HEALTH TIPS

ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ!!

   
      ಅಮೆರಿಕ: ಕೊರೊನಾ ವೈರಸ್ ಎಂಬ ಮಹಾಮಾರಿ ವಿಶ್ವಾದ್ಯಂತ ಮೃತ್ಯುನರ್ತನ ಮಾಡುತ್ತಿದೆ. ಚೀನಾದಿಂದ ಆರಂಭವಾದ ಈ ಮಾರಕ ಕಾಯಿಲೆ ಈಗ ಹಲವು ದೇಶಗಳಲ್ಲಿ ಮಾರಣಹೋಮ ನಡೆಸುತ್ತಿದೆ. ಭಾರತಕ್ಕೂ ಕಾಲಿಟ್ಟಿರುವ ಕೊರೊನಾ ವೈರಸ್ ಜನರಲ್ಲಿ ಆತಂಕ ಹೆಚ್ಚಿಸಿದೆ.
     ದುರಂತ ಅಂದ್ರೆ ಇದುವರೆಗೂ ಜಗತ್ತಿನಾದ್ಯಂತ ಸುಮಾರು 3286ಕ್ಕೂ ಅಧಿಕ ಸಾವು ವರದಿಯಾಗಿದೆ. ಆದರೆ, ಈ ವೈರಸ್ ಗೆ ಯಾವುದೇ ಪರಿಹಾರ, ಮದ್ದು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂತಹದೊಂದು ಭಯಾನಕ ಕಾಯಿಲೆ 2020ರ ಸಮಯದೊಳಗೆ ಬರುತ್ತೆ ಎಂದು 12 ವರ್ಷಗಳ ಹಿಂದೆಯೇ ಬರಹಗಾರ್ತಿಯೊಬ್ಬರು ಉಲ್ಲೇಖಿಸಿದ್ದರು ಎನ್ನುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೊರೊನಾ ವೈರಸ್ ಮಾದರಿಯ ಈ ಕಾಯಿಲೆ ಬಗ್ಗೆ 2008ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಯಾವುದು ಆ ಪುಸ್ತಕ
         'ಎಂಡ್ ಆಫ್ ಡೇಸ್' ಪುಸ್ತಕದಲ್ಲಿ ಕೊರೊನಾ ಉಲ್ಲೇಖ!
      ಅಮೆರಿಕ ಮೂಲದ ಬರಹಗಾರ್ತಿ ಸಿಲ್ವಿಯಾ ಬ್ರೌನ್ ಅವರು 2008ರಲ್ಲಿ 'ಎಂಡ್ ಆಫ್ ಡೇಸ್' ಪುಸ್ತಕದಲ್ಲಿ ಕೊರೊನಾ ವೈರಸ್ ಅಂತಹ ಭಯಾನಕ ಕಾಯಿಲೆ ಬಗ್ಗೆ ಚರ್ಚಿಸಿದ್ದರು ಎಂಬ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಕೊರೊನಾ ವೈರಸ್ ರೋಗದ ಲಕ್ಷಣಗಳ ಬಗ್ಗೆ ಆಗಲೇ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಪುಸ್ತಕದ ಅಂಶಗಳು ಸ್ಕ್ರೀನ್ ಶಾಟ್ ಈಗ ಟ್ರೆಂಡ್ ಆಗುತ್ತಿದೆ.
         ಏನಿದೆ ಆ ಪುಸ್ತಕದಲ್ಲಿ?
      ಸಿಲ್ವಿಯಾ ಬ್ರೌನ್ ಅವರ 2020ರ ಸಮಯಕ್ಕೆ ಭಯಾಕನ ಕಾಯಿಲೆಯಿಂದ ಜಗತ್ತಿಗೆ ಅಪ್ಪಳಿಸುತ್ತೆ. ಇದರಿಂದ ಸಾವುಗಳು ಸಂಭವಿಸುತ್ತೆ. ಇದಕ್ಕೆ ಪರಿಹಾರ ಸಿಗುವುದಿಲ್ಲ. ಇದು ವೈರಸ್ ಮಾದರಿಯಲ್ಲಿರಲಿದೆ ಎಂದು ಬರೆದಿದ್ದಾರೆ. ''ಸುಮಾರು 2020 ರಲ್ಲಿ ತೀವ್ರವಾದ ನ್ಯುಮೋನಿಯಾ ತರಹದ ಕಾಯಿಲೆ ಪ್ರಪಂಚದಾದ್ಯಂತ ಹರಡುತ್ತದೆ, ಶ್ವಾಸಕೋಶ ಮತ್ತು ಶ್ವಾಸನಾಳದ ಕೊಳವೆಗಳ ಮೂಲಕ ದಾಳಿ ಮಾಡುತ್ತೆ ಮತ್ತು ಯಾವ ಚಿಕಿತ್ಸೆಯೂ ಇದಕ್ಕೆ ಸಹಕರಿಸುವುದಿಲ್ಲ'' ಎಂದು ಪರೋಕ್ಷವಾಗಿ ಕೊರೊನಾ ಬಗ್ಗೆ ಸುಳಿವು ನೀಡಿದ್ದರು.
      ಇದ್ದಕ್ಕಿದ್ದಂತೆ ಮಾಯಾ ಆಗುತ್ತೆ:
    ಹಾಗ್ನೋಡಿದ್ರೆ, ಕೊರೊನಾ ವೈರಸ್ ಈಗ ಶ್ವಾಸಕೋಶ ಮತ್ತು ಶ್ವಾಸನಾಳದ ಮೂಲಕವೇ ಹರಡುತ್ತಿದೆ. ಸದ್ಯಕ್ಕೆ ಯಾವ ಚಿಕಿತ್ಸೆಯೂ ಪರಿಹಾರವಾಗಿ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಹಾರದ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಾಗಿಲ್ಲವಾದರೂ ಈ ವೈರಸ್ ಇದ್ದಕ್ಕಿದ್ದಂತೆ ಮಾಯಾವಾಗಲಿದೆ ಎಂದು ಸಿಲ್ವಿಯಾ ಬ್ರೌನ್ ಬರೆದಿದ್ದಾರೆ. ''ಈ ವೈರಸ್ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ, 10 ವರ್ಷಗಳ ನಂತರ ಮತ್ತೆ ದಾಳಿ ಮಾಡುತ್ತದೆ ಮತ್ತು ನಂತರ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ'' ಎಂದು ಮಾರಕ ಕಾಯಿಲೆ ಬಗ್ಗೆ ಬರೆದುಕೊಂಡಿದ್ದಾರೆ. ಸಿಲ್ವಿಯಾ ಬ್ರೌನ್ ಅವರು ಚರ್ಚಿಸಿರುವ ಈ ಕಾಯಿಲೆಯೇ ಕೊರೊನಾ ವೈರಸ್ ಇರಬಹುದು ಎಂಬ ಚರ್ಚೆ ಈಗ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
      ಮತ್ತೆ ಬರುತ್ತಾ?
     ಕೊರೊನಾ ವೈರಸ್ ಲಕ್ಷಣಗಳನ್ನು ಗಮನಿಸಿದರೆ ಸಿಲ್ವಿಯಾ ಬ್ರೌನ್ ಅವರು 12 ವರ್ಷದ ಹಿಂದೆ ಹೇಳಿರುವ ಅಂಶಗಳಿಗೂ ಹೋಲಿಕೆಯಾಗುತ್ತಿದೆ. ಹಾಗಾಗಿ, ನೆಟ್ಟಿಗರು ಇದನ್ನು ಕಂಡು ಅಚ್ಚರಿಯಾಗಿದ್ದಾರೆ. ಈ ಪುಸ್ತಕದಲ್ಲಿರುವುದು ಇದು ನಿಜನಾ? ಸಪ್ರ್ರೈಸ್? ಇದು ಹೇಗೆ ಸಾಧ್ಯ? ಮತ್ತೆ 10 ವರ್ಷದ ನಂತರ ಬರುತ್ತಾ? ಹೀಗೆ ಬಗೆ ಬಗೆ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries