HEALTH TIPS

ಕಾಸರಗೋಡು ಬ್ಲಾಕ್ ಪಂಚಾಯತಿ ಲೈಫ್ ಮಿಷನ್ ಯೋಜನೆ: ಕನಸು ನನಸಾಗಿಸಿಕೊಂಡವರು 792 ಕುಟುಂಬಗಳು

   
            ಕಾಸರಗೋಡು: ಕಾಸರಗೋಡು ಬ್ಲಾಕ್ ಪಂಚಾಯತ್ ನ ಲೈಫ್ ಮಿಷನ್ ಯೋಜನೆಯ ಮೂಲಕ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಂಡವು 792 ಕುಟುಂಬಗಳು.
         ಬ್ಲಾಕ್ ಪಂಚಾಯತ್ನ ಪಟ್ಟಿಯಲ್ಲಿ ಸೇರಿದ 248 ಮಂದಿಯಲ್ಲಿ 238 ಮಂದಿಯ ಮನೆಗಳ  ನಿರ್ಮಾಣ ಪೂರ್ತಿಗೊಂಡಿದೆ. ಬದಿಯಡ್ಕ ಗ್ರಾಮಪಂಚಾಯತ್ ನಲ್ಲಿ 64 ಮನೆಗಳು, ಚೆಮ್ನಾಡಿನಲ್ಲಿ 81, ಚೆಂಗಳದಲ್ಲಿ 128, ಕುಂಬಳೆಯಲ್ಲಿ 89, ಮಧೂರಿನಲ್ಲಿ 69, ಮೊಗ್ರಾಲ್ ಪುತ್ತೂರಿನಲ್ಲಿ 35 ಮನೆಗಳು ಪೂರ್ಣಗೊಂಡಿವೆ. ಪರಿಶ್ವ?ಟ ಜಾತಿ ವಿಭಾಗದಲ್ಲಿ 18, ಪರಿಶಿಷ್ಟ ಪಂಗಡ ವಿಭಾಗದಲ್ಲಿ 4, ಮೀನುಗಾರರ ವಿಭಾಗದಲ್ಲಿ 9, ಅಲ್ಪಸಂಖ್ಯತರ ವಿಭಾಗದಲ್ಲಿ 55 ಮನೆಗಳು ನಿರ್ಮಾಣಗೊಂಡಿವೆ.
       ಇದಲ್ಲದೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು, ಪಿ.ಎಂ.ವೈ. ಗ್ರಾಮೀಣ ಯೋಜನೆಯಲ್ಲಿ 55 ಮನೆಗಳು ನಿರ್ಮಾಣವಾಗಿವೆ. ಲೈಫ್ ಮಿಷನ್ ಯೋಜನೆಯ ಮೊದಲ ಹಂತದಲ್ಲಿ 360 ಮನೆಗಳು, ಎರಡನೇ ಹಂತದಲ್ಲಿ 432 ಮನೆಗಳು ನಿರ್ಮಾಣ ಪೂರ್ಣಗೊಳಿಸಿವೆ. ಉಳಿದ ಮನೆಗಳ ನಿರ್ಮಾಣ ತ್ವರಿತ ಗತಿಯಲ್ಲಿ ನಡೆಯುತ್ತಿವೆ. 2017 ನವೆಂಬರ್ ತಿಂಗಳಲ್ಲಿ ಯೋಜನೆ ಮೊದಲ ಹಂತದ ನಿರ್ಮಾಣ ಆರಂಭಿಸಲಾಗಿತ್ತು. ಎರಡನೇ ಹಂತದ ನಿರ್ಮಾಣ 2018ರಲ್ಲಿ ಜಾಗವಿದ್ದು, ಮನೆಯಲ್ಲಿದ
      ಮಂದಿಗಾಗಿ ವಸತಿನಿರ್ಮಾಣ ಆರಂಭಿಸಲಾಗಿತ್ತು. ಮೂರನೇ ಹಂತದಲ್ಲಿ ಜಾಗ, ವಸತಿ ಇಲ್ಲದವರಿಗಾಗಿ ಮನೆ ನಿರ್ಮಿಸಲಾಗುವುದು. 
    ಕಡಿಮೆ ಬೆಲೆಯೊಂದಿಗೆ ಮನೆ ನಿರ್ಮಾನ ಸಾಮಾಗ್ರಿಗಳನ್ನು ಒದಗಿಸುವ ಕ್ರಮವನ್ನೂ ಈ ನಿಟ್ಟಿನಲ್ಲಿ ನಡೆಸಲಾಗುತ್ತಿದೆ. ಸಿಮೆಂಟ್,ಪೆಯಿಂಟ್, ಪೈಪ್, ವಿದ್ಯುನ್ಮಾನ ಸಾಮಾಗ್ರಿಗಳು  ಇತ್ಯಾದಿಗಳನ್ನು ಲೈಫ್ ಮಿಷನ್ ಯೋಜನೆ ಮೂಲಕ ನೀಡಲಾಗುತ್ತದೆ.
      ಕುಟುಂಬ ಸಂಗಮದ ಜೊತೆಗೆ ಅದಾಲತ್:
     ಲೈಫ್ ಮಿಷನ್ ಯೋಜನೆ ಪ್ರಕಾರ ಮನೆ ಮಾತ್ರ ನೀಡಿ ಕೈ ತೊಳೆದುಕೊಳ್ಳುವುದಲ್ಲ, ಫಲಾನುಭವಿಗಳಿಗೆ ಈ ಸಂಬಂಧ ಎಲ್ಲ ಸೇವೆಗಳನ್ನೂ ಖಚಿತಗೊಳಿಸುವ ನಿಟ್ಟಿನಲ್ಲಿ ಕುಟುಂಬ ಸಮಗಮದ ಜೊತೆಗೆ ಅದಾಲತ್ ನಡೆಸಲಾಗುತ್ತಿದೆ.
     ವಿವಿಧ ಇಲಾಖೆಗಳ 18 ಸ್ಟಾಲ್ ಗಳು ಈ ನಿಟ್ಟಿನಲ್ಲಿ ಅದಾಲತ್ ನಡೆಸುವ ವಿವಿಧೆಡೆ ನಿರ್ಮಿಸಲಾಗುತ್ತಿದೆ. ಆರ್ಥಿಕ ಸೇವೆ ಸಹಿತ ಎಲ್ಲ ಸಮಾಜ ಕಲ್ಯಾಣಯೋಜನೆಗಳ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಟಾಲ್ ಗಳು ಇರುವುವು. ಪಡಿತರ ಚೀಟಿ, ವಿವಿಧ ಕಲ್ಯಾಣ ಪಿಂಚನಿಗಳು, ಸ್ವ ಉದ್ಯೋಗ ಯೋಜನೆ, ಆಧಾರ್, ಗುರುತು ಚೀಟಿಗಳು, ನೌಕರಿ ಕಾರ್ಡ್, ಘಟಕಗಳ ಆರಂಭ, ಭೂ ಸಂಬಂಧಿ ದಾಖಲೆಗಳು, ಆರೋಗ್ಯ ಸಹಿತ  ವಿಭಾಗಗಳ ಸ್ಟಾಲ್ ಇರುತ್ತವೆ. ಗರಿಷ್ಠ ಪ್ರಮಾಣದಲ್ಲಿ ಆಯಾ ಕಡೆಗಳಲ್ಲೇ ಪರಿಹಾರವನ್ನೂ ಒದಗಿಸಲಾಗುತ್ತದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries