HEALTH TIPS

ಕೃಷಿಯನ್ನೂ ಪಠ್ಯವಾಗಿಸುತ್ತಿರುವ ಶಾಲೆಗಳು


     ಮುಳ್ಳೇರಿಯ:  ಕೃಷಿಯನ್ನೂ ಪಠ್ಯವಾಗಿಸಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಶಾಲೆಗಳು ಮಾಧ್ಯಮವಾಗುತ್ತಿವೆ. ಮಣ್ಣನ್ನು, ಪ್ರಕೃತಿಯನ್ನು ಅರಿಯುವ ಮೂಲಕ ಬದುಕಿನ ನಿಜವಾದ ಪಾಠ ಕಲಿಯಲು ಮಕ್ಕಳಿಗೆ ಸೃಜನಾತ್ಮಕ ಅವಕಾಶ ಒದಗಿಸುವ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ 7 ಗ್ರಾಮಪಂಚಾಯತಿಗಳ ಆಯ್ದ 16 ಶಾಲೆಗಳನ್ನು ಈ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ.
     ರಾಜ್ಯ ಸರ್ಕಾರದ "ಸ್ಕೂಲ್ ಪಚ್ಚಕ್ಕರಿ ತೋಟಂ(ಶಾಲಾ ತರಕಾರಿ ತೋಟ)" ಯೋಜನೆಯ ಅಂಗವಾಗಿ ಈ ಚಟುವಟಿಕೆ ನಡೆಯಲಿದೆ. ಕೃಷಿ ಮತ್ತು ಅದರ ಪೆÇೀಷಣೆ ನಡೆಸುವ ನಿಟ್ಟಿನಲ್ಲಿ ಶಾಲೆಯೊಂದಕ್ಕೆ 5 ಸಾವಿರ ರೂ. ಆರ್ಥಿಕ ಸಹಾಯ ವಿತರಣೆ ನಡೆಸಲಾಗಿದೆ. ಕೃಷಿಭವನಗಳ ಮೂಲಕ ವಿದ್ಯಾರ್ಥಿಗಳಿಗೆ ಕೃಷಿಯ ವಿಧಾನ ಇತ್ಯಾದಿಗಳ ಬಗ್ಗೆ  ಮಾಹಿತಿ ಒದಗಿಸಲಾಗಿದೆ.
      ಈ ನಿಟ್ಟಿನಲ್ಲಿ ಶಾಲಾ ತರಕಾರಿ ತೋಟ ಯೋಜನೆಯ ಅಂಗವಾಗಿ ಅತ್ಯುತ್ತಮ ಚಟುವಟಿಕೆ ನಡೆಸಿದ ಅಂಗೀಕಾರ ಪಡೆದಿರುವ ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಇರಿಯಣ್ಣಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತರಕಾರಿ ಬೆಳೆಯ ಕೊಯ್ಲು ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries