ಅಹಮ್ಮದಾಬಾದ್: ಪೆÇೀರ್ಷೆ 911 ಸ್ಪೋಟ್ರ್ಸ್ ಕಾರಿನ ಮಾಲಿಕ ತನ್ನ ಕಾರನ್ನು ಪೆÇಲೀಸರಿಂದ ವಾಪಸ್ ಪಡೆಯಲು ಮಾಲಿಕ ಬರೊಬ್ಬರಿ 27.68 ಲಕ್ಷ ರೂಪಾಯಿ ಪಾವತಿ ಮಾಡಿದ್ದಾನೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು,ರಂಜಿತ್ ದೇಸಾಯಿ ಎಂಬುವವರು ಆಮದು ಮಾಡಿಕೊಂಡಿದ್ದ 2 ಕೋಟಿ ರೂಪಾಯಿ ಮೌಲ್ಯದ ಪೆÇೀರ್ಷೆ ಕಾರಿಗೆ ಕಟ್ಟಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳದೇ 2017 ರಿಂದ ನೋಂದಣಿಯನ್ನೂ ಮಾಡಿಸದೇ ಬಳಸುತ್ತಿದ್ದರು. ಅಹ್ಮದಾಬಾದ್ ನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ತೆರಿಗೆ ಪಾವತಿಸಿ, ನಗರ ಟ್ರಾಫಿಕ್ ಪೆÇಲೀಸರ ವಶದಲ್ಲಿದ್ದ ಕಾರನ್ನು ವಾಪಸ್ ಪಡೆಯಲಾಗಿದೆ. ಪೆÇೀರ್ಷೆ ಕಾರಿಗೆ ವಿಧಿಸಲಾದ ದಂಡ ದೇಶದಲ್ಲೇ ಮೊದಲ ಬಾರಿಗೆ ವಿಧಿಸಲಾಗಿರುವ ಅತಿ ಹೆಚ್ಚಿನ ಮೊತ್ತದ ದಂಡವಾಗಿದೆ ಎಂದು ಟ್ರಾಫಿಕ್ ಪೆÇಲೀಸ್ ಟ್ವೀಟ್ ಮಾಡಿದ್ದಾರೆ.
ದುಬಾರಿ ಕಾರಿನ ಮಾಲಿಕ 16 ಲಕ್ಷ ಮೋಟಾರು ವಾಹನ ತೆರಿಗೆ ಪಾವತಿ ಮಾಡಬೇಕಿತ್ತು, ಜೊತೆಗೆ 7.68 ಲಕ್ಷ ರೂಪಾಯಿ ತೆರಿಗೆ ಕಟ್ಟದೇ ಇರುವುದಕ್ಕೆ ವಿಧಿಸಿದ ಬಡ್ಡಿ ಮೊತ್ತ, 4 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ.





