ಕಾಸರಗೋಡು: ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಕಣ್ಣಿರಿಸಿರುವ ಇಬ್ಬರು ರಾಜಕೀಯ ಮುಖಂಡರು ಮತಗಳಿಕೆಯ ಏಕ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಮೂಡಿಸಿ ಅವರನ್ನು ಬೀದಿಗಿಳಿದು ಹೋರಾಟಕ್ಕೆ ಪ್ರೇರೇಪಿಸುತ್ತಿರುವುದಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
ಅವರು ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ದೇಶದ್ರೋಹಿಗಳು ನಡೆಸಿಕೊಂಡು ಬರುತ್ತಿರುವ ಸುಳ್ಳು ಪ್ರಚಾರ ಮತ್ತು ಸಿಪಿಎಂ ನಡೆಸುತ್ತಿರುವ ಆಕ್ರಮಣಗಳ ವಿರುದ್ಧ ನೀಲೇಶ್ವರದಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುರ್ಚಿ ಉಳಿಸಿಕೊಳ್ಳಲು ತಿಣುಕಾಡುತ್ತಿದ್ದರೆ, ಪ್ರತಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಮುಖ್ಯಮಂತ್ರಿ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಮುಸ್ಲಿಂ ಸಮುದಾಯದ ಓಟ್ ಬ್ಯಾಂಕ್ ನಿರ್ಮಾಣಕ್ಕಾಗಿ, ತಮ್ಮನ್ನು ಅಲ್ಪಸಂಖ್ಯಾತರ ಸಂರಕ್ಷಕರೆಂದು ಚಿತ್ರೀಕರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಸಮುದಾಯವನ್ನು ಎತ್ತಿಕಟ್ಟುವ ಯತ್ನಕ್ಕೆ ಇಬ್ಬರೂ ಮುಖಂಡರು ಯತ್ನಿಸುತ್ತಿದ್ದಾರೆ. ಇಂತಹ ಕುಟಿಲ ನೀತಿಯನ್ನು ಮುಸ್ಲಿಂ ಸಮುದಾಯ ಅರಿತುಕೊಳ್ಳಬೇಕಾಗಿದೆ. ಈ ಇಬ್ಬರೂ ಮುಖಂಡರ ಹಗ್ಗಜಗ್ಗಾಟದ ಮಧ್ಯೆ ಮುಸ್ಲಿಂಸಮುದಾಯ ಸಿಲುಕಬಾರದು. ಪೌರತ್ವ ತಿದ್ದುಪಡಿ ಕಾನೂನು ಮುಸ್ಲಿಂ ಸಮುದಾಯದ ಹಕ್ಕು ಕಸಿದುಕೊಳ್ಳಲಿರುವ ಕಾನೂನಲ್ಲ, ಬದಲಾಗಿ ಮುಸ್ಲಿಂ ಸಮುದಾಯದ ಸಂರಕ್ಷಣೆಗಾಗಿ ರಚಿಸಲಾಗಿದೆ ಎಂದು ತಿಳಿಸಿದರು. ಎನ್‍ಆರ್‍ಸಿ ಹಾಗೂಎನ್‍ಪಿಆರ್ ಕಾಯ್ದೆ ಜಾರಿಗೆ ಅಡಿಪಾಯಹಾಕಿರುವ ಕಾಂಗ್ರೆಸ್ ಇಂದು ಇದರ ವಿರುದ್ಧ ಹೋರಾಟ ನಡೆಸುತ್ತಿರುವುದು ಅದರ ನೈತಿಕ ಅಧ:ಪತನವನ್ನು ಸೂಚಿಸುತ್ತಿದೆ. ಸಾಂಸ್ಕøತಿಕ ಹಿನ್ನೆಲೆಯುಳ್ಳ ನೀಲೇಶ್ವರದಲ್ಲಿ ಸಿಪಿಎಂ ತನ್ನ ಅಸಹಿಷ್ಣುತೆಯನ್ನು ತೋರಿಸುತ್ತಿದೆ. ಇದರ ಫಲವಾಗಿ ಆರೆಸ್ಸೆಸ್ ಪಥಸಂಚಲನದ ಸಂದರ್ಭ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮಿಳಾ ಸಿ.ನಾಯ್ಕ್, ಉತ್ತರವಲಯ ಕಾರ್ಯದರ್ಶಿ ವಿ.ವಿ ರಾಜನ್, ಪಿ.ಸುರೇಶ್ ಕುಮಾರ್ ಶೆಟ್ಟಿ, ರವೀಶ್ ತಂತ್ರಿ ಕುಂಟಾರ್, ಕೊವ್ವಲ್ ದಾಮೋದರನ್, ಶಿವಕೃಷ್ಣ ಭಟ್, ಕುಞÂರಾಂನ್ ತೃಕ್ಕರಿಪುರ್, ಎ.ವೇಲಾಯುಧನ್, ವಕೀಲ ಸದಾನಂದ ರೈ, ಪಿ.ರಮೇಶ್, ಮಣಿಕಂಠ ರೈ ಮುಂತಾದವರು ಉಪಸ್ಥಿತರಿದ್ದರು.




