ಕಾಸರಗೋಡು: ರಾಜ್ಯ ಅಬಕಾರಿ ಇಲಾಖೆ, ವಿಮುಕ್ತಿ ಮಾದಕ ಪದಾರ್ಥ ವಿರುದ್ಧ ಮಿಷನ್ ವತಿಯಿಂದ "ನಾಳಿನ ಕೇರಳ ಮಾದಕಪದಾರ್ಥ ಮುಕ್ತ ನವಕೇರಳ" ಎಂಬ ಸಂದೇಶದೊಂದಿಗೆ ನಡೆಸಲಾಗುವ ತೀವ್ರಯಜ್ಞ ಜನಜಗೃತಿ ಕಾರ್ಯಕ್ರಮದ ಅಂಗವಾಗಿ ಸಹಿ ಅಭಿಯಾನ ಮತ್ತು ಜನಜಾಗೃತಿ ವಾಹನಪ್ರಚಾರ ಪರ್ಯಟನೆಯ ಜಿಲ್ಲಾ ಮಟ್ಟದ ಆರಂಭ ಇಂದು (ಜ.14) ನಡೆಯಲಿದೆ. 2019 ಡಿ.4ರಂದು ತಿರುವನಂತಪುರಂ ನಲ್ಲಿ ಉದ್ಯೋಗ ಸಚಿವ ಟಿ.ಪಿ.ರಾಮಕೃಷ್ಣನ್ ಹಸುರು ನಿಶಾನೆ ತೋರಿದ ಪ್ರಚಾರ ವಾಹನ 13 ಜಿಲ್ಲೆಗಳಲ್ಲಿ ಪರ್ಯಟನೆ ನಡೆಸಿ ಜಿಲ್ಲೆಗೆ ಆಗಮಿಸಲಿದೆ. ಇಂದು ಬೆಳಗ್ಗೆ 10 ಗಂಟೆಗೆ ಚೆರುವತ್ತೂರು ಬಸ್ ನಿಲ್ದಾಣ ಬಳಿ, 11 ಗಂಟೆಗೆ ನೀಲೇಶ್ವರ ಬಸ್ ನಿಲ್ದಾಣಬಳಿ, ಮಧ್ಯಾಹ್ನ 12 ಗಂಟೆಗೆ ಪಡನ್ನಕ್ಕಾಡ್ ನೆಹರೂ ಕಾಲೇಜು ಆವರಣದಲ್ಲಿ, 2 ಗಂಟೆಗೆ ಕಾಞಂಗಾಡ್ ನೂತನ ಬಸ್ ನಿಲ್ದಾಣ ಆವರಣದಲ್ಲಿ, 2.40ಕ್ಕೆ ಅಜಾನೂರು ಇಕ್ಬಾಲ್ ಶಾಲೆಯಲ್ಲಿ ಪರ್ಯಟನೆ ನಡೆಯಲಿವೆ.
ನಾಳೆ(ಜ.15) ಬೆಳಗ್ಗೆ 9.30ಕ್ಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ, 11.30ಕ್ಕೆ ಉಪ್ಪಳದಲ್ಲಿ, ಮಧ್ಯಾಹ್ನ 2 ಗಂಟೆಗೆ ಕುಂಬಳೆಯಲ್ಲಿ ವಾಹನ ಪರ್ಯಟನೆ ನಡೆಯಲಿದೆ. ಸಂಜೆ 4 ಗಂಟೆಗೆ ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ಪ್ರಚಾರ ಪರ್ಯಟನೆಯ ರಾಜ್ಯ ಮಟ್ಟದ ಸಮಾರೋಪ ನಡೆಯಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸುವರು.



