ನವದೆಹಲಿ: ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೆÇೀರ್ಟ್ ಎಂಬ ಹೆಗ್ಗಳಿಕೆಯನ್ನು ಜಪಾನ್ ಪಾಸ್ ಪೆÇೀರ್ಟ್ ಮತ್ತೊಮ್ಮೆ ಮುಡಿಗೇರಿಸಿಕೊಂಡಿದೆ.
ಹೆನ್ಲಿ ಪಾಸ್‍ಪೆÇೀರ್ಟ್ ಇಂಡೆಕ್ಸ್* ನಲ್ಲಿ ಸತತ ಮೂರನೇ ಬಾರಿ ತನ್ನ ಆಗ್ರ ಶ್ರೇಯಾಂಕವನ್ನು ಜಪಾನ್ ಪಾಸ್‍ಪೆÇೀರ್ಟ್ ಕಾಯ್ದುಕೊಂಡಿದೆ. ಏಕೆಂದರೆ... ಈ ಪಾಸ್ ಪೆÇೀರ್ಟ್ ನೊಂದಿಗೆ ವೀಸಾ ಇಲ್ಲದೆ ವಿಶ್ವದ 191 ದೇಶಗಳಿಗೆ ತೆರಳಬಹುದು. ಸಿಂಗಾಪುರ ಪಾಸ್‍ಪೆÇೀರ್ಟ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ.
ಸಿಂಗಾಪುರ್ ಪಾಸ್‍ಪೆÇೀರ್ಟ್ ಮೂಲಕ 190 ದೇಶಗಳು, ದಕ್ಷಿಣ ಕೊರಿಯಾ, ಜರ್ಮನಿಯ ಪಾಸ್‍ಪೆÇೀರ್ಟ್‍ಗಳ ಮೂಲಕ 189 ದೇಶಗಳನ್ನು ವೀಸಾ ಇಲ್ಲದೆ ಸಂದರ್ಶಿಸಬಹುದು. ಅಮೆರಿಕಾ, ಬ್ರಿಟನ್ ದೇಶಗಳು ಸೂಚ್ಯಂಕದಲ್ಲಿ ಶ್ರೇಯಾಂಕ ಇಳಿಕೆಯ ಪ್ರವೃತ್ತಿಯಲ್ಲಿವೆ. ಕ್ರಮವಾಗಿ ಈ ಎರಡು ದೇಶಗಳ ಜೊತೆಗೆ, ಬೆಲ್ಜಿಯಂ, ಗ್ರೀಸ್ ಮತ್ತು ನಾರ್ವೆಯ ಪಾಸ್‍ಪೆÇೀರ್ಟ್‍ಗಳು ಎಂಟನೇ ಸ್ಥಾನದಲ್ಲಿವೆ. ಈ ಐದು ದೇಶಗಳ ಪಾಸ್‍ಪೆÇೀರ್ಟ್‍ಗಳೊಂದಿಗೆ ವೀಸಾ ಇಲ್ಲದೆ 184 ದೇಶಗಳಿಗೆ ತೆರಳಬಹುದು. ಅಮೆರಿಕಾ ಮತ್ತು ಬ್ರಿಟನ್ 2015 ರಲ್ಲಿ ಮೊದಲ ಸ್ಥಾನದಲ್ಲಿದ್ದರೂ ಕಳೆದ ವರ್ಷ ಆರನೇ ಸ್ಥಾನಕ್ಕೆ ಕುಸಿದಿದ್ದವು.
ವೀಸಾ ಇಲ್ಲದೆ 188 ದೇಶಗಳಿಗೆ ಭೇಟಿ ನೀಡಬಹುದಾದ ಫಿನ್ ಲ್ಯಾಂಡ್, ಇಟಲಿ ಪಾಸ್ ಪೆÇೀರ್ಟ್ ಗಳು 4 ನೇ ಸ್ಥಾನದಲ್ಲಿ, 187 ದೇಶಗಳಿಗೆ ಭೇಟಿ ನೀಡಬಹುದಾದ ಡೆನ್ಮಾರ್ಕ್, ಲಕ್ಸೆಂಬರ್ಗ್, ಸ್ಪೇನ್, ಐದನೇ ಸ್ಥಾನದಲ್ಲಿ, 186 ದೇಶಗಳಲ್ಲಿ ಪ್ರವಾಸ ಕೈಗೊಳ್ಳಬಹುದಾದ ಫ್ರಾನ್ಸ್, ಸ್ವೀಡನ್, ಆಸ್ಟ್ರಿಯಾ, ಐಲೆರ್ಂಡ್, ಫ್ರಾನ್ಸ್, ಏಳನೇ ಸ್ಥಾನದಲ್ಲಿ ಆಯ್ಕೆಯಾಗಿವೆ. ಆಸ್ಟ್ರೇಲಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಮಾಲ್ಟಾ ಮತ್ತು ನ್ಯೂಜಿಲೆಂಡ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಹಂಗೇರಿ, ಲಿಥುವೇನಿಯಾ ಮತ್ತು ಸ್ಲೋವಾಕಿಯಾ ಪಾಸ್‍ಪೆÇೀರ್ಟ್‍ಗಳನ್ನು ಒಂಬತ್ತನೇ ಸ್ಥಾನದಲ್ಲಿ ಆಯ್ಕೆ ಮಾಡಲಾಗಿದೆ. ವೀಸಾ ಇಲ್ಲದೆ, ಕೇವಲ 58 ದೇಶಗಳಿಗೆ ಸುತ್ತಾಡಬಹುದಾದ ಭಾರತೀಯ ಪಾಸ್‍ಪೆÇೀರ್ಟ್‍ನ್ನು 84 ನೇ ಸ್ಥಾನದಲ್ಲಿವೆ. 2019 ರಲ್ಲಿ 86 ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಎರಡು ಸ್ಥಾನಗಳಷ್ಟು ಸುಧಾರಿಸಿದೆ.




