ಬದಿಯಡ್ಕ: ಅಖಿಲ ಕೇರಳ ಯಾದವ ಸಭಾದ ರಾಜ್ಯ ಅಧ್ಯಕ್ಷ ವಯಲಾಪುರಂ ನಾರಾಯಣನ್ ಭಾನುವಾರ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರಕ್ಕೆ ಭೇಟಿಯಿತ್ತು ನೂತನವಾಗಿ ನಿರ್ಮಾಣವಾಗುತ್ತಿರುವ ಭೋಜನ ಶಾಲೆ ಹಾಗೂ ಸಭಾಭವನದ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಂದಿರಗಳು, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಊರಿಗೆ ಹಾಗೂ ಜನರಿಗೆ ಒಳಿತಾಗುತ್ತದೆ. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿ ಎಂದು ತಿಳಿಸಿ ವೈಯಕ್ತಿಕ ಸಹಾಯಧನವಾಗಿ ರೂ.25 ಸಾವಿರ ವನ್ನು ಮಂದಿರದ ಪದಾಧಿಕಾರಿಗಳು ನೀಡಿದರು.
ಮಂದಿರದ ಗೌರವಾಧ್ಯಕ್ಷರಾದ ಬಾಬು ಮಣಿಯಾಣಿ ಜಯನಗರ ರಾಜ್ಯಾಧ್ಯಕ್ಷರನ್ನು ಶಾಲುಹೊದೆಸಿ ಗೌರವಿಸಿದರು. ಭಜನ ಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂದಿರದ ಮಹಿಳಾ ವಿಭಾಗದ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ, ಯಾದವ ಸೇವಾಸಂಘದ ಅಧ್ಯಕ್ಷ ಕುಂಞÂರಾಮ ಮಣಿಯಾಣಿ ಪದ್ಮಾರು ಮಾತನಾಡಿದರು. ಯುವ ವಿಭಾಗದ ಅಧ್ಯಕ್ಷ ರವೀಂದ್ರ ಜಯನಗರ, ಯಾದವ ಸೇವಾಸಂಘದ ಪ್ರ.ಕಾರ್ಯದರ್ಶಿ ನಾರಾಯಣ ಪದ್ಮಾರು, ಮಂದಿರದ ಪದಾಧಿಕಾರಿಗಳಾದ ರೂಪರಾಜ್ ಪದ್ಮಾರು, ಬಾಲಕೃಷ್ಣ ನಾರಂಪಾಡಿ, ದಾಮೋದರ ಮಣಿಯಾಣಿ ಮಠದ, ಉದಯಕುಮಾರ್ ಪದ್ಮಾರ್, ಬಾಬು ಮಣಿಯಾಣಿ ಬೆದ್ರುಕೂಡ್ಲು, ಅಚ್ಚುತ ನಾರಂಪಾಡಿ, ಶ್ರೀಧರ ಪದ್ಮಾರು, ಚಂದ್ರ ಪದ್ಮಾರು ಉಪಸ್ಥಿತರಿದ್ದರು. ಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಂದಿಸಿದರು.





