ಬದಿಯಡ್ಕ: ಚಿನ್ಮಯ ಮಿಶನ್ ನೇತೃತ್ವದಲ್ಲಿ ಇತ್ತೀಚೆಗೆ ತೃಶೂರಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯ ಎಳೆಯರ ವಿಭಾಗದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದ ಒಂದನೇ ತರಗತಿಯ ಪುಟಾಣಿ ವಿದ್ಯಾರ್ಥಿನಿ ಸಂವೃತಾ ಭಟ್ ಪೇರಿಯ ಪ್ರಥಮ ಸ್ಥಾನಗಳಿಸಿ ಹತ್ತು ಸಾವಿರ ರೂ. ನಗದು ಬಹುಮಾನ ಪುರಸ್ಕಾರ ಪಡೆದುಕೊಂಡಳು.
ರಾಜ್ಯದ ಎಲ್ಲಾ 14 ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳು ಅಂತಿಮ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪೇರಿಯದ ಗಣೇಶ್ ಭಟ್-ಸ್ವಾತಿ ದಂಪತಿಗಳ ಸುಪುತ್ರಿಯಾದ ಸಂಮೃತಾಳಿಗೆ ಚಿನ್ಮಯ ಮಿಶನ್ ರಾಜ್ಯ ಪ್ರಧಾನರಾದ ಶ್ರೀವಿವಿಕ್ತಾನಂದ ಸರಸ್ವತಿ ನಗದು ಪುರಸ್ಕಾರ ಸಹಿತ ಪ್ರಮಾಣ ಪತ್ರ ವಿತರಿಸಿದರು.





