HEALTH TIPS

ಮೀಯಪದವು ಅಯ್ಯಪ್ಪಮಂದಿರ ಶಿಲಾನ್ಯಾಸ

   
           ಮಂಜೇಶ್ವರ :ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ನವೀಕರಣದ ಶಿಲಾನ್ಯಾಸ ವನ್ನು ಕರ್ನಾಟಕ ಸರ್ಕಾರದ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ದ.ಕ. ಹಾಗೂ ಕಾಸರಗೋಡು ಜಿಲ್ಲೆಗಳು ಬೌಗೋಳಿಕವಾಗಿ ಹೆಚ್ಚಿನ ಸಾಮ್ಯತೆ ಹೊಂದಿರುವ ಭೂ ಪ್ರದೇಶಗಳು. ಉಭಯ ಜಲ್ಲೆಗಳಲ್ಲೂ ಅತ್ಯಂತ ಹೆಚ್ಚಿನ ಸಂಖ್ಯೆಯ ದೇಗುಲಗಳಿವೆ, ಧರ್ಮ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಒಂದೇ ಶ್ರದ್ದೆಯ ವಿಚಾರಕ್ಕೆ ಉಭಯ ಜಿಲ್ಲೆಗಳೂ ಸೇರಿರುವುದು ಶ್ಲಾಘನಾರ್ಹ. ಪ್ರತೀ ಗ್ರಾಮಗಳಲ್ಲಿ, ಶ್ರದ್ಧಾಕೇಂದ್ರಗಳಲ್ಲಿ ಸದಾ ಧಾರ್ಮಿಕ ಚಟುವಟಿಕೆ ನಡೆದಲ್ಲಿ ಜನರಿಗೆ ಆತ್ಮಸ್ಥೈರ್ಯ, ಆತ್ಮಶಕ್ತಿಯನ್ನು ವೃದ್ಧಿಸುತ್ತದೆ. ಕೇರಳದ ಗ್ರಾಮಗಳಲ್ಲಿ ಒಂದೊಂದು  ಕಲ್ಲು ಕೂಡಾ ಒಂದೊಂದು ಕತೆ ಹೇಳುತ್ತದೆ. ಮನೆಮನೆಗಳಲ್ಲಿ ಭಜನಾ ಕಾರ್ಯಗಳು ನಡೆಯಬೇಕು. ನಮ್ಮ ಗತಿಸಿದ ಇತಿಹಾಸ ಮತ್ತೆ ಸ್ಥಾಪಿತವಾಗಬೇಕಾದರೆ ಶ್ರದ್ಧಾ ಕೇಂದ್ರಗಳನ್ನು ಪರಿಣಾಮಕಾರಿಯಾಗಿ ಉಳಿಸಿ ಬೆಳೆಸಬೇಕಾಗಿದೆ. ಅಯ್ಯಪ್ಪನ ಪ್ರೇರಣೆ ಮನುಕುಲದ ಕ್ಷೇಮಕ್ಕೆ ಪ್ರೇರಣೆ ಕಾರಣವಾಗಿದೆ ಎಂದರು.
        ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುದೇವಾನಂದ ಸ್ವಾಮೀಜಿಗಳು ಅಯ್ಯಪ್ಪನ ಹೆಸರಲ್ಲಿ ಶರಣಂ ಇದೆ. ದೇವನಿಗೆ ಶರಣಾಗತಿಯೇ ಈ ಮಂತ್ರದ ತಾತ್ಪರ್ಯ. ನಮ್ಮ ದೇಶದ ಅಂತಃಸತ್ವ ಆಧ್ಯಾತ್ಮ. ನಾಶವಿಲ್ಲದ ಅವಿನಾಶೀ ಸಂಸ್ಕøತಿ ಭಾರತೀಯತೆಯಾಗಿದೆ. ಆದದ್ದರಿಂದ ಅದು ಊಧ್ರ್ವಮೂಲ ಸಂಸ್ಕøತಿ ಎಂದು ತಿಳಿಸಿದರು.
       ಸಮಾರಂಭದಲ್ಲಿ  ಬ್ರಹ್ಮ ಶ್ರೀ ಗೋವಿಂದ ಭಟ್ ಪೊಳ್ಳಕಜೆ ದೀಪ ಪ್ರಜ್ವಲನೆಗೈದರು. ವೇದಮೂರ್ತಿ ಬೋಳಂತಕೋಡಿ ರಾಮಭಟ್, ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಉಪಸ್ಥಿತರಿದ್ದರು. ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ದುಬೈ ಯುಎಇ ಎಕ್ಸಚೇಂಜ್ ಮಾಜಿ ಅಧ್ಯಕ್ಷ ಸಿ ಎ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಭಾಗವಹಿಸಿ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು.
      ಅತಿಥಿಗಳಾಗಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯರಾದ  ನಾರಾಯಣ ಶೆಟ್ಟಿ ಕೋಡಿಬೈಲು, ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ, ಡಾ.ಶ್ರೀಧರ ಭಟ್ ಉಪ್ಪಳ, ರಾಧಾಕೃಷ್ಣ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ, ಚೇತನಾ ಎಂ, ಜಯರಾಮ ಬಲ್ಲಂಗುಡೇಲು, ಯಸ್.ಯನ್. ಕಡಂಬಾರ್, ಗೋಪಾಲ ಶೆಟ್ಟಿ ಅರಿಬೈಲು, ಬಾಲಕೃಷ್ಣ ದೀಕ್ಷಾ, ಮೀಂಜ ಗ್ರಾ.ಪಂ. ಅಧ್ಯಕ್ಷೆ ಶಂಶಾದ್ ಶಕೂರು, ಗ್ರಾ.ಪಂ. ಕಾರ್ಯದರ್ಶಿ ಶಾನವಾಜ್, ಸಾಹಿತಿ ವಿಠಲ ಬೇಲಾಡಿ ಭಾಗವಹಿಸಿದ್ದರು.
        ವಸಂತ ಭಟ್ ತೊಟ್ಟೆತ್ತೋಡಿ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಧರ ರಾವ್ ಆರ್ ಎಂ ಸ್ವಾಗತಿಸಿ, ರಾಜಾರಾಮ ರಾವ್ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರೀಶ ಮೀಯಪದವು ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries