ಕಾಸರಗೋಡು: ಮತದಾತರ ಪಟ್ಟಿಯಲ್ಲಿ ಟ್ರಾನ್ಸ್ ಜೆಂಡರ್ ಗಳ ಹೆಸರು ಸೇರ್ಪಡೆಗೊಳಿಸಲುವ ನಿಟ್ಟಿನಲ್ಲಿ ಅವಕಾಶ ನೀಡಲಾಗಿದ್ದು, ಈ ಸಂಬಂಧ ಶಿಬಿರ ಜ.15ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ವಿಶೇಷ ಮತದಾತರ ಪಟ್ಟಿ ನವೀಕರಣ-2020 ಸಂಬಂಧ ಜಿಲ್ಲೆಯಲ್ಲಿ ಟ್ರಾನ್ಸ್ ಜೆಂಡರ್ ಗಳ ಪಟ್ಟಿಯಲ್ಲಿ ಸೇರಿರುವವರ ಹೆಸರು ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು. 15ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ವಿಶೇಷ ಶಿಬಿರ ಜರುಗಲಿದ್ದು, ಜನನ ದಿನಾಂಕ ದಾಖಲೆ, ಪಾಸ್ ಪೆÇೀರ್ಟ್ ಗಾತ್ರದ ಫೆÇಟೋ, ಹಿಂದೆ ಮತದಾನ ನೀಡಿದ್ದರೆ ಈ ಸಂಬಂಧ ಹೊಂದಿರುವ ದಾಖಲಾತಿ, ಜತೆಗೆ ವಾಸವಾಗಿರುವ ಯಾ ನೆರೆಮನೆಯ ಮತದಾತರಲ್ಲಿ ಯಾರಾದರೊಬ್ಬರ ಗುರುತು ಚೀಟಿ ಇತ್ಯಾದಿ ಹಾಜರುಪಡಿಸಬೇಕು. ಜಿಲ್ಲೆಯ ಎಲ್ಲ ಟ್ರಾನ್ಸ್ ಜೆಂಡರ್ ಗಳೂ ಈ ಅವಕಾಶವನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಪಡಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಟ್ರಾನ್ಸ್ ಜೆಂಡರ್ ಗಳ ಹೆಸರು ಮತದಾತರ ಪಟ್ಟಿಯಲ್ಲಿ ಸೇರ್ಪಡೆ: 15ರಂದು ಶಿಬಿರ
0
ಜನವರಿ 13, 2020