ಕಾಸರಗೋಡು: ಲೈಫ್ ಮಿಷನ್ ಯೋಜನೆ ಮೂಲಕ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಿಕೊಂಡವರ ಕುಟುಂಬಸಂಗಮ ಕಾರ್ಯಕ್ರಮ ಬುಧವಾರ ಕಾಸರಗೋಡು ಪುರಭವನದಲ್ಲಿ ನಡೆಯಿತು.
ಕಾಸರಗೋಡು ಬ್ಲಾಕ್ ಪಂಚಾಯತ್ ವತಿಯಿಂದ ಕುಟುಂಬ ಸಂಗಮದ ಜೊತೆಗೆ ಅದಾಲತ್ ಕೂಡ ಜರುಗಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂಞÂ ಚಾಯಿಂದಡಿ ಅಧ್ಯಕ್ಷತೆ ವಹಿಸಿದ್ದರು. ಲೈಫ್ ಮಿಷನ್ ಯೋಜನೆಯ ನಿರ್ವಹಣೆ ಸಿಬ್ಬಂದಿಯನ್ನು ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಅಭಿನಂದಿಸಿದರು. ಫಲಾನುಭವಿಗಳಿಗೆ ಕೀಲಿಕೈ ವಿತರನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ನಡೆಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿದ್ದರು. ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಹಲೀಮ ಷೀನೂರ್, ವಿವಿಧ ಗ್ರಾಮಪಂಚಾಯತ್ ಗಳ ಅಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್,ಕೆ.ಎನ್.ಪುಂಡರೀಕಾಕ್ಷ, ಕಲ್ಲಟ್ರ ಅಬ್ದುಲ್ ಖಾದರ್, ಸದಸ್ಯರಾದ ಸತ್ಯಶಂಕರ ಭಟ್,ಪ್ರಾಶಂಕರ ಮೊದಲಾದವರು ಉಪಸ್ಥಿತರಿದ್ದರು.


