ಕಾಸರಗೋಡು: ಜಿಲ್ಲೆ ಇನ್ನು ಮುಂದೆ ಸಂಪೂರ್ಣ ಬೆಳೆ ವಿಮೆ ಜಿಲ್ಲೆ ಎಂದು ಘೋಷಿಸಲಾಗಿದೆ. ಗುರುವಾರ ವೆಳ್ಳರಿಕುಂಡ್ ನಲ್ಲಿ ನಡೆದ ಸಮರಂಭದಲ್ಲಿ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಈ ಘೋಷಣೆ ನಡೆಸಿದರು. ಜಿಲ್ಲೆಯ ಕೃಷಿಯನ್ನೇ ಅವಲಭಿಸಿ ಬದಕುತ್ತಿರುವ 28230 ಮಂದಿಯನ್ನು ಬೆಳೆ ವಿಮೆಯಲ್ಲಿ ಸದಸ್ಯರನ್ನಾಗಿಸಿ ಈ ಘೋಷಣೆ ನಡೆಸಲಾಗಿದೆ.
ಇದರ ಅಂಗವಾಗಿ ನಿರ್ಮಿಸಿದ ವಿಶೇಷ ವೇದಿಕೆಯಲ್ಲಿ ತರಕಾರಿ ಮತ್ತು ಹಲಸಿನ ಸಸಿಗಳಿಗೆ ನೀರುಣಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನಂತರ ಜನಪ್ರತಿನಿಧಿಗಳು, ಕೃಷಿ ಇಲಾಖೆ ಸಿಬ್ಬಂದಿ ಜಂಟಿಯಾಗಿ ದೀಪ ಬೆಳಗಿದರು. ವೆಳ್ಳರಿಕುಂಡ್ ಪೆÇಲೀಸರಿಗೆ ತರಕಾರಿಸಸಿ ವಿತರಣೆ ನಡೆಸುವ ಮೂಲಕ ಸಚಿವ ವಿ.ಎಸ್.ಸುನಿಲ್ ಕುಮಾರ್ "ಜೀವನಿ" ಯೋಜನೆಯ ಉದ್ಘಾಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಚಿವ ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾಸರಗೋಡು ಜಿಲ್ಲೆಯ ಗಳಿಸಿದ ಹೆಗ್ಗಳಿಗೆ ಹಿರಿಮೆ ತರುವಂಥದ್ದು. ಸತತ ಎರಡು ಬಾರಿ ನೆರೆ ಹಾವಳಿಯಿಂದ ತತ್ತರಿಸಿದವರು ರಾಜ್ಯದ ಕೃಷಿಕರು. ಕೃಷಿ ಕೊಯ್ಲಿನ ಹಂತಕ್ಕೆ ಬಂದಾಗ ನಡೆದ ಪ್ರಕೃತಿ ವಿಕೋಪ ತಂದ ನಷ್ಟ ಅವರಿಗೆ ತಾಳಲಾರದೆ ಆಘಾತ ನೀಡಿದೆ. ಈ ವೇಳೆ ಜೀವನಿಯಂಥಾ ಯೋಜನೆಗಳು ಅವವರಿಗೆ ಪುನಶ್ಚೇತನ ನೀಡಲಿದೆ ಎಂದರು.
ಈ ಯೋಜನೆಗೆ ಸತತ ಯತ್ನ ನಡೆಸಿದ ಮಾಜಿ ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ ಅವರಿಗೆ ಅಭಿನಂದನೆ ನಡೆಯಿತು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜೈವಿಕ ಕೃಷಿ ಸಾಧಕರಿಗೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಬಹುಮಾನ ವಿತರಿಸಿದರು. ಶಾಸಕರಾದ ಕೆ.ಕುಂuಟಿಜeಜಿiಟಿeಜರಾಮನ್, ಎಂರಾಜಗೋಪಾಲನ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ, ಕಾಞಂಗಾಡ್ ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಆತ್ಮಾ ಯೋಜನೆ ನಿರ್ದೇಶಕಿ ಎಸ್.ಸುಷ್ಮಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕೃಷಿ ಅಧಿಕಾರಿ ಕೆ.ಸಜಿನಿಮೋಳ್ ಸ್ವಾಗತಿಸಿದರು. ಕೃಷಿ ಸಹಾಯಕ ನಿರ್ದೇಶಕಿ ಆರ್.ವೀಣಾರಾಣಿ ವಂದಿಸಿದರು.




