HEALTH TIPS

ಕಾಶ್ಮೀರ ಪರಿಸ್ಥಿತಿ ಸುಧಾರಣೆಗೆ ಸರ್ಕಾರದ ಕ್ರಮಗಳ ಅವಲೋಕನಕ್ಕೆ ವಿದೇಶಿ ರಾಯಭಾರಿಗಳ ಭೇಟಿ: ಎಂಇಎ


      ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿದೇಶಿ ರಾಯಭಾರಿಗಳ ಭೇಟಿಯ ಉದ್ದೇಶವು ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವುದರಲ್ಲಿ  ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಾಥಮಿಕ ಪ್ರಯತ್ನಗಳ ಅವಲೋಕನವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಅಲ್ಲದೆ ಇದೊಂದು ದೂರಾಲೋಚನೆ ಪ್ರವಾಸ ಎನ್ನುವ ವಿಪಕ್ಷಗಳ ಟೀಕೆ ಆಧಾರರಹಿತವಾಗಿದೆ ಎಂದು ಸಚಿವಾಲಯ ತಿಳಿಸಿದೆ.
   ಇಯು(ಯುರೋಪಿಯನ್ ಯೂನಿಯನ್) ರಾಯಭಾರಿಗಳು ಸೇರಿದಂತೆ ಭವಿಷ್ಯದಲ್ಲಿ ಕಾಶ್ಮೀರಕ್ಕೆ ಇದೇ ರೀತಿಯ;ಲ್ಲಿ ಅನೇಕ ರಾಷ್ಟ್ರಗಳ ನಿಯೋಗ ಭೇಟಿಯನ್ನು ನೀಡಬಹುದಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು.ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಸೇರಿದಂತೆ 15 ರಾಯಭಾರಿಗಳ ತಂಡವು ಗುರುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದ್ದು ಭೇಟಿಯ ಭಾಗವಾಗಿ ಇಂದು ಶ್ರೀನಗರಕ್ಕೆ ನಿಯೋಗ ಆಗಮಿಸಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯದ ಸ್ಥಾನಮಾನ ರದ್ದುಪಡಿಸಿದ ನಂತರ ಇದು ರಾಜತಾಂತ್ರಿಕರ ಮೊದಲ ಕಾಶ್ಮೀರ ಭೇಟಿಯಾಗಿದೆ.ಈ ಭೇಟಿ ಸರ್ಕಾರಕ್ಕೆ ಅನುಕೂಲಕರವಾಗಿದ್ದು ರಾಜತಾಂತ್ರಿಕ ಉನ್ನತ ಹುದ್ದೆಯಲ್ಲಿರುವ ರಾಯಭಾರಿಗಳು ಭದ್ರತಾ ಅಧಿಕಾರಿಗಳು, ರಾಜಕೀಯ ಮುಖಂಡರು, ನಾಗರಿಕ ಗುಂಪುಗಳು ಮತ್ತು ಮಾಧ್ಯಮ ಸಹೋದ್ಯೋಗಿಗಳನ್ನು ಭೇಟಿಯಾದರು ಎಂದು ಕುಮಾರ್ ಹೇಳಿದರು. ಕಾಶ್ಮೀರದ ಪರಿಸ್ಥಿತಿಯನ್ನು ಸುಧಾರಿಸಲು ನಮ್ಮ ಸರ್ಕಾರ ಮಾಡಿರುವ ಪ್ರಾಥಮಿಕ  ಪ್ರಯತ್ನಗಳನ್ನು ನೋಡುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ ಜಮ್ಮು ಮತ್ತು ಕಾಶ್ಮೀರ ಭೇಟಿಯನ್ನು ಆಯೋಜಿಸಲಾಗಿದೆ ಎಂದರು. ಇನ್ನು ನಿಯೋಗವು ಯಾವ ರಾಜಕೀಯ ಮುಖಂಡರನ್ನು ಭೇಟಿಯಾಗಿದೆ ಎಂದು ಕೇಳಲಾಗಿ ನಿಯೋಗದ ಭೇಟಿ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅವರು ಹೇಳಿದ್ದಾರೆ.
      ಇಯು ರಾಯಭಾರಿಗಳು ಒಂದು ನಿಯೋಗದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಲು ಬಯಸಿದ್ದರು ಆದರೆ ಸರ್ಕಾರ ಎಲ್ಲರಿಗೆ ಪ್ರಸ್ತುತ ಭೇಟಿಯ ಆಹ್ವಾನ ನೀಡಿರಲಿಲ್ಲ ಎಂದು ಅವರು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries