ಪೆರ್ಲ:ಮಾಹಿತಿ ಮತ್ತು ತಂತ್ರಜ್ಞಾನದ ಬಳಕೆ ಮನುಷ್ಯ ಜೀವನಕ್ಕೆ ಎಷ್ಟು ಅಗತ್ಯವೋ ಅದನ್ನೂ ಮೀರಿ ವಿದ್ಯಾರ್ಥಿಗಳ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಬದಿಯಡ್ಕ ಪೆÇಲೀಸ್ ಠಾಣೆ ಸೈಬರ್ ಅಧಿಕಾರಿ ಶ್ರೀನಾಥ್ ವಿಷಾದ ವ್ಯಕ್ತಪಡಿಸಿದರು.
ಸೈಬರ್ ಕ್ರ್ರೈಮ್ ಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲೀಗಲ್ ಲಿಟರೆಸಿ ತರಬೇತಿ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾಟ್ಸಪ್ಪ್, ಫೇಸ್ಬುಕ್ , ಟ್ವಿಟರ್, ಇನ್ಸ್ಟಾಗ್ರಾಮ್, ಯುಟ್ಯೂಬ್ ಮೊದಲಾದ ಅಪ್ಲಿಕೇಷನ್ ಬಳಕೆ ಹೆಚ್ಚುತ್ತಿದೆ.ವಿದ್ಯಾರ್ಥಿಗಳು ಜಾಲತಾಣದಲ್ಲಿ ಜಾಲಾಡುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾ, ಆನ್‍ಲೈನ್ ಮುಖಾಂತರ ವ್ಯಕ್ತಿಯ ವೈಯುಕ್ತಿಕ ಮಾಹಿತಿ ಸಂಗ್ರಹಿಸಿ ಮೋಸ ಮಾಡುವ ಸಂಖ್ಯೆಯು ಹೆಚ್ಚಿದೆ.ವೈಯುಕ್ತಿಕ ಮಾಹಿತಿ ವಿವರಗಳನ್ನು ಜಾಲತಾಣಗಳಲ್ಲಿ ಬಹಿರಂಗಪಡಿಸುವುದು, ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸುವುದು ಅಪಾಯಕಾರಿ.ಇದರಿಂದ ಮುಂದಿನ ದಿನಗಳಲ್ಲಿ ಫೆÇೀಟೋ, ಇತರ ದಾಖಲೆಗಳನ್ನು ಸಂಗ್ರಹಿಸಿ ಬ್ಲಾಕ್‍ಮೇಲ್ ಮಾಡುವ ಸಾಧ್ಯತೆ ಇರುತ್ತದೆ.ಆದ್ದರಿಂದ ಸೋಷಿಯಲ್ ಮೀಡಿಯಾ ಅಪ್ಲಿಕೇಷನ್‍ಗಳನ್ನು ಬಳಸುವ ಸಂದರ್ಭಗಳಲ್ಲಿ ಜಾಗೃತರಾಗಿರಬೇಕು. ವಿದ್ಯಾರ್ಥಿಗಳು ಪಾಲಕರಿಗೆ ಆನ್‍ಲೈನ್‍ನಿಂದ ಆಗುತ್ತಿರುವ ಮೋಸಗಳ ಬಗ್ಗೆ ಅರಿವು ಮೂಡಿಸಬೇಕು. ಮೊಬೈಲ್ ಗೇಮಿಂಗ್ ಹವ್ಯಾಸಕ್ಕೆ ಸಿಲುಕಿ ವಿದ್ಯಾರ್ಥಿಗಳು ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ.ಮೊಬೈಲ್ ಗೇಮ್ಸ್ ವಿದ್ಯಾರ್ಥಿಗಳಲ್ಲಿ ಆಡಿಕ್ಟೀವ್ ಮನೋಸ್ಥಿತಿ ನಿರ್ಮಾಣ ಮಾಡುತ್ತಿದೆ.ಇದರಿಂದ ಅಧ್ಯಯನದಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಸೈಬರ್ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.ಸೈಬರ್ ಕ್ರೈಮ್ ಗಳ ಬಗ್ಗೆ ಯುವ ಜನತೆ ಜಾಗೃತಿ ಹೊಂದಬೇಕು ಎಂದು ತೀಳಿಸಿದ ಅವರು ಸೈಬರ್ ಕ್ರೈಂ ಹೇಗೆ ಉಂಟಾಗುತ್ತದೆ, ಕಂಪ್ಯೂಟರ್, ಮೊಬೈಲ್ ಫೆÇೀನ್ ಉಪಯೋಗದ ಮೂಲಕ ಅಪರಾಧ ಕೃತ್ಯಗಳಲ್ಲಿ ತೊಡಗುವುದರಿಂದ ಉಂಟಾಗುವ ತೊಂದರೆಗಳು, ಶಿಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಸೈಬರ್ ಅಪರಾಧಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಹಾಗೂ ಸುರಕ್ಷತೆ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಲೀಗಲ್ ಲಿಟರೆಸಿ ತರಬೇತಿ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಶ್ರೀನಾಥ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.ಶಿಕ್ಷಕ ದಿನೇಶ ಸ್ವಾಗತಿಸಿದರು. ಶೀನಪ್ಪ ವಂದಿಸಿದರು.




