ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು, ತೈಲ ಬೆಲೆ ಕುಸಿತ ಮತ್ತು ಅಮೆರಿಕ ಯುರೋಪ್ ನಿಂದ ತಾತ್ಕಾಲಿಕವಾಗಿ ಪ್ರಯಾಣ ನಿಬರ್ಂಧವನ್ನು ಹೇರಿರುವುದರ ನಡುವೆ ಭಾರತದ ಷೇರು ಮಾರುಕಟ್ಟೆ ಗುರುವಾರ ಬೆಳಗ್ಗೆ ವಹಿವಾಟು ಆರಂಭದಲ್ಲಿಯೇ ತೀವ್ರ ಕುಸಿತ ಕಂಡುಬಂದಿದೆ.
ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸಾವಿರದ 672.09 ಅಂಕ ಕುಸಿತ ಕಂಡುಬಂದು 34 ಸಾವಿರದ 025.31ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 490.40 ಅಂಕ ಕುಸಿತ ಕಂಡು 9 ಸಾವಿರದ 968ರಲ್ಲಿ ವಹಿವಾಟು ನಡೆಸಿತು. 2018ರ ಮಾರ್ಚ್ 26ರ ನಂತರ ನಿಫ್ಟಿ 10 ಸಾವಿರದ ಕೆಳಗೆ ವಹಿವಾಟು ನಡೆಸಿದ್ದು ಇದೇ ಮೊದಲು.ಇಂದಿನ ವಹಿವಾಟುಗಳಲ್ಲಿ ಇದುವರೆಗೆ 87 ಷೇರುಗಳ ಸೂಚ್ಯಂಕ ಏರಿಕೆ ಕಂಡು 924 ಕುಸಿತ ಕಂಡುಬಂತು.21 ಷೇರುಗಳ ಸಂವೇದಿ ಸೂಚ್ಯಂಕ ಬದಲಾಗಲಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ 61 ಪೈಸೆ ಇಳಿಕೆಯಾಗಿ 74 ರೂಪಾಯಿಯಾಗಿ 25 ಪೈಸೆಯಾಗಿದೆ.ಎಸ್ ಅಂಡ್ ಪಿ ಸೆನ್ಸೆಕ್ಸ್ 2 ಸಾವಿರದ 707.39 ಅಂಕಗಳಷ್ಟು ಕುಸಿತ ಕಂಡುಬಂದು ಇಂದು ಬೆಳಗ್ಗೆ 32 ಸಾವಿರದ 990ರಲ್ಲಿ ವಹಿವಾಟು ನಡೆಸಿತು. ಇತ್ತೀಚಿನ ವರದಿಯಂತೆ ಷೇರು ವಹಿವಾಟಿನಲ್ಲಿ ಸೆನ್ಸೆಕ್ಸ್ 2477 ಅಂಕ ಕುಸಿತ ಕಂಡುಬಂದು 33,174ರಲ್ಲಿ ನಿಫ್ಟಿ 756 ಅಂಕ ಕುಸಿತ ಕಂಡುಬಂದು 9,702ರಲ್ಲಿ ವಹಿವಾಟು ನಡೆಸುತ್ತಿತ್ತು.
ಷೇರುಮಾರುಕಟ್ಟೆ ಸೂಚ್ಯಂಕ ಕುಸಿತ 11 ವಲಯಗಳ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಿದೆ. ನಿಫ್ಟಿ ಬ್ಯಾಂಕು ಶೇಕಡಾ 8.52ರಷ್ಟು ಕುಸಿತ ಕಂಡುಬಂತು.ನಿಫ್ಟಿ ಕುಸಿತದಿಂದ ಬಿಪಿಸಿಎಲ್, ಯಸ್ ಬ್ಯಾಂಕು, ವೇದಾಂತ, ಟಾಟಾ ಮೋಟಾರ್ಸ್, ಎಕ್ಸಿಸ್ ಬ್ಯಾಂಕು, ಅದಾನಿ ಪೆÇೀಟ್ರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಗೈಲ್ ಕಂಪೆನಿಗಳ ಷೇರುಗಳು ಶೇಕಡಾ 10.44ರಿಂದ ಶೇಕಡಾ 15.94ರಷ್ಟು ಕುಸಿತ ಕಂಡುಬಂದವು.
ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ಮೇಲೆ ಕೊರೊನಾ ಭೀತಿ ತೀವ್ರವಾಗಿ ಕಾಡುತ್ತಿದ್ದು ಆರ್ಥಿಕ ಪರಿಸ್ಥಿತಿ ತಲ್ಲಣವಾಗಲಿದೆ.


