂಖ್ಯಾಂಶ:
ಕಾಞಂಗಾಡಿನಲ್ಲಿ ತರಕಾರಿ ಮಾರುಕಟ್ಟೆ: ಸಚಿವ
ಕಾಞಂಗಾಡಿನಲ್ಲಿ ಶೀಘ್ರದಲ್ಲಿ ತರಕಾರಿ ಮಾರುಕಟ್ಟೆ ಆರಂಭಿಸಲಾಗುವುದು ಎಂದುಕೃಷಿಸಚಿವ ವಿ.ಎಸ್. ಸುನಿಲ್ ಕುಮಾರ್ ಭರವಸೆ ನೀಡಿದರು. ಸ್ಥಳೀಯ ಕೃಷಿಕರು ಬೆಳೆಯುವ ತರಕಾರಿಯನ್ನು ಮಧ್ಯವರ್ತಿಗಳಿಲ್ಲದೇ ಗ್ರಾಹಕರಿಗೆ ತಲಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ವತಿಯಿಂದ ಈ ಮಾರುಕಟ್ಟೆ ಸ್ಥಾಪನೆಗೊಳ್ಳಲಿದೆ. ಈ ಮೂಲಕ ವಿಷರಹಿತ ತರಕಾರಿಗಳು ಸುಲಭದಲ್ಲಿ ಲಭಿಸಲಿವೆ. ರಾಜ್ಯದ ವಿವಿಧೆಡೆ ಇದೇ ನಿಟ್ಟಿನಲ್ಲಿ ಗ್ರಾಮ, ನಗರ ಸಂತೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಬೆಳೆ ವಿಮೆ ಮಾಡಿಸುವಲ್ಲಿ ಹಿಂದೇಟು ಹಾಕಬೇಡಿ: ಸಚಿವ
ಬೆಳೆ ವಿಮೆ ಮಾಡಿಸುವಲ್ಲಿ ಕೃಷಿಕರು ಹಿಂದೇಟು ಹಾಕಕೂಡದು ಎಂದು ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಆಗ್ರಹಿಸಿದರು. ನೇತ್ರ ಬಾಳೆ ಸಸಿಯೊಂದಕ್ಕೆ ಮೂರು ರೂ.ಮ ವಿಮೆ ಮಾಡಿಸಿಕೊಂಡರೆ, ಬಾಳೆ ಗೊನೆ ಹಾಕಿದ ನಂತರ ಪ್ರಕೃತಿ ವಿಕೋಪದಿಂದ ನಾಶ-ನಷ್ಟ ಸಂಭವಿಸಿದರೆ ತಲಾ 300 ರೂ., ಗೊನೆ ಬಿಡದ ಬಾಳೆಸಸಿಗೆ 200 ರೂ. ಪರಿಹಾರ ದೊರೆಯಲಿದೆ. ಜಿಲ್ಲೆಯ ಮಯ್ಯಿಚ್ಚದಲ್ಲಿ 1200 ಬಾಳೆಸಸಿ ನಶಕ್ಕೊಳಗಾದ ಕೃಷಿಕರೊಬ್ಬರಿಗೆ 3.30 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಸಚಿವ ತಿಳಿಸಿದರು.






