HEALTH TIPS

ನೂತನ ಮಾಸಪತ್ರಿಕೆ ನೇಸರ ಬಿಡುಗಡೆ-ಸೃಜನಾತ್ಮಕತೆಗೆ ಪ್ರೋತ್ಸಾಹ ನೀಡುವ ಕ್ರಿಯಾತ್ಮಕ ಮಾಧ್ಯಮ ಶಕ್ತಿಯಾಗಿ ಮೂಡಿಬರಲಿ-ಎಡನೀರು ಶ್ರೀ

 
      ಬದಿಯಡ್ಕ: ಯುವ ಬರಹಗಾರರಿಗೆ ಪ್ರೇರಣೆ ನೀಡುವ, ಸೃಜನಾತ್ಮಕತೆಯನ್ನು ಪ್ರೇರೇಪಿಸುವ ಪತ್ರಿಕೆಗಳು ಕ್ರಿಯಾತ್ಮಕ ಸಮಾಜದ ಹೆಗ್ಗುರುಗಳಾಗಿವೆ. ಭಾಷೆ, ಸಂಸ್ಕøತಿ, ವ್ಯಕ್ತಿತ್ವ ವಿಕಸನ, ಸಂಸ್ಕಾರಗಳ ನೆಲೆಗೊಳ್ಳುವಿಕೆಯೊಂದಿಗೆ ಸಕಾರಾತ್ಮಕ ಚಿಂತನೆಗಳನ್ನು ಹುಟ್ಟುಹಾಕುವಲ್ಲಿ ನಿಯತಕಾಲಿಕಗಳು ಮಹತ್ವಪೂರ್ಣವಾದ ಕೊಡುಗೆಗಳನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಹೊರತರಲಾದ ನೂತನ ಮಾಸಪತ್ರಿಕೆ ಯಶಸ್ವಿಯಾಗಲಿ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ಹರಸಿದರು.
     ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಪ್ರಕಟಗೊಳ್ಳುವ ನೂತನ ಸಾಹಿತ್ತಿಕ, ಸಾಂಸ್ಕøತಿಕ ಮಾಸಪತ್ರಿಕೆ "ನೇಸರ" ಪತ್ರಿಕೆಯ ಮೊದಲ ಸಂಚಿಕೆಯನ್ನು ಶುಕ್ರವಾರ ಬೆಳಿಗ್ಗೆ ಶ್ರೀಮದ್ ಎಡನೀರು ಮಠದಲ್ಲಿ ಬಿಡುಗಡೆಗೊಳಿಸಿ ಚಾಲನೆ ನೀಡಿ ಅವರು ಮಾತನಾಡಿದರು.
    ಕಾಸರಗೋಡಿನ ಕನ್ನಡ-ತುಳು ಸಾಂಸ್ಕøತಿಕ, ಸಾಹಿತ್ತಿಕ ನೆಲೆಗಟ್ಟು ಶ್ರೀಮಂತವಾದುದಾಗಿದೆ. ವರ್ತಮಾನದಲ್ಲಿ ಹೊಸ ಬರಹಗಾರರನ್ನು ಗುರುತಿಸಿ, ತಿದ್ದಿ, ಪ್ರೋತ್ಸಾಹಿಸುವ ವಿಶಾಲ ಅವಕಾಶವೊಂದಕ್ಕೆ ಉದಯಿಸಿ ಬಂದ ನೇಸರ ಕಾರಣವಾಗಲಿ. ಓದುವ, ಬರೆಯುವ ಹವ್ಯಾಸವನ್ನು ಉಳಿಸಿ ಬೆಳೆಸುವಲ್ಲಿ ನವ ಮನ್ವಂತರಕ್ಕೆ ಈ ಮೂಲಕ ನಾಂದಿಯಾಗಲಿ ಎಂದು ಶ್ರೀಗಳು ಹಾರೈಸಿ ಅನುಗ್ರಹಿಸಿದರು. ಸ್ಥಳೀಯ ಪ್ರತಿಭೆಗಳಿಗೆ ಅವಕಾಶಮಾಡಿಕೊಡುವುದರ ಜೊತೆಗೆ ಹಿರಿಯ ಅನುಭವಿಗಳ ಅಕ್ಷರ ವಿಸ್ತಾರತೆಯಿಂದ ಉತ್ತಮವಾಗಿ ಪ್ರಕಟಗೊಳ್ಳಲಿ ಎಂದು ಶ್ರೀಗಳು ತಿಳಿಸಿದರು.
     ನೇಸರ ಮಾಸಪತ್ರಿಕೆಯ ಗೌರವ ಸಂಪಾದಕ ವಿರಾಜ್ ಅಡೂರು, ಕಾರ್ಯನಿರ್ವಾಹಕ ಸಂಪಾದಕ ಆರ್.ಸಿ.ಬಲ್ಲಾಳ್ ನಾಟೆಕಲ್ಲು, ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಂತೋಷ್ ಗಾಡಿಗುಡ್ಡೆ, ಅಕ್ಷತಾ ಭಟ್ ಪುದುಕೋಳಿ ಉಪಸ್ಥಿತರಿದ್ದರು.
      ಇತ್ತೀಚೆಗೆ ಕೃಷ್ಣಕ್ಯರಾದ ಮಹಾನ್ ಸಂತ ಪೇಜಾವರ ಹಿರಿಯ ಮಠಾಧೀಶರು ಎಡನೀರು ಮಠಕ್ಕೆ ಈ ಹಿಂದೆ ನೀಡಿದ್ದ ಭೇಟಿಯ ಸವಿನೆನಪಿನ ಚಿತ್ರದ ಮುಖ ಪುಟವನ್ನು ಹೊಂದಿರುವ ನೇಸರ ಮಾಸಪತ್ರಿಕೆಯ ಒಳಪುಟಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಾದ ಡಾ.ಹರಿಕೃಷ್ಣ ಭರಣ್ಯ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ನಿತ್ಯಾನಂದ ವಿವೇಕವಂಶಿ, ಡಾ.ಲಕ್ಷ್ಮೀ ಜಿ.ಪ್ರಸಾದ್, ಯೋಗೀಶ ರಾವ್ ಚಿಗುರುಪಾದೆ, ವಿದುಶಿಃ ಅನುಪಮಾ ರಾಘವೇಂದ್ರ ಉಡುಪಮೂಲೆ, ಡಾ.ಸಪ್ನ ಕೆ.ಹೊಸಂಗಡಿ, ಪರಿಣಿತ ರವಿ ಎಡನಾಡು, ಪ್ರಕಾಶ ಕುಂಟಾರು, ಡಾ.ಡಿ. ಸದಾಶಿವ ಭಟ್ ನಿಡ್ಪಳ್ಳಿ, ವಿಷ್ಣುಪ್ರಕಾಶ ಮುಳ್ಳೇರಿಯ,ಸವಿತಾ ರೈ ನಾರಂಪಾಡಿ, ವಿರಾಜ್ ಅಡೂರು, ತೇಜಸ್ವಿನಿ ಆರ್.ಕೆ ಮೊದಲಾದವರ ಲೇಖನಗಳು, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅವರ ಕಾರ್ಟೂನ್‍ಗಳು,ಪ್ರಮೀಳಾ ಚುಳ್ಳಿಕ್ಕಾನ, ಚೇತನಾ ಕುಂಬಳೆ, ಶ್ಯಾಮಲಾ ರವಿರಾಜ್ ಕುಂಬಳೆ, ಹರೀಶ್ ಸುಲಾಯ ಒಡ್ಡಂಬೆಟ್ಟು ಮೊದಲಾದವರ ಕವನಗಳು, ಲೋಕಸೇವಾ ಆಯೋಗದ ಮಾರ್ಗದರ್ಶಿ ಪ್ರಶ್ನೋತ್ತರಗಳು, ಮಕ್ಕಳ ಲೋಕ ಮೊದಲಾದವುಳು ಪ್ರಕಟಣೆಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries