ಕಾಸರಗೋಡು: ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರಿಗೆ ಪಿಂಚಣಿ ಮೊತ್ತ ವಿತರಣೆ ಸಹಿತ ವಿವಿಧ ಸವಲತ್ತುಗಳನ್ನು ಶೀಘ್ರ ಒದಗಿಸಿಕೊಡುವಂತೆ ಆಗ್ರಹಿಸಿ ಎಂಡೋ ಸಂತ್ರಸ್ತರ ಜನಕೀಯ ಒಕ್ಕೂಟ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಯಿತು.
ಸಂಘಟನೆ ಅಧ್ಯಕ್ಷೆ ಮುನಿಸಾ ಅಂಬಲತ್ತರ ಧರಣಿ ಉದ್ಘಾಟಿಸಿ ಮಾತನಾಡಿ, ಎಂಡೋ ಸಂತ್ರಸ್ತರ ಸವಲತ್ತುಗಳನ್ನು ಒದಗಿಸದೆ, ಬುಡಮೇಲುಗೊಳಿಸುವ ಯತ್ನ ನಡೆದಲ್ಲಿ ಸಂಘಟನೆ ಪ್ರಬಲ ಹೋರಾಟಕ್ಕೆ ಮುಂದಾಗಲಿದೆ. ಎಂಡೋ ಸಂತ್ರಸ್ತರನ್ನು ಮತ್ತಷ್ಟು ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸುವ ಬದಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಬಂಧಪಟ್ಟವರು ಮುಂದಾಬೇಕು ಎಂದು ತಿಳಿಸಿದರು.
ಸುಬೈರ್ ಪಡ್ಪು, ಶಿವಕುಮಾರ್ ಎಣ್ಮಕಜೆ, ರಾಜು ಓ.ಜೆ, ನಳಿನಿ ಸಿ.ಪಿ, ಚಂದ್ರಾವತಿ ಕೆ. ಧರಣಿನಿರತರನ್ನುದ್ದೇಶಿಸಿ ಮಾತನಾಡಿದರು. ಧರಣಿಗೆ ಮೊದಲು ಕಾಸರಗೋಡು ವಿದ್ಯಾನಗರದ ಸರ್ಕಾರಿ ಕಾಲೇಜು ವಠಾರದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಮೀಲಾ ಎಂ, ಮಿಸ್ರಿಯಾ ಕೆ.ಶಾಂತಾ ಕಾಟ್ಟುಕುಳಂಙರ, ಅರುಣಿಚಂದ್ರನ್, ಸುಮತಿ ಕೆ, ಸಮೀರಾ ಕೆ, ಸುಬೈದಾ ಪಿ, ಗೀತಾ ಕೆ, ನಸೀಮಾ ಮವ್ವಲ್ ಮೆರವಣಿಗೆಗೆ ನೇತೃಥ್ವ ನೀಡಿದರು.




