ಬದಿಯಡ್ಕ: ಜ.18ರಂದು ಕುಂಬಳೆ ಅನಂತಪುರ ದೇವಸ್ಥಾನದಲ್ಲಿ 2701ನೇ ಸಂಘ ಉದ್ಘಾಟನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸಮಾವೇಶಕ್ಕೆ ಧರ್ಮಾಧಿಕಾರಿ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಗಮನದ ಹಿನ್ನೆಲೆಯಲ್ಲಿ ಬದಿಯಡ್ಕ ವಲಯದ ಪೂರ್ವಭಾವಿ ಸಭೆಯು ಇತ್ತೀಚೆಗೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು. ಜನಜಾಗೃತಿ ಅಧ್ಯಕ್ಷ ಅಶ್ವಥ್ ಲಾಲ್‍ಬಾಗ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸೂಕ್ತವಾದ ಕಾಳಜಿ, ಕರ್ತವ್ಯಪ್ರಜ್ಞೆಯಿಂದ ಮಾಡುವ ಯಾವುದೇ ಕಾರ್ಯವೂ ಯಶಸ್ವಿಯಾಗುತ್ತದೆ. ಶ್ರದ್ಧೆ ಮತ್ತು ಜವಾಬ್ಧಾರಿಯುತ ಮನೋಭಾವದಿಂದ ಮುಂದಿರುವ ಕಾರ್ಯಕ್ರಮವನ್ನು ಅತ್ಯಂತ ಗೌರವಪೂರ್ವಕ ಉತ್ತಮವಾದ ರೀತಿಯಲ್ಲಿ ನಡೆಸಬೇಕಾದ ಹೊಣೆಗಾರಿಕೆಗೆ ಎಲ್ಲರೂ ಬದ್ಧರು. ಆದುದರಿಂದ ನಿಮ್ಮೆಲ್ಲರ ಸಹಾಯ ಸಹಕಾರ ಅತೀ ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಯೋಜನಾಧಿಕಾರಿ ಚೇತನಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಮಯಪಾಲನೆ, ಸ್ವಚ್ಚತೆ, ಶಿಸ್ತುಬದ್ದವಾದ ನಿರ್ವಹಣೆ, ಅಗತ್ಯ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಚಿರ್ಚಿಸಲಾಯಿತು. ಸುಮಾರು 300ಕ್ಕೂ ಮಿಕ್ಕಿ ಮಹಿಳೆಯರು ಸಭೆಯಲ್ಲಿ ಪಾಲ್ಗೊಂಡರು. ಜನಜಾಗೃತಿ ವೇದಿಕೆ ಸದಸ್ಯರಾದ ಅಖಿಲೇಶ್ ನಗುಮುಗಂ, ಶ್ಯಾಮ ಆಳ್ವ, ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷೆ ಶುಭಲತಾ ಸಲಹೆ ಸೂಚನೆಗಳನ್ನಿತ್ತರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು.





