ಮಂಜೇಶ್ವರ: ಇತ್ತೀಚೆಗೆ ಕೃಷ್ಣಕ್ಯರಾದ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಆರಾಧನೆ ಹಾಗೂ ಸಂತರ್ಪಣೆಯು ಗುರುವಾರ ಕಣ್ವತೀರ್ಥದ ಶ್ರೀಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದಲ್ಲಿ ನಡೆಯಿತು.
ವಿವಿಧ ಕ್ಷೇತ್ರಗಳ ಗಣ್ಯರಾದ ಎಂ.ಬಿ.ಪುರಾಣಿಕ್, ಸುಧಾಕರ ರಾವ್ ಪೇಜಾವರ, ಮಂಜು ಭಂಡಾರಿ ಉದ್ಯಾವರ ಗುತ್ತು, ಡಾ.ಜಯಪಾಲ ಶೆಟ್ಟಿ, ಡಾ.ರಮಾನಂದ ಬನಾರಿ, ಗೋಪಾಲ ಶೆಟ್ಟಿ ಅರಿಬೈಲು, ಎಸ್.ಎನ್.ಕಡಂಬಾರ್ ಮೊದಲಾದವರು, ಶ್ರೀಕ್ಷೇತ್ರದ ಮೊಕ್ತೇಸರರು, ಸ್ಥಳೀಯರು ಉಪಸ್ಥಿತರಿದ್ದರು.
ಈ ಸಂದರ್ಭ ಅಗಲಿದ ಪೇಜಾವರ ಹಿರಿಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಶ್ರೀಗಳ ಗುಣಗಾನಗೈದು ಪ್ರಾರ್ಥಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.





