HEALTH TIPS

ಕೊರೋನಾ ವೈರಸ್: ಕೋವಿಡ್ 19 ದಾಳಿಗೆ ಜನರು ಮಾತ್ರರಲ್ಲ, ಇಂಟರ್ ನೆಟ್ ಗೂ ಭಾರಿ ಪೆಟ್ಟು, ಕಾರಣ ಏನು ಗೊತ್ತಾ?

 
      ನವದೆಹಲಿ: ವಿಶ್ವದ 190 ರಾಷ್ಟ್ರಗಳಲ್ಲಿ ಅಟ್ಟಾಹಸ ಮೇರೆಯುತ್ತಿರುವ ಕೊರೋನಾ ವೈರಸ್ ದಾಳಿಗೆ ಕೇವಲ ಜನರು ಮಾತ್ರರಲ್ಲ ಇಂಟರ್ ನೆಟ್ ಲೋಕಕ್ಕೂ ಭಾರಿ ಪೆಟ್ಟು ಬೀಳುತ್ತಿದೆ.
       ಕೊರೋನಾ ವೈರಸ್ ಪ್ರಸರಣದ ಹಿನ್ನಲೆಯಲ್ಲಿ ವಿಶ್ವಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಎಲ್ಲ ರೀತಿಯ ಕಾರ್ಯಗಳನ್ನು ಸ್ಥಗಿತಗೊಳಿಸಿ ಎಲ್ಲ ರೀತಿಯ ಜನರ ಓಡಾಡಟಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಜನರು  ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದು, ಕೋಟ್ಯಂತರ ಮಂದಿ ಮನೆಯಿಂದಲೇ ತಮ್ಮ ಕಚೇರಿಗಳ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕೂಡ ಜನರಿಗೆ ಅಗತ್ಯ ವಸ್ತುಗಳ ಸೇವೆ ಕಲ್ಪಿಸಲು ಹರಸಾಹಸ ಪಡುತ್ತಿದೆ.
       ಏತನ್ಮಧ್ಯೆ ಕೊರೋನಾ ದಾಳಿಗೆ ದೇಶದ ಇಂಟರ್ ನೆಟ್ ಕ್ಷೇತ್ರದ ಮೇಲೂ ಭಾರಿ ಹೊಡೆತ ಬಿದ್ದಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ವರ್ಕ್ ಫ್ರಮ್ ಹೋಂ, ಸ್ಟಡಿ ಫ್ರಮ್ ಹೋಂ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಇಂಟರ್ನೆಟ್ ಬಳಕೆ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿದೆ. ಭಾರತದಲ್ಲಿ ಇಂಟರ್ನೆಟ್  ನ ಬಳಕೆ ಶೇ.30 ರಿಂದ ಶೇ.40 ರಷ್ಟು ಹೆಚ್ಚಾಗಿದೆ. ಇದರಿಂದ ಇಂಟರ್ನೆಟ್ ವೇಗ ಸೊರಗಲಾರಂಭಿಸಿದ್ದು, ಇದೇ ಪರಿಸ್ಥಿತಿ ಇನ್ನಷ್ಟು ದಿನ ಮುಂದುವರೆದರೆ ಭಾರತದಲ್ಲಿ ಇಂಟರ್ ನೆಟ್ ವೇಗ ಕಡಿತವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಗುತ್ತಿದೆ. ದೇಶದ ಮಹಾನಗರಗಳಾದ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ, ಕೋಲ್ಕತಾ ನಂತಹ ನಗರದಲ್ಲಿ ಶೇ.100ರಷ್ಟು ಇಂಟರ್ ನೆಟ್ ಬಳಕೆ ಮಾಡಲಾಗುತ್ತಿದ್ದು, ಹೈದರಾಬಾದ್ ನಲ್ಲಿ ಈ ದರ ಶೇ.50ರಷ್ಟಿದೆ. ಪ್ರಮುಖವಾಗಿ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈನಲ್ಲಿ  ಇಂಟರ್ನೆಟ್ ನ ಬಳಕೆ ಶೇ.30 ರಿಂದ ಶೇ.40 ರಷ್ಟು ಹೆಚ್ಚಳವಾಗಿದೆ. ಇಂಟರ್ನೆಟ್ ಸರ್ವಿಸ್ ಪೆÇ್ರೀವೈಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಸುಮಾರು 68.7 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಇವರಲ್ಲಿ 66 ಕೋಟಿಗೂ ಅಧಿಕ ಜನರು  ವೈಯರ್ ಲೆಸ್ ಬಳಕೆದಾರರಾಗಿದ್ದಾರೆ. ಅಂದರೆ, ಈ ಜನರು ಮೊಬೈಲ್ ಇಂಟರ್ನೆಟ್ ನ ಬಳಕೆ ಮಾಡುತ್ತಾರೆ. ಇವರನ್ನು ಹೊರತುಪಡಿಸಿದರೆ 2.3 ಕೋಟಿ ಇಂಟರ್ನೆಟ್ ಬಳಕೆದಾರರು ವೈಯರ್ಡ್ ಇಂಟರ್ನೆಟ್ ಬಳಕೆದಾರರಾಗಿದ್ದು, ಇವರು ಲ್ಯಾಂಡ್ ಲೈನ್ ಅಥವಾ ಬ್ರಾಡ್ ಬ್ಯಾಂಡ್  ಕೇಬಲ್ ಮೂಲಕ ಇಂಟರ್ನೆಟ್ ಬಳಸುತ್ತಾರೆ ಮತ್ತು 75 ಲಕ್ಷ ಜನರು ಫಿಕ್ಸಡ್ ವೈಯರ್ ಲೆಸ್ ಇಂಟರ್ನೆಟ್ ಬಳಕೆಯನ್ನು ಮಾಡುತ್ತಾರೆ. ವೈಯರ್ ಲೆಸ್ ನೆಟ್ವರ್ಕ್ ಮೇಲೆ ಪ್ರತಿ ಗ್ರಾಹಕ ಪ್ರತಿ ತಿಂಗಳು ಸರಾಸರಿ 10.37 ಉಃ ಡೇಟಾ ಬಳಕೆ ಮಾಡುತ್ತಾನೆ.
                 ವಿಶ್ವಾದ್ಯಂತ ಇಂಟರ್ ನೆಟ್ ಬಳಕೆಯಲ್ಲಿ ಗಣನೀಯ ಏರಿಕೆ:
      ಗ್ಲೋಬಲ್ ಇಂಟರ್ ನೆಟ್ ಸ್ಪೀಡ್ ಟೆಸ್ಟ್ ಸಂಸ್ಥೆ ಊಕ್ಲಾ ಈ ಬಗ್ಗೆ ವರದಿ ನೀಡಿದ್ದು, ವಿಶ್ವಾದ್ಯಂತ ಇಂಟರ್ ನೆಟ್ ವೇಗದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಗಣನೀಯ ಕಡಿತವಾಗಿದೆ ಎಂದು ತಿಳಿಸಿದೆ. ಪ್ರಮುಖವಾಗಿ ಲಾಕ್ ಡೌನ್ ಪ್ರಕ್ರಿಯೆ ಆರಂಭಗೊಂಡ ಬಳಿಕ ಕಚೇರಿಗಳು  ಸ್ಥಗಿತವಾಗುವುದರಿಂದ ಇಂಟರ್ ನೆಟ್ ಬಳಕೆ ಪ್ರಮಾಣ ತಗ್ಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇಂಟರ್ ನೆಟ್ ಬಳಕೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಏಷ್ಯನ್ ರಾಷ್ಟ್ರಗಳಾದ ಭಾರತ, ಚೀನಾ, ಜಪಾನ್ ಮತ್ತು ಮಲೇಷ್ಯಾದಲ್ಲಿ ಇಂಟರ್  ನೆಟ್ ಬಳಕೆ ಪ್ರಮಾಣ ಶೇ.40ರಿಂದ ಶೇ.115ರಷ್ಟು ಏರಿಕೆಯಾಗಿದೆ.
       ಭಾರತದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಬಳಕೆಯಲ್ಲಿ ಶೇ. 40ರಷ್ಟು ಏರಿಕೆಯಾಗಿದ್ದರೆ, ಮೊಬೈಲ್ ನೆಟ್ ಬಳಕೆಯಲ್ಲಿ ಶೇ.10 ರಿಂದ ಶೇ.15ರಷ್ಟು ಏರಿಕೆಯಾಗಿದೆ. ಇನ್ನು ಮಲೇಷ್ಯಾದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಬಳಕೆಯಲ್ಲಿ ಶೇ.80 ರಿಂದ ಶೇ.90ರಷ್ಟು ಬಳಕೆ ಏರಿಕೆಯಾಗಿದ್ದು,  ಮೊಬೈಲ್ ನೆಟ್ ಬಳಕೆಯಲ್ಲಿ ಶೇ.22 ರಿಂದ ಶೇ.25ರಷ್ಟು ಏರಿಕೆಯಾಗಿದೆ. ಅಂತೆಯೇ ಜಪಾನ್ ನಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಬಳಕೆ ಪ್ರಮಾಣ ಶೇ.100ರಿಂದ ಶೇ.110ರವಗೂ ಏರಿಕೆಯಾಗಿದ್ದು, ಮೊಬೈಲ್ ಇಂಟರ್ ನೆಟ್ ಬಳಕೆಯಲ್ಲಿ ಶೇ.30 ರಿಂದ ಶೇ.35ರಷ್ಟು ಏರಿಕೆ  ಕಂಡುಬಂದಿದೆ. ಕೊರೋನಾ ವೈರಸ್ ತವರು ಚೀನಾದಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಬಳಕೆ ಪ್ರಮಾಣದಲ್ಲಿ ಶೇ.100ರಿಂದ ಶೇ.120ರಷ್ಟು ಏರಿಕೆ ಕಂಡುಬಂದಿದ್ದು, ಮೊಬೈಲ್ ಇಂಟರ್ ನೆಟ್ ಬಳಕೆ ಪ್ರಮಾಣದಲ್ಲಿ ಶೇ.80ರಿಂದ ಶೇ.85ರಷ್ಟು ಏರಿಕೆಯಾಗಿದೆ. ಪ್ರಮುಖವಾಗಿ ಮೊಟ್ಟ  ಮೊದಲು ವೈರಸ್ ಪತ್ತೆಯಾದ ಚೀನಾದ ಹುಬೈ ಪ್ರಾಂತ್ಯದಲ್ಲೂ ಬ್ರಾಂಡ್ ಬ್ಯಾಂಡ್ ಇಂಟರ್ ನೆಟ್ ಬಳಕೆ ಪ್ರಮಾಣದಲ್ಲಿ ಶೇ.100ರಿಂದ ಶೇ.120ರಷ್ಟು ಏರಿಕೆ ಕಂಡುಬಂದಿದ್ದು, ಮೊಬೈಲ್ ಇಂಟರ್ ನೆಟ್ ಬಳಕೆ ಪ್ರಮಾಣದಲ್ಲಿ ಮಾತ್ರ ಕುಸಿತ ಕಂಡುಬಂದಿದೆ. ಇಲ್ಲಿ ಮೊಬೈಲ್ ಇಂಟರ್ ನೆಟ್ ಬಳಕೆ ಪ್ರಮಾಣದಲ್ಲಿ ಶೇ. 65ರಿಂದ ಶೇ.40ಕ್ಕೆ ಕುಸಿತವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries