ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಕೇರಳ ರಾಜ್ಯ ಏಳನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವ ಜನವರಿ 30ಹಾಗೂ 31ರಂದು ಕಾಸರಗೋಡು ಪಾರೆಕಟ್ಟ ಕನ್ನಡಗ್ರಾಮದಲ್ಲಿ ಜರುಗಲಿದ್ದು, ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ಪಾರೆಕಟ್ಟ ಕನ್ನಡಗ್ರಾಮದಲ್ಲಿ ಜರುಗಿತು.
ಸಮಾರಂಭದಲ್ಲಿ ಆಮಂತ್ರಣಪತ್ರಿಕೆಯನ್ನು ಉದ್ಯಮಿ ನಿರಂಜನ ಕೊರಕ್ಕೋಡು ಅವರಿಗೆ ಹಸ್ತಾಂತರಿಸುವ ಮೂಲಕ ಮಧೂರು ಗ್ರಾಪಂ ಅಧ್ಯಕ್ಷೆ ಮಾಲತಿಸುರೇಶ್ ಬಿಡುಗಡೆಗೊಳಿಸಿದರು. ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ಮಾಧವ ಮಾಸ್ಟರ್, ಪುರುಷೋತ್ತಮ ಎಂ. ನಾಯ್ಕ್, ದಯಾನಂದ ಬೆಳ್ಳೂರಡ್ಕ, ಶಿಕ್ಷಕ ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.
ಹುಬ್ಬಳ್ಳಿಯಲ್ಲಿ ಪ್ರಚಾರ:
ಕಾಸರಗೋಡಿನಲ್ಲಿ ಜ. 30ಹಾಗೂ 31ರಂದು ನಡೆಯಲಿರುವ ಕೇರಳ ರಾಜ್ಯ ಏಳನೇ ಕನ್ನಡ ಸಮ್ಮೇಳನ, ಕೇರಳ-ಕರ್ನಾಟಕ ಉತ್ಸವದ ಪ್ರಚಾರಕ್ಕೆ ಹುಬ್ಬಳ್ಳಿಯ ಕಪಿಲಾ ನಿವಾಸದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರೇಣುಕಾ ಎಸ್. ಆವಾಜಿ ಅವರಿಗೆ ಆಮಂತ್ರಣಪತ್ರಿಕೆ ಹಸ್ತಾಂತರಿಸುವ ಮೂಲಕ ಕಾಸರಗೋಡು ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮದ ರೂಪುರೇಷೆ ನೀಡಿದರು.
ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಪುರುಷೋತ್ತಮ ಎಂ. ನಾಯ್ಕ್, ಗಡಿನಾಡಕಲಾವಿದರ ಬಳಗ ಕಾರ್ಯದರ್ಶಿ ದಿವಾಕರ ಕಾಸರಗೋಡು, ಕೋಶಾಧಿಕಾರಿ ಶ್ರೀಕಾಂತ್ ಕಾಸರಗೋಡು, ಸದಸ್ಯ ರಾಜೇಂದ್ರ ಕೆ.ಎನ್, ಯೋಗೀಶ್ ಕೋಟೆಕಣಿ, ದಯಾನಂದ ಬೆಳ್ಳೂರಡ್ಕ, ಸತ್ಯನಾರಾಯಣ, ಪ್ರಶಾಂತ್, ಭರತ್‍ರಾಜ್ ಸುರತ್ಕಲ್, ಧಾರವಾಡ ಜಿಲ್ಲಾ ವಾಣಿಜ್ಯೋದ್ಯಮಿ ಸಂಘ ಅಧ್ಯಕ್ಷ, ಉದ್ಯಮಿ ಸೋಮೇಶ್ವರ ಗುರುಲಿಂಗ ಆವಾಜಿ, ಕಪಿಲಾನಿವಾಸದ ಸಚಿನ್, ಮಹಾಲಕ್ಷ್ಮೀ ಉಪಸ್ಥಿತರಿದ್ದರು.




