HEALTH TIPS

ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶದ ಪಟ್ಟಿಗೆ ಸೇರಿಸುವಂತೆ ತುಳು ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿ


         ಕಾಸರಗೋಡು:  ಮಂಜೇಶ್ವರ ತಾಲೂಕನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಕೇರಳ ತುಳು ಅಕಾಡೆಮಿ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
       ಜಿಲ್ಲಾಧಿಕಾರಿ ಛೇಂಬರ್ ನಲ್ಲಿ ಬುಧವಾರ ಈ ಸಂಬಂಧ ನಡೆದ ಸಭೆಯಲ್ಲಿ ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಮನವಿ ಹಸ್ತಾಂತರಿಸಿದರು. ಈ ಹಿಂದೆ ಕಾಸರಗೋಡು ತಾಲೂಕಿನ ಭಾಗವಿದ್ದ ಈ ಪ್ರದೇಶ ಭಾಷಾ ಅಲ್ಪಸಂಖ್ಯಾತ ಪಟ್ಟಿಯಲ್ಲಿ ಸೇರಿತ್ತು. ನಂತರ ಸ್ವಂತಂತ್ರ ತಾಲೂಕು ಆಗಿ ಪರಿವರ್ತನೆಗೊಂಡ ವೇಳೆ ಈ ಪಟ್ಟಿಯಲ್ಲಿ ಸೇರದೇ ಇದ್ದ ಕಾರಣ ಕರ್ನಾಟಕದಲ್ಲಿ ಉನ್ನತ ಶಿಕ್ಷಣ  ಬಯಸುವ ವಿದ್ಯಾರ್ಥಿಗಳಿಗೆ ಸಹಿತ ಸಾರ್ವಜನಿಕರಿಗೆ ವಿವಿಧ ಕಾರಣಗಳಿಂದ ಸಮಸ್ಯೆಯಾಗುತ್ತಿದೆ ಎಂದು ಉಮೇಶ್ ಎಂ.ಸಾಲ್ಯಾನ್ ಮನವಿಯಲ್ಲಿ ತಿಳಿಸಿದ್ದಾರೆ. ಅಕಾಡೆಮಿ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್ ಜೊತೆಗಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries