ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಶ್ರೀ ಪಾದಂಗಳವರ ನಾಲ್ಕನೇ ಪುಣ್ಯ ತಿಥಿ ಆರಾಧನೋತ್ಸವ ನಡೆಯಿತು.
ಮಧ್ಯಾಹ್ನ ಶ್ರೀ ವರದರಾಜ ವೆಂಕಟರಮಣ ದೇವರಿಗೆ ಮಹಾಪೂಜೆ ನಡೆದು ಬಳಿಕ ನಮಸ್ಕಾರ ಮಂಟಪದಲ್ಲಿ ವಿಶೇಷವಾಗಿ ಶ್ರೀಗಳವರ ಭಾವಚಿತ್ರವಿರಿಸಿ ಅಲಂಕಾರಗೊಳಿಸಿ ವೈಭವದ ಪೂಜೆ ಸಲ್ಲಿಸಲಾಯಿತು. ಈ ವೇಳೆ ಶ್ರೀಗಳ ಗುಣಗಾನವನ್ನು ಕೆ.ವಿಶ್ವನಾಥ ಶೆಣೈ ಅವರು ಮಾಡಿದರು.
ರಾತ್ರಿ ಶ್ರೀಗಳ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಇರಿಸಿ ಉತ್ಸವ ನಡೆಯಿತು. ದೇಗುಲದಲ್ಲಿ ಈ ವೇಳೆ ಸಂತರ್ಪಣೆ ನಡೆಯಿತು. ಸಮಾಜದ ಹತ್ತು ಸಮಸ್ತರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆ.ವಿಠೋಬ ರಘುನಾಥ ಕಾಮತ್ ಟ್ರಸ್ಟ್ ಈ ಶುಭ ಕಾರ್ಯದ ಸೇವಾದಾರರಾಗಿದ್ದರು.





