ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದ ಮೂರು ಕರಾವಳಿ ರಸ್ತೆಗಳ ಅಭಿವೃದ್ಧಿಗೆ 244.5 ಲಕ್ಷ ರೂ. ಆಡಳಿತಾನುಮತಿ ಲಭಿಸಿದೆ.
ಹಾರ್ಬರ್ ಎಂಜಿನಿಯರಿಂಗ್ ಇಲಾಖೆ 244.5 ಲಕ ್ಷ ರೂ. ಯೋಜನಾ ವರದಿಗೆ ಆಡಳಿತಾನುಮತಿ ಲಭಿಸಿದೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದ್ದಾರೆ.
ಬದಿಯಡ್ಕ-ಕಂಬಾರು ರಸ್ತೆ(148.70 ಲಕ್ಷ ರೂ.), ಪಾಯಿಚ್ಚಾಲ್-ಪೂಕ್ಕರೆ-ವಿಷ್ಣುಮಂಗಲ ರಸ್ತೆ(57.30 ಲಕ್ಷ ರೂ.) ಮತ್ತು ಮೊಗ್ರಾಲ್ ಪುತ್ತೂರು ಟೌನ್-ಮೊಗ್ರಾಲ್ ಪುತ್ತೂರು ಹೈಯರ್ ಸೆಕೆಂಡರಿ ಶಾಲೆ(38.50 ಲಕ್ಷ ರೂ.) ರಸ್ತೆ ಅಭಿವೃದ್ಧಿಗೆ ಅನುಮತಿ ಲಭಿಸಿದೆ.




