ಬದಿಯಡ್ಕ: ಕೇರಳ ರಾಜ್ಯ ಸೇವಾ ಪಿಂಚಣಿದಾರರ ಸಂಘಟನೆಯ ಬದಿಯಡ್ಕ ಘಟಕದ ಆಶ್ರಯದಲ್ಲಿ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಪರಿಸರದಲ್ಲಿ ಇತ್ತೀಚೆಗೆ ಕುಟುಂಬ ಮೇಳ ಜರಗಿತು.
ಘಟಕದ ಅಧ್ಯಕ್ಷ ಎನ್.ಸುಬ್ರಾಯ ಭಟ್ ಅಧ್ಯಕ್ಷತೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕುಂಞಂಬು ನಾಯರ್ ಉದ್ಘಾಟಿಸಿದರು. ಡಿ.ರಾಮಕೃಷ್ಣ ಭಟ್, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಡಿ.ಕೃಷ್ಣ ಭಟ್ ಮೊದಲಾದವರು ಶುಭಹಾರೈಸಿದರು. ಹಿರಿಯ ಸದಸ್ಯರಾದ ಎನ್.ಕೃಷ್ಣ ಭಟ್, ವಿ.ಜಿ.ಮುರಹರಿ, ರೋಸಿ ಡಿ'ಸೋಜಾ, ಎಂ.ಮಹಾಲಿಂಗ ನಾೈಕ್, ಎಸ್.ಸಂಕಪ್ಪ ಪೂಜಾರಿ, ಯು.ಶಿವ ನಾೈಕ್, ವೈ.ಕೃಷ್ಣ ಅವರನ್ನು ಗೌರವಿಸಲಾಯಿತು. ಘಟಕದ ಕಾರ್ಯದರ್ಶಿ ಶಿವ ಕುಮಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಗೋಪಿ ಟೀಚರ್ ವಂದಿಸಿದರು.




