ಮುಳ್ಳೇರಿಯ: ಕಾರಣಿಕ ಪ್ರಸಿದ್ದ ನಾರಂಪಾಡಿ ಶ್ರೀಉಮಾಮಹೇಶ್ವರ ಕ್ಷೇತ್ರದ ಕೊಡಿಮರ(ಧ್ವಜಸ್ತಂಭ) ಇದ್ದಕ್ಕಿದ್ದಂತೆ ರೀತಿಯಲ್ಲಿ ಶನಿವಾರ ಕುಸಿದು ಬಿದ್ದಿದ್ದು, ಭಕ್ತಜನರ ಆತಂಕಕ್ಕೆ ಕಾರಣವಾದ ಗಟನೆ ನಡೆದಿದೆ.
ಶನಿವಾರ ಅಪರಾಹ್ನ 4.30ರ ಸುಮಾರಿಗೆ ದೇವಾಲಯದ ಕೊಡಿಮರ ಕುಸಿದು ಬಿದ್ದ ಘಟನೆ ನಹಡೆಯಿತು. ಅಪರಾಹ್ನ ವೇಳೆಯಾದ ಕಾರಣ ಜೀವಹಾನಿಗಳು ಸಂಭವಿಸಿಲ್ಲ. ಕಳೆದ ಐದು ವರ್ಷಗಳ ಹಿಂದೆಯಷ್ಟೆ ಬ್ರಹ್ಮಕಲಶೋತ್ಸವ ಹಾಗೂ ನೂತನ ಧ್ವಜಸ್ತಂಭ ಪ್ರತಿಷ್ಠೆ ನಡೆದಿತ್ತು.
ಆಶ್ಚರ್ಯಕರವಾದ ರೀತಿಯಲ್ಲಿ ಧ್ವಜಸ್ತಂಭ ಕುಸಿದುಬಿದ್ದಿರುವುದು ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದ್ದು, ಊರಿಗೆ ಗಂಡಾಂತರ ಕಾದಿದಿಯೇ ಎಂಬ ಮಾತುಗಳು ಕೇಳಿಬಂದಿದೆ.
ಶಾಸ್ತ್ರೀಯ ರೀತಿಯಲ್ಲಿ ದೇವಾಲಯದ ಧ್ವಜಸ್ತಂಭಗಳನ್ನು ಪ್ರತಿಷ್ಠೆ ಮಾಡಲಾಗುವ ಪರಿಪಾಠ ವಾಡಿಕೆಯಲ್ಲಿದೆ. ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರದೇಶದಲ್ಲಿ ವಿಶೇಷ ರೀತಿಯ ಮರವನ್ನು ಗುರುತಿಸಿ ಧ್ವಜಸ್ತಂಭ ತಯಾರಿಸಲಾಗುತ್ತದೆ. ಜೊತೆಗೆ ಈ ಕ್ಷೇತ್ರದಲ್ಲಿ ಇತ್ತೀಚೆಗೆಯಷ್ಟೇ ಪ್ರತಿಷ್ಠೆಗೊಳಿಸಿರುವುದು ಗಮನಾರ್ಹವಾಗಿದ್ದು, ಇಷ್ಟು ಕಡಿಮೆ ಅವಧಿಯಲ್ಲಿ ಧ್ವಜಸ್ತಂಭ ಮುರಿದುಬಿದ್ದಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.
ಧ್ವಜಸ್ತಂಭ ಕುಸಿದುಬಿದ್ದಿರುವುದರ ಬಗ್ಗೆ ಭಕ್ತರು ಆತಂಕಪಡಬೇಕಿಲ್ಲ. ಕಾರಣಗಳನ್ನು ಗುರುತಿಸಿ, ಸೂಕ್ತ ಪರಿಹಾರಗಳನ್ನು ಕೈಗೊಳ್ಳಲಾಗುವುದೆಂದು ಕ್ಷೇತ್ರ ಸಂಬಂಧಪಟ್ಟವರು ತಿಳಿಸಿದ್ದಾರೆ.