ಪೆರ್ಲ: ಗ್ರಾಮೀಣ ಪರದೇಶದಲ್ಲಿರುವ ಪೆರ್ಲ ನಾಲಂದ ಮಹಾ ವಿದ್ಯಾಲಯ ವತಿಯಿಂದ ಫೆಬ್ರವರಿ 8ರಂದು ಬೃಹತ್ ಕೃಷಿ ಮೇಳ ಆಯೋಜಿಸುತ್ತಿದ್ದು, ಈ ಸಂಬಂಧ ಸಮಾಲೋಚನಾ ಸಭೆ ಜನವರಿ 11ರಂದು ಮಧ್ಯಾಃನ 3ಕ್ಕೆ ಕಾಲೇಜಿನಲ್ಲಿ ಜರುಗಲಿದೆ.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಸಂಸ್ಥೆ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕಿನ ಕೃಷಿಕರು ಮತ್ತು ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಂಡು, ಇದಕ್ಕೆ ಪರಿಹಾರ ಕಂಡುಕೊಳ್ಳುವ ವೇದಿಕೆಯೊಂದನ್ನು ನಿರ್ಮಾಣಮಾಡಿಕೊಡುವ ನಿಟ್ಟಿನಲ್ಲಿ ಊರ ಹಿರಿಯ, ಯುವ ಕೃಷಿಕರ ಮತ್ತು ಸಹಕಾರಿ ಸಂಘಗಳ ಅಭಿಲಾಷೆಯನ್ವಯ ಕೃಷಿಮೇಳ ಆಯೋಜಿಸಲಾಗುತ್ತಿದೆ. ಕ್ಯಾಂಪ್ಕೋ ಮಂಗಳೂರು, ನಾಲಂದ ಮಹಾ ವಿದ್ಯಾಲಯ ಮತ್ತು ಊರಿನ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಕೃಷಿಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.




