HEALTH TIPS

ಕೊರೋನಾ ಪ್ರತಿರೋಧ ಚಟುವಟಿಕೆ- ಗಮನ ಸೆಳೆಯುತ್ತಿರುವ 'ಬ್ರೇಕ್ ದಿ ಚೈನ್'ಅಭಿಯಾನ


        ಕಾಸರಗೋಡು: ಕೊರೋನಾ ಪ್ರತಿರೋಧ ಚಟುವಟಿಕೆಗಳಿಗೆ ಗಡಿನಾಡು ಕಾಸರಗೋಡು ಜಿಲ್ಲೆ ಸಮರ್ಥವಾಗಿ ಕೈಜೋಡಿಸುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ತರಂಗ ಸೃಷ್ಟಿಸುವ ಮೂಲಕ 'ಬ್ರೇಕ್ ದಿ ಚೈನ್' ಗಮನಸೆಳೆಯುತ್ತಿದೆ. ಕೋವಿಡ್-19 ವೈರಸ್ ವಿರುದ್ಧ ರಾಜ್ಯಾದ್ಯಂತ ನಡೆಸಲಾಗುತ್ತಿರುವ 'ಬ್ರೇಕ್ ದಿ ಚೈನ್' ಎಂಬ ಅಭಿಯಾನಕ್ಕೆ ಕಾಸರಗೋಡು ಜಿಲ್ಲೆಯಲ್ಲೂ ವ್ಯಾಪಾಕ ಪ್ರಚಾರ ಲಭಿಸುತ್ತಿದೆ.
       ಈ ವೈರಸ್ ಹರಡುವಿಕೆಯ ಸಾಧ್ಯತೆ ಮತ್ತು ತೀವ್ರತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಮಹಾಮಾರಿ ಎಂಬ ಕುಖ್ಯಾತಿಗೆ ಕಾರಣವಾಗಿರುವ ಕೊರೋನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ'ವೈಜ್ಞಾನಿಕ ರೀತಿಯಲ್ಲಿ ಕೈತೊಳೆಯುವ ಅಭಿಂiÀiನ'ಆರಂಭಗೊಂಡಿದೆ. ಈ ನಿಟ್ಟನಲ್ಲಿ ಮಕ್ಕಳು, ವಿದ್ಯಾರ್ಥಿಗಳು, ಹಿರಿಯರೂ ಸೇರಿದಂತೆ ಅನೇಕ ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ರಂಗಕ್ಕಿಳಿದಿದ್ದಾರೆ.
ಪ್ರತ್ಯೇಕ ಹ್ಯಾಷ್ ಟ್ಯಾಗ್‍ನಲಿಕೀ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದೆ. ಅಭಿಯಾನದ ಅಂಗವಾಗಿ ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಸಂಸ್ಥೆಗಳು, ಬ್ಯಾಂಕ್‍ಗಳು ಇತ್ಯಾದಿ ಕಡೆ ಹ್ಯಾಂಡ್ ಸಾನಿಟೈಸರ್ ಯಾ ಹ್ಯಾಂಡ್ ವಾಷ್ ಸಾಬೂನು ಬಳಸಿ ಕೈತೊಳೆಯಲು ಸೌಲಭ್ಯ ಏರ್ಪಡಿಸಲಾಗಿದೆ. ಸಿಬ್ಬಂದಿ, ಸಾರ್ವಜನಿಕರು ಕಚೇರಿಗಳಿಗೆ ಪ್ರವೇಶಿಸುವ ಮುನ್ನ ಈ ಸೌಲಭ್ಯ ಬಳಸುತ್ತಿದ್ದಾರೆ.
                      ಮಾದರಿಯಾದ ಜಿಲ್ಲಾಧಿಕಾರಿ ಕಚೇರಿ:
     ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲೂ ಕೈತೊಳೆಯುವ ಅಭಿಯಾನ ಆರಂಭಗೊಂಡಿದೆ. ಕಚೇರಿಯ ಪ್ರಧಾನ ದ್ವಾರದಲ್ಲಿ ಜಿಲ್ಲಾಡಳಿತ5 ವತಿಯಿಂದ ಹ್ಯಾಂಡ್ ಸಾನಿಟೈಸರ್ ಲಭ್ಯವಿದೆ. ಇದನ್ನು ಬಳಸಿದ ನಂತರ ಸಿಬ್ಬಂದಿ, ಸಾರ್ವಜನಿಕರು ಇಲ್ಲಿನ ವಿವಿಧ ಕಚೇರಿಗಳಿಗೆ ತೆರಳುತ್ತಿದ್ದಾರೆ. ಅಭಿಯಾನದ ಅಂಗವಾಗಿ ಪ್ರಧಾನ ಕಚೇರಿಗಳ ದ್ವಾರಗಳಲ್ಲಿ 'ಬ್ರೇಕ್ ದಿ ಚೈನ್' ಕಿಯಾಸ್ಕ್‍ಗಳನ್ನು ಸ್ಥಾಪಿಸುವ ಯೋಜನೆಗಳಿವೆ.
          ಕೈಜೋಡಿಸಬೇಕು:
      ಸಮಾಜ ಕೈತೊಳೆಯುವ ಅಭಿಯಾನದ ಯಶಸ್ಸಿಗೆ ಯುವಜನ ಸಂಘಟನೆಗಳ, ಸ್ವಯಂ ಸೇವಾ ಸಂಘಟನೆಗಳ, ರೆಸಿಡೆನ್‍ಶಿಯಲ್ ಅಸೋಸಿಯೇಶನ್ ಇತ್ಯಾದಿಗಳ ಸಹಕಾರ ಅಗತ್ಯ ಎಂದು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ವಿನಂತಿಸಿದರು.ಸಂಸ್ಥೆಗಳಲ್ಲಿ, ಮನೆಗಳಲ್ಲಿ &quoಣ;ಬ್ರೇಕ್ ದಿ ಚೈನ್&quoಣ; ಕಿಯಾಸ್ಕ್ ಗಳನ್ನು ಇರಿಸಿ ಕೈಗಳ ಶುಚಿತ್ವ ಖಚಿತಗೊಳಿಸಬೇಕು. ಬಸ್ ನಿಲ್ದಾಣಗಳು,ಮಾರುಕಟ್ಟೆಗಳು ಇತ್ಯಾದಿ ಕಡೆಗಳಲ್ಲೂ ಸಾಬೂನು ಬಳಸಿ ಕೈ ಶುಚಿಗೊಳಿಸಲು ವ್ಯವಸ್ಥೆ ಏರ್ಪಡಿಸಬೇಕು. ಹಸ್ತಲಾಘವ, ಮುಖ,ಮೂಗು, ಕಣ್ಣುಗಳು ಇತ್ಯಾದಿಗಳನ್ನು ಸ್ಪರ್ಶಿಸಬಾರದು. ಸೀನುವಿಕೆ, ಕೆಮ್ಮುವಿಕೆ ವೇಳೆ ಕರವಸ್ತ್ರ ಬಳಸಬೇಕು. ಆಗಾಗ ಸಾಬೂನು ಬಳಸಿ ಕೈತೊಳೆಯಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries