ನವದೆಹಲಿ: ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಭಾರತದಲ್ಲಿ ಒಟ್ಟು 73 ಮಂದಿ ತುತ್ತಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಕುರಿತಂತೆ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, ಈ ಸೋಂಕಿತರ ಪಟ್ಟಿಯಲ್ಲಿ ಭಾರತದಲ್ಲಿರುವ ವಿದೇಶಿಗರೂ ಕೂಡ ಸೇರಿದ್ದಾರೆ ಎಂದು ಹೇಳಿದೆ.ಈ ಪೈಕಿ ಹರ್ಯಾಣದಲ್ಲಿ 14 ಮಂದಿ ವಿದೇಶಿಗರು, ದೆಹಲಿಯಲ್ಲಿ 6 ಮಂದಿ ಭಾರತೀಯರು, ಕೇರಳದಲ್ಲಿ 17 ಮಂದಿ, ರಾಜಸ್ಥಾನ ಮೂರು (1 ಭಾರತೀಯ, 2 ವಿದೇಶಿಗರು), ತೆಲಂಗಾಣ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ನಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿದೆ.
ಜೊತೆಗೆ ಅಂತೆಯೇ ಉತ್ತರ ಪ್ರದೇಶದಲ್ಲಿ 10 ಮಂದಿ ಭಾರತೀಯರು ಮತ್ತು ಓರ್ವ ವಿದೇಶಿಗ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಢಾಕ್ ನಲ್ಲಿ 3 ಮಂದಿ, ಕರ್ನಾಟಕದಲ್ಲಿ ನಾಲ್ಕು ಮಂದಿ, ಮಹಾರಾಷ್ಟ್ರದಲ್ಲಿ 11 ಮಂದಿ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆ ದೇಶದಲ್ಲಿ 73 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 56 ಮಂದಿ ಭಾರತೀಯರು ಮತ್ತು 17 ಮಂದಿ ವಿದೇಶಿಗರು ಇದ್ದಾರೆ ಎನ್ನಲಾಗಿದೆ.
Ministry of Health and Family Welfare, Government of India: Total number of confirmed COVID-19 cases across India (including foreign nationals) is 73.
310 people are talking about this



