HEALTH TIPS

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಸಿ.ರಾಘವ ಬಲ್ಲಾಳ್ ಅವರ ಪೌರ ಸನ್ಮಾನ ಸಮಾರಂಭ- ಗುರುವಿನ ಸ್ಥಾನ ಜಾತಿ ಮತಗಳನ್ನು ಮೀರಿದುದಾಗಿದೆ-ಶಾಸಕ ಎಂ.ಸಿ.ಕಮರುದ್ದೀನ್


          ಉಪ್ಪಳ: ಜಗತ್ತಿನಲ್ಲಿ ಅದರಲ್ಲಿಯೂ ಪುಣ್ಯ ಭೂಮಿ ಭಾರತದಲ್ಲಿ ಗುರುವಿಗೆ ಅತ್ಯಂತ ಮಹತ್ತರವಾದ ಸ್ಥಾನವನ್ನು ಎಲ್ಲಾ ಮತದಲ್ಲಿಯೂ ನೀಡಲಾಗಿದೆ. ಪ್ರತಿ ಮತವೂ ತಂದೆ ತಾಯಿಯ ನಂತರದ ಪೂಜ್ಯ ಸ್ಥಾನದಲ್ಲಿ ಗುರುವನ್ನು ಕಂಡದ್ದು. ಎಲ್ಲಾ ಮತಗಳ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದ್ದನ್ನು ಕಾಣಬಹುದು. ಆದರ್ಶ ಮನುಷ್ಯನ ವ್ಯಕ್ತಿತ್ವನ್ನು ರೂಪಿಸಿದ್ದಲ್ಲದೆ ಗುರುವಿನ ಪಾತ್ರ ಮಹತ್ವದ್ದು ಎಂದು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಅವರು ಅಭಿಪ್ರಾಯಪಟ್ಟರು.
          ಕೇರಳ ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯೋಪಾಧ್ಯಾಯ, ಕನ್ನಡ ಹೋರಾಟಗಾರ ಹಾಗೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಸಿ.ರಾಘವ ಬಲ್ಲಾಳ್ ಅವರಿಗೆ ಭಾನುವಾರ ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೌರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ಶಿಕ್ಷಣ ವ್ಯವಸ್ಥೆ ಅತ್ಯಂತ ಶಿಸ್ತಿನಿಂದ ಕೂಡಿದ್ದ ಕಾಲಘಟ್ಟದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿದ ಬಲ್ಲಾಳ್ ಅವರಿಗೆ ಪೌರ ಸನ್ಮಾನ ನೀಡಿ ಆದರಿಸಿದ್ದು ಶ್ಲಾಘನೀಯ ಎಂದು ಅವರು ತಿಳಿಸಿದರು.
        ದೇಶದಲ್ಲಿ ಜಾತಿ ಮತಗಳ ಬೇಧಗಳನ್ನು ಮೀರಿ ಪ್ರತಿಯೊಬ್ಬರು ಶಾಂತಿ ಸೌಹಾರ್ದತೆಯಿಂದ ಮುಂದಿನ ದಿನಳಲ್ಲಿ ಬಾಳ್ವೆ ನಡೆಸುವಂತಾಗಬೇಕು. ಪರಸ್ಪರ ಪ್ರೀತಿ ವಿಶ್ವಾಸಗಳಿಂದ ರಾಗ ತಾಳಗಳ ಮೇಳದಂತೆ ಭಾರತೀಯರು ಬದುಕು ನಡೆಸುವುದೇ ನಮ್ಮ ಸಂಸ್ಕøತಿ. ಜನಪ್ರತಿನಿಧಿ ಎಂಬ ನೆಲೆಯಲ್ಲಿ ಪರಿಮಿತಿಯೊಳಗೆ ಯಾವುದೇ ಬೇಧ, ಭಾವಗಳನ್ನಿರಿಸದೆ ಜನತೆಯ ಸೇವೆಗೆ ಸದಾ ಸಿದ್ಧೆವೆಂಬುದಾಗಿ ಅವರು ಈ ಸಂದರ್ಭ ತಿಳಿಸಿದರು.
        ಪೈವಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್ ಮೂಡಿತ್ತಾಯ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ರಾಘವ ಬಲ್ಲಾಳ್ ಅವರ ಅಭಿನಂದನಾ ಗ್ರಂಥವನ್ನು ನಿಟ್ಟೆ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ ಬಿಡುಗಡೆಗೊಳಿಸಿದರು.
      ವೇದಿಕೆಯಲ್ಲಿ ಹಿರಿಯ ಕನ್ನಡ ಹೋರಾಟಗಾರ  ಪುರುಷೋತ್ತಮ ಮಾಸ್ತರ್, ಪ್ರಸಾದ್ ರೈ ಕಯ್ಯಾರು, ಸುನೀತಾ ವಲ್ಟಿ ಡಿಸೋಜ, ಕೆ.ಜಯಲಕ್ಷ್ಮೀ ಭಟ್, ನಂದಿಕೇಶನ್, ದಿನೇಶ್.ವಿ., ಶಾಲಾ ಮುಖ್ಯ ಶಿಕ್ಷಕ ಬಿ.ಇಬ್ರಾಹಿಂ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಎಸ್.ನಾರಾಯಣ ಭಟ್, ಕೋಚಣ್ಣ ಶೆಟ್ಟಿ.ಕೆ, ಅಬ್ದುಲ್ ರಹಿಮಾನ್ ರಮೇಶ್ ಪಿ. ಮತ್ತಿತರರು ಉಪಸ್ಥಿತರಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬೇ.ಸೀ. ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಶ್ರೀಕುಮಾರಿ ವಂದಿಸಿದರು. ಶೇಖರ ಶೆಟ್ಟಿ.ಕೆ ಕಾರ್ಯಕ್ರಮ ನಿರ್ವಹಿಸಿದರು.
           ಕಾರ್ಯಕ್ರಮದಂಗವಾಗಿ ನೃತ್ಯ ವೈವಿಧ್ಯ, ಕುರುಡಪದವು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ  ಕಲಾವಿದರಿಂದ ವರಾಹವತಾರ ಎಂಬ ಯಕ್ಷಗಾನ ಪ್ರದರ್ಶನಗಳು ನಡೆಯಿಯಿತು.
                  ಸಮಾರೋಪ:
      ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಧಕ ಸಿ.ರಾಘವ ಬಲ್ಲಾಳ್ ಅವರನ್ನು ಪೌರ ಸನ್ಮಾನ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿ, ಪ್ರಸಿದ್ಧ ಅರ್ಥದಾರಿ  ಡಾ.ರಮಾನಂದ ಬನಾರಿ ಅಭಿನಂದನಾ ಭಾಷಣಗೈದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries