ಕಾಸರಗೋಡು: ಗಡಿನಾಡು ಕಾಸರಗೋಡಿನ ಸಾಹಿತ್ತಿಕ, ಸಾಂಸ್ಕøತಿಕ, ಸಾಮಾಜಿಕ ವ್ಯವಸ್ಥೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹೊರಡಿಸಲಾಗುವ ನೂತನ ಮಾಸಪತ್ರಿಕೆ ನೇಸರಕ್ಕೆ ಇಂದು(ಶುಕ್ರವಾರ) ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ಚಾಲನೆ ನೀಡಿ ಆಶೀರ್ವದಿಸುವರು.
ಬೆಳಿಗ್ಗೆ 9.45ಕ್ಕೆ ಶ್ರೀಮಠದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಎಡನೀರು ಶ್ರೀಗಳು ನೇಸರ ಪತ್ರಿಕೆಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸುವರು. ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ಸಾಹಿತಿ, ಕಾರ್ಟೂನ್ ಕಲಾವಿದ ವೆಂಕಟ್ ಭಟ್ ಎಡನೀರು, ಮಾಸಪತ್ರಿಕೆಯ ಗೌರವ ಸಂಪಾದಕ ವಿರಾಜ್ ಅಡೂರು, ಕಾರ್ಯನಿರ್ವಾಹಕ ಆರ್.ಸಿ.ಬಲ್ಲಾಳ್, ಸಂಪಾದಕ ಪುರುಷೋತ್ತಮ ಭಟ್, ಮೊದಲಾದವರು ಉಪಸ್ಥಿತರಿರುವರು.





