HEALTH TIPS

ಕನ್ನಡಿಗರಿಗೆ ಮೀಸಲಿರಿಸಿದ ಹುದ್ದೆಗಳ ಬಗ್ಗೆ ತಕ್ಷಣ ಪಿ.ಎಸ್.ಸಿಗೆ ವರದಿ ಸಲ್ಲಿಸಲು ಆದೇಶ

 
          ಕಾಸರಗೋಡು:  ಮಂಜೇಶ್ವರವನ್ನು ನೂತನ ತಾಲೂಕು ಎಂಬುದಾಗಿ ಘೋಷಿಸಿದ ಬಳಿಕ "ಭಾಷಾ ಅಲ್ಪಸಂಖ್ಯಾತ ಪ್ರದೇಶ" ಎಂಬ ಪಟ್ಟಿಯಿಂದ ಹೊರತಾಗಿದ್ದು, ತಕ್ಷಣ ಸೇರ್ಪಡೆಗೊಳಿಸಬೇಕು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಆಗ್ರಹಿಸಿದರು.
        ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಬುಧವಾರ ನಡೆದ ಭಾಷಾ ಅಲ್ಪಸಂಖ್ಯಾತ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
        ಈ ಹಿಂದೆ ಕಾಸರಗೋಡು ತಾಲೂಕಿನಲ್ಲಿ ಒಳಪಟ್ಟಿದ್ದ ಸಂದರ್ಭ ಭಾಆ ಅಲ್ಪಸಂಖ್ಯಾತ ಪ್ರದೇಶವಾಗಿತ್ತು. ಆದರೆ ನೂತನ ತಾಲೂಕು ಆಗಿ ಘೋಷಣೆಗೊಂಡ ವೇಳೆ ಈ ಹಿನೆಲೆ ತಪ್ಪಿಹೋಗಿದ್ದು, ಭಾಷಾ ಅಲ್ಪಸಂಖ್ಯಾತ ಜನತೆಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳ ಸಹಿತ ಅನೇಕ ಮಂದಿ ಈ ನಿಟ್ಟಿನಲ್ಲಿ ಸಂಕಷ್ಟಕ್ಕೊಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ತಕ್ಷಣ ಸ್ಪಂದಿಸಿ ಅಲ್ಪಸಂಖ್ಯಾತರ ಪ್ರದೇಶ ಎಂಬ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ,  ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ ಸರಕಾರಿ ಮುದ್ರಣಾಲಯವೊಂದನ್ನು ಶೀಘ್ರದಲ್ಲೇ ಆರಂಭಿಸುವಂತೆ ಅವರು ಆಗ್ರಹಿಸಿದರು.
        ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಅವರು ಈ ಸಂಬಂಧ ರಾಜ್ಯಸರಕಾರಕ್ಕೆ ಶಿಫಾರಸು ಸಲ್ಲಿಸುವುದಾಗಿ ತಿಳಿಸಿದರು.
   ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಆರೋಪಿಸಿದರು. ಮಾಯಿಪ್ಪಾಡಿ ಡಯಟ್ ನಲ್ಲಿ ಕನ್ನಡ ಮಧ್ಯಮ ಶಿಕ್ಷಣಕ್ಕೆ ಕನ್ನಡದ ಶಿಕ್ಷಕರನ್ನೇ ನೇಮಿಸಬೇಕು, ಕೆ.ಎಸ್.ಆರ್.ಟಿ.ಬಸ್ ನಿಲ್ದಾಣದಲ್ಲಿ ಫಲಕಗಳನ್ನು, ಉದ್ಘೋಷಗಳನ್ನು ಕನ್ನಡದಲ್ಲಿ ಒದಗಿಸಬೇಕು, ಜಿಲ್ಲೆಯ ಕನ್ನಡ ಪ್ರದೇಶಗಳ ಅಂಗನವಾಡಿಗಳಿಗೆ ಕನ್ನಡ ಪಠ್ಯಪುಸ್ತಕಗಳನ್ನು ವಿತರಣೆ ನಡೆಸಿದ್ದರೂ, ಅಲ್ಲಿನ ಶಿಕ್ಷಕಿಯರಿಗೆ ಈ ಸಂಬಂಧ ತರಬೇತು ನೀಡದೇ ಇದ್ದುದು ಸಮಸ್ಯೆಯಾಗುತ್ತಿದೆ. ಈ ಸಂಬಂಧ ತಕ್ಷಣ ಕ್ರಮಕೈಗೊಳ್ಳಬೇಕು ಎಂದವರು ಆಗ್ರಹಿಸಿದರು.
         ಕನ್ನಡ ಭಾಷಾ ಅಲ್ಪಸಂಖ್ಯಾತರಿಗಾಗಿ ಮೀಸಲಿರಿಸಿದ ಹುದ್ದೆಗಳನ್ನು ತಕ್ಷಣ ಪಿ.ಎಸ್.ಸಿಗೆ ವರದಿ ಮಾಡುವಂತೆ ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಕಡ್ಡಾಯ ಆದೇಶ ನೀಡಿದ್ದಾರೆ. ಪಿ.ಎಸ್.ಸಿ. ಯಾರ್ಂಕ್ ಲಿಸ್ಟ್ ಜಾರಿಯಲ್ಲಿಲ್ಲದ ಹುದ್ದೆಗಳನ್ನು ನಿರಾಕ್ಷೇಪ ಪತ್ರ ಪಡೆದು ಉದ್ಯೋಗ ವಿನಿಮಯಕೇಂದ್ರ ಮೂಲಕನೇಮಕಾತಿ ನಡೆಸುವಂತೆ ಅವರು ತಿಳಿಸಿದರು.
      ಗ್ರಾಮಪಂಚಾಯತ್ ಮಟ್ಟದಲ್ಲಿ ವಿತರಣೆ ನಡೆಸುವ ವಿವಿಧ ಅರ್ಜಿಪಾರಂ ಗಳನ್ನು ಕನ್ನಡದಲ್ಲೂ ಒದಗಿಸುವಂತೆ, ಫಲಕಗಳನ್ನು ಕನ್ನಡದಲ್ಲಿ ಲಗತ್ತಿಸುವಂತೆ ಸಭೆ ಆದೇಶಿಸಿದೆ. ಈ ಎಲ್ಲ ವಿಚಾರಗಳನ್ನು ರಾಜ್ಯಸರಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಹವಾಲು ಸ್ವೀಕಾರ ನಡೆಸಿದ ಭಾಷಾಅಲ್ಪಸಂಖ್ಯಾತರ ಸಮಿತಿಯ ವಿಶೇಷ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು ಈಗಾಗಲೇ ರಾಜ್ಯ ಸರಕಾರಕ್ಕೆ ಈ ಸಂಬಮಧವರದಿಗಳನ್ನು ಸಲ್ಲಿಸಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ತಿಳಿಸಿದರು.
          ಸಭೆಯಲ್ಲಿ ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್, ಕಂದಾಯ ಇಲಾಖೆ ಸಿಬ್ಬಂದಿ ಸುರೇಶ್ ಮಣಿಯಾಣಿ, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries