ಮುಳ್ಳೇರಿಯ: ನವ ಕೇರಳಕ್ಕಾಗಿ ಜನಕೀಯ ಯೋಜನೆ 2019-20, ಲಿಂಗ ಸಂಪನ್ಮೂಲ ಯೋಜನೆ ಭಾಗವಾಗಿ ಬೆಳ್ಳೂರು ಗ್ರಾ.ಪಂ.ಕುಟುಂಬಶ್ರೀ ಸದಸ್ಯರಿಗೆ ಸೂಕ್ಷ್ಮ ಉದ್ಯಮ (ಮೈಕ್ರೋ ಎಂಟರ್‍ಪ್ರೈಸಸ್) ಮೂರು ದಿನಗಳ ತರಬೇತಿಗೆ ಕುಟುಂಬಶ್ರೀ ಸಭಾಂಣದಲ್ಲಿ ಚಾಲನೆ ನೀಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ಕಾರ್ಯಕ್ರಮ ಉದ್ಘಾಟಿಸಿದರು.ಸಿಡಿಎಸ್ ಅಧ್ಯಕ್ಷೆ ಮಾಲಿನಿ ಎನ್.ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ., ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಮನೋಹರ ಎನ್.ಎ., ಬ್ಲಾಕ್ ಪಂಚಾಯಿತಿ ಸದಸ್ಯೆ ಸತ್ಯವತಿ ಸಿ.ರೈ, ಪಂಚಾಯಿತಿ ಸದಸ್ಯರಾದ ರಾಧಾ ವಿ., ರಾಧಾಕೃಷ್ಣ ಬೆಳೇರಿ ಶುಭ ಹಾರೈಸಿದರು. ಪಂಚಾಯಿತಿ ಗ್ರಾಮ ವಿಸ್ತರಣಾಧಿಕಾರಿ, ಕುಟುಂಬಶ್ರೀ ಕಾರ್ಯದರ್ಶಿ ಅನೀಶ್ ಸ್ವಾಗತಿಸಿ, ಲೆಕ್ಕ ಪರಿಶೋಧಕಿ ನಿವೇದಿತ ಸಿ.ಎಚ್.ವಂದಿಸಿದರು. ಅಭಿವೃದ್ಧಿ ತರಬೇತಿ ಸಲಹಾ ತರಬೇತುದಾರೆ ಪ್ರಮೀಳ ಮತ್ತು ವಿಮಲ ನೇತೃತ್ವ ವಹಿಸಿದರು. ಗುರುವಾರ ಶುಕ್ರವಾರ ಮತ್ತು ಶನಿವಾರ ಫೇಬ್ರಿಕ್ ಪೈಂಟಿಂಗ್ ತರಬೇತಿ ನಡೆಯಿತು.ಜ.13, 14 ಮತ್ತು 15ರಂದು ಸಾರಿ ಡಿಸೈನ್ ಹಾಗೂ 16, 17 ಮತ್ತು 18ರಂದು ಎಂಬ್ರಾಯಿಡರಿ ತರಬೇತಿ ನಡೆಯಲಿದೆ.




