ಕಾಸರಗೋಡು: ಜಿಲ್ಲಾ ಪಂಚಾಯತ್ ನ 2020-21ನೇ ವಾರ್ಷಿಕ ಯೋಜನೆಗೆ 84.38 ರೂ.ನ ಬಜೆಟ್ ಮೊಬಲಗು ಮೀಸಲಿರಿಸಲಾಗಿದೆ. ಸಾಮಾನ್ಯ ವಿಭಾಗಕ್ಕೆ 29.56 ಕೋಟಿ ರೂ., ಪರಿಶಿಷ್ಟ ಜಾತಿ ವಿಭಾಗಕ್ಕೆ 4.17 ಕೋಟಿ ರೂ., ಪರಿಶಿಷ್ಟ ಪಂಗಡ ವಿಭಾಗಕ್ಕೆ 3.87 ಕೋಟಿ ರೂ. ವೆಚ್ಚಮಾಡಲಾಗುವುದು ಎಂದು ತಿಳಿಸಲಾಗಿದೆ. ರಸ್ತೆ ದುರಸ್ತಿಗೆ 4.17 ಕೋಟಿ ರೂ.,ರಸ್ತೆಯೇತರ ದುರಸ್ತಿಗೆ 5.67 ಕೋಟಿ ರೂ. ವೆಚ್ಚಮಾಡಲಾಗುವುದು.
ಜಿಲ್ಲಾ ಪಂಚಾಯತ್ ಹದಿಮೂರನೇ ಪಂಚವಾರ್ಷಿಕ ಯೋಜನೆ(2017-2022) ವಾರ್ಷಿಕ ಯೋಜನೆ ರಚನೆಯ ಪೂರ್ವಭಾವಿಯಾಗಿ ವಕಿರ್ಂಗ್ ಗ್ರೂಪ್ ಮಹಾಸಭೆ ನಡೆಯಿತು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು.
ವಕಿರ್ಂಗ್ ಗ್ರೂಪ್ ಮಹಾಸಭೆಯಲ್ಲಿ ಮೂಡಿಬರುವ ಸಲಹೆಗಳನ್ನು ವಿವಿಧ ಹಂತಗಳಲ್ಲಿ ಕರಡು ರೂಪುರೇಷೆಯಲ್ಲಿ, ನಂತರ ವರ್ಷಿಕ ಯೋಜನೆಯಲ್ಲಿ ಅಳವಡಿಸಲಾಗುವುದು. ಸಭೆಯಲ್ಲಿ ಭಾಗವಹಿಸಿದ ವಕಿರ್ಂಗ್ ಗ್ರೂಪ್ ಸದಸ್ಯರು 15 ಮಂದಿಗಳಾಗಿ ವಿಂಗಡಿಸಿ ನೂತನ ಯೋಜನೆ-ಅಭಿವೃದ್ಧಿ ಸಲಹೆಗಳನ್ನು ಮಂಡಿಸಿದ್ದಾರೆ. ಆಡಳಿತೆ, ಆರ್ಥಿಕ, ಕೃಷಿ, ಮೀನುಗಾರಿಕೆ, ಪಶುಸಂಗೋಪನೆ-ಹೈನುಗಾರಿಕೆ, ಸ್ಥಳೀಯ ಹಣಕಾಸು ಅಭಿವೃದ್ಧಿ-ಸಹಕಾರ, ಬಡತನ ನಿವಾರಣೆ, ಸಮಾಜನೀತಿ, ಮಹಿಳಾ ಅಭಿವೃದ್ಧಿ, ಪರಿಶಿಷ್ಟ ಜಾತಿ ಅಭಿವೃದ್ಧಿ, ಪರಿಶಿಷ್ಟ ಪಂಗಡ ಅಭಿವೃದ್ಧಿ, ಆರೋಗ್ಯ, ಕುಡಿಯುವ ನೀರು, ಶುಚಿತ್ವ, ಶಿಕ್ಷಣ, ಕಲಾ-ಸಾಂಸ್ಕøತಿಕ-ಯುವನ ಕಲ್ಯಾ, ಲೋಕೋಪಯೋಗಿ, ದುರಂತ ನಿವಾರಣೆ ಹೀಗೆ ಒಟ್ಟು 15 ಗುಂಪುಗಳಾಗಿ ಚರ್ಚೆಗಳು ನಡೆದುವು.
ಬಜೆಟ್ ನಲಲಿ ಶೇ 30 ಉತ್ಪದನೆ ವಲಯಕ್ಕೆ, ಶುಚಿತ್ವ-ತ್ಯಾಜ್ಯ ಸಂಸ್ಕರಣೆಯಲ್ಲಿ ಶೇ 10, ಮಹಿಳಾ ಘಟಕ ಯೋಜನೆಗಳಿಗೆ ಶೇ 10, ಮಕ್ಕಳ, ವಿಶೇಷಚೇತನರ , ಮಂಗಳಮುಖಿಯರ ವಲಯಕ್ಕೆ ಶೇ 5, ವೃದ್ಧರ ವಲಯಕ್ಕೆ (ಪಾಲಿಯೇಟಿವ್ ಕೇರ್ ಸಹಿತ) ಶೇ 5, ಲೈಫ್, ಪಿ.ಎಂ.ವೈ. ಸಹಿತ ವಸತಿ ವಲಯಕ್ಕೆ ಶೇ 20 ಮೀಸಲಿರಿಸಲಾಗುವುದು.
ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಸ್ಥಾಪಿಸಲಾದ 385 ಕಿಲೋ ವ್ಯಾಟ್ ಸೋಲಾರ್ ಯೋಜನೆಯ ದಾಖಲೆಗಳನ್ನು ಸಭೆಯಲ್ಲಿ ಸಂಬಂಧಪಟ್ಟ ಸಂಸ್ಥೇಯ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಆಸ್ಪತ್ರೆ, ಜಿಲ್ಲಾಆಯುರ್ವೇದ ಆಸ್ಪತ್ರೆ, ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕೆಂಡರಿ ಸಾಲೆ, ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಚಂದ್ರಗಿರಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸೋಲಾರ್ ಯೋಜನೆ ಜಾರಿಗೊಳಿಸಲಾಗಿದೆ. ಕೆ.ಎಸ್.ಇ.ಬಿ.ಗಾಗಿ ಇನ್ ಕೇರ್ ಸಂಸ್ಥೆ ಯೋಜನೆಯ ಇರ್ವಹಣೆ ನಡೆಸಿದೆ.
ಸಭೆಯಲ್ಲಿ ವಕಿರ್ಂಗ್ ಗ್ರೂಪ್ ಸದಸ್ಯರಾದ ಜಿಲ್ಲಾ ಪಂಚಾಯತ್ ಸದಸ್ಯರು, ಬ್ಲೋಕ್ ಪಂಚಾಯತ್ ಅಧ್ಯಕ್ಷರು, ಜನಪ್ರತಿನಿಧಿಗಳು, ಸಾರ್ವಜನಿಕ ವಲಯದ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು.




