HEALTH TIPS

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ-ವಿಷು ವಿಶೇಷ ಸ್ಪರ್ಧೆ 2020 ಕ್ಕೆ ಅರ್ಜಿ ದಿನುಗೇಳಿದ್ದವು-ಸ್ಪರ್ಧೆಯ ವಿವರ ಇಲ್ಲಿದ್ದು

 
         ಕುಂಬಳೆ: ಈಗಾಗಲೇ ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗುದೆ, ಸಾಮಾಜಿಕ- ಸಾಂಸ್ಕøತಿಕ ಕಾರ್ಯಕ್ರಮಂಗಳ ಮೂಲಕ ಗುರುತಿಸಿಕೊಂಡಿಪ್ಪ  ಒಪ್ಪಣ್ಣನ ನೆರೆಕರೆ ಪ್ರತಿಷ್ಠಾನದ  ಒಪ್ಪಣ್ಣ ಡಾಟ್ ಕಾಮ್ ಜಾಲತಾಣ ಭಾರೀ ಪ್ರಚಾರಲ್ಲಿದ್ದು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಕಳೆದ ಎಂಟು ವರ್ಷಂದ ಸೌರ ಯುಗಾದಿಗೆ ಸಂಪೂರ್ಣ ಹವ್ಯಕಭಾಷೆಲೇ ಆಯೋಜನೆ ಮಾಡುವ ವಿಷು ವಿಶೇಷ ಸ್ಪರ್ಧೆ ಹವ್ಯಕ ಸಾಹಿತ್ಯ ಲೋಕಕ್ಕೆ ದೊಡ್ಡ ಮಟ್ಟಿನ ಕೊಡುಗೆ ನೀಡುತ್ತಿದ್ದು.
        ಈ ವರ್ಷ ಪ್ರತಿಷ್ಠಾನವು ಯುಗಾದಿಯ ಪರ್ವಕಾಲಲ್ಲಿ ಹೊಸ ಸಾಹಿತಿಗಳ ಹುಡುಕುಲೆ ಬೇಕಾಗಿ ವಿಷು ವಿಶೇಷ ಸ್ಪರ್ಧೆ-2020 ನಡೆಶುತ್ತು.  ಸ್ಪರ್ಧೆಯ ಪ್ರಬಂಧ ವಿಭಾಗಲ್ಲಿ ಸಾಂಪ್ರದಾಯಿಕ ಬದುಕಿಲಿ ಸ್ವಚ್ಛತೆಗೆ ಮಾನ್ಯತೆ ಎಂಬ ವಿಷಯದಲ್ಲಿ 750 ಶಬ್ದಕ್ಕೆ ಹೆಚ್ಚಾಗದ್ದ ಹಾಂಗುದೆ, ಕಥಾ ಸ್ಪರ್ಧೆಲಿ  ಕುಟುಂಬ ಹಾಗೂ ಮಾನವೀಯ ಮೌಲ್ಯಗಳ ಆಶಯದ ಸಾವಿರ ಶಬ್ದಗಳಿಗೆ ಹೆಚ್ಚಾಗದ್ದ ಹಾಂಗೆ, ಕವಿತೆ ವಿಭಾಗದಲ್ಲಿ ಜೆಂಬ್ರದ ಗೌಜಿ ವಿಷಯಲ್ಲಿ ಹೆಚ್ಚೇಳಿದರೆ 30 ಸಾಲು ಮೀರದ್ದಿಪ್ಪ, ಛಂದೋಬದ್ಧವಾದ ಕವಿತೆಗಳ ಬರೆಯಕ್ಕು. ನಗೆಬರಹ ವಿಷಯದಲ್ಲಿ ಸದಭಿರುಚಿಯ ಬರಹಂಗಳನ್ನುದೆ 500 ಶಬ್ದಕ್ಕಿಂತ ಹೆಚ್ಚಿರದ್ದಾಂಗೆ ಬರೆದು ಕಳುಸುಲೆ ಕೇಳಿಕೊಂಡಿದವು.
       ಎಲ್ಲಾ ಬರಹಂಗಳುದೆ ಕಡ್ಡಾಯವಾಗಿ ಹವ್ಯಕಭಾಷೆ- ಕನ್ನಡಲಿಪಿಯಲ್ಲಿ ಇರೆಕ್ಕು. ಹವ್ಯಕ ಪರಂಪರೆ, ಸಂಸ್ಕೃತಿಯ ಹಿರಿಮೆಯ ತೋರ್ಸುವ  ಬರಹಂಗೊ ಆಗಿರೆಕ್ಕು. ಸ್ಪರ್ಧೆಗೆ ಬಪ್ಪ ಯಾವುದೇ ಬರಹ ಈ ಹಿಂದೆ ಬೇರೆಲ್ಲಿಯುದೆ ಪ್ರಕಟ ಆಗಿಪ್ಪಲಾಗ. ಸ್ಪರ್ಧೆಗೆ ಬಂದ ಎಲ್ಲಾ ಬರಹಂಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ್ದೇ ಆಗಿರುತ್ತು.
       ಸ್ಪರ್ಧೆಯ ವಿಚಾರದಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮವಾಗಿರುತ್ತು. ಬೇರೆ ಚರಿಪಿರಿ ಇಪ್ಪಲಿಲ್ಲೆ. ಪ್ರತಿ ವಿಭಾಗಲ್ಲಿಯೂ ಪ್ರಥಮದೆ ಎರಡನೆಯ ಹೇಳುವ ಎರಡು ಬಹುಮಾನಂಗಳ ಕೊಡುತ್ತವು. ಅಗತ್ಯ ಸಂದರ್ಭಲ್ಲಿ ಪೆÇ್ರೀತ್ಸಾಹಕ ಬಹುಮಾನವನ್ನುದೆ ನೀಡುವ ಸಾಧ್ಯತೆಯೂ ಇಲ್ಲದಿಲ್ಲೆ.  ಕಳುದ ವಿಷು ವಿಶೇಷ ಸ್ಪರ್ಧೆ- 2019 ರಲ್ಲಿ ಪ್ರಥಮ ಅಥವಾ ಎರಡನೇ ಸ್ಥಾನ ಪಡದವು ಈ ಸರ್ತಿ ಅದೇ ವಿಭಾಗದಲ್ಲಿ ಭಾಗವಹಿಸುವ ಹಾಂಗಿಲ್ಲೆ.  ಬಹುಮಾನ ಗೆದ್ದೋರ  ವಿವರಂಗಳ ವಿಷು ಪರ್ವದ ದಿನ (ಏ.14ರಂದು)  ಒಪ್ಪಣ್ಣ ಡಾಟ್ ಕಾಮ್ ಅಂತರ್ಜಾಲಲ್ಲಿ ಪ್ರಕಟ ಮಾಡುತ್ತವು. ಹಸ್ತಪ್ರತಿಗಳ ಕಳುಸುವುದಾದರೆ ಕಡ್ಡಾಯವಾಗಿ ಎ4 ಹಾಳೆಲ್ಲಿ ಬರೆದು ಕಳಿಸೆಕ್ಕು. ಭಾಗವಹಿಸುವ ಉಮೇದಿನವು  ಏ. 3 ರ ಮೊದಲು ಅಧಿಕೃತರಿಂಗೆ ಸಿಕ್ಕುವ ಹಾಂಗೆ  ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಂಗಳ ಕಡ್ಡಾಯವಾಗಿ ಪ್ರತ್ಯೇಕ ಹಾಳೆಯಲ್ಲಿ ಬರದು ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ), ಶ್ರೀಕರ ಅಸೋಸಿಯೇಟ್ಸ್, ಪ್ರಥಮ ಮಹಡಿ, ಕಲ್ಪತರು ಸಂಕೀರ್ಣ ಗಾಂಧಿ ನಗರ, ಸುಳ್ಯ * 574239. ಮಿಂಚಂಚೆ ವಿಳಾಸ: ಎಡಿಟರ್ ಅಟ್ ಒಪ್ಪಣ್ಣ ಡಾಟ್ ಕಾಂ ವಿಳಾಶಕ್ಕೆ ಕಳುಸುಲಕ್ಕು. ಹೆಚ್ಚಿನ ವಿವರಂಗೋಕ್ಕೆ 9901200134, 9449806563, 8547245304, 9448271447, 9448472292, ಅಥವಾ ಒಪ್ಪಣ್ಣ ಅಂತರ್ಜಾಲ ಪುಟವ ನೋಡಲಕ್ಕು ಹೇಳಿ ಪ್ರತಿಷ್ಠಾನದ ವಿಶೇಷ ಹೇಳಿಕೆಲಿ ಹೇಳಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries