ಮುಳ್ಳೇರಿಯ: ಕಾರಡ್ಕ 13ನೇ ಮೈಲಿನಲ್ಲಿ ಸೋಮವಾರ ಬೆಳಿಗ್ಗೆ ಬೈಕ್ ಹಾಗೂ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ದಂಪತಿಗಳು ಮೃತಪಟ್ಟ ಬೆನ್ನಿಗೆ ಇದೇ ರಸ್ತೆಯ ಆದೂರಲ್ಲಿ ಇನ್ನೊಂದು ಅಪಘಾತ ಸಂಭವಿಸಿದ್ದು, ಕೂದಳೆಳೆಯ ಅಂತರದಿಂದ ಜೀವಾಪಾಯದಿಂದ ಪಾರಾಗಿದೆ.
ಮುಳ್ಳೇರಿಯದಲ್ಲಿ ಶರಣ್ಯ ಮೆಡಿಕಲ್ ಮಾಲಕರಾದ ಕುಮಾರ್ ಅವರು ಕುಟುಂಬ ಸಹಿತ ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಮಧ್ಯಾಹ್ನ ಆದೂರು ಠಾಣಾ ಪರಿಸರ ತಲಪುತ್ತಿರುವಂತೆ ಎದುರಿನಿಂದ ಆಗಮಿಸಿದ ಅತಿ ವೇಗದ ಲಾರಿ ಡಿಕ್ಕಿಯಾಗಿದೆ. ಆದರೆ ಕುಮಾರ್ ಅವರು ಸಿನಿಮೀಯ ರೀತಿಯಲ್ಲಿ ಕಾರನ್ನು ನಿಯಂತ್ರಿಸಿದ್ದರಿಂದ ಹೆಚ್ಚಿನ ಅಪಾಯದಿಂದ ಪಾರಾದರು. ಕಾರಿಗೆ ಹಾನಿಯಾಗಿದೆ. ಸರಣಿ ಅಪಘಾತ, ಮರಣಗಳಿಂದ ಮುಳ್ಳೇರಿಯದಲ್ಲಿ ಸೋಮವಾರ ಭೀತಿ ಮತ್ತು ದುಃಖದ ವಾತಾವರಣ ಕಂಡುಬಂದಿದೆ.





