HEALTH TIPS

ಐಟಿ ರಿಟಸ್ರ್ಸ್ ಸಲ್ಲಿಕೆ ಅಂತಿಮ ಗಡುವು ಜೂನ್ 30ಕ್ಕೆ ವಿಸ್ತರಣೆ, ಆಧಾರ್-ಪ್ಯಾನ್ ಲಿಂಕ್ ಗೂ ವಿನಾಯಿತಿ

     
     ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಕೊರೋನಾ ವೈರಸ್ ಬಗ್ಗೆ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾತನಾಡುವ ಮೊದಲು ಟ್ವೀಟ್ ಮಾಡಿ , ಕೊರೋನಾ ವೈರಸ್ ಸೋಂಕಿನಿಂದ ಇಂದು ದೇಶದಲ್ಲಿ ಉಂಟಾಗಿರುವ ವಿಷಮ ಪರಿಸ್ಥಿತಿ ವಿರುದ್ಧ ಹೋರಾಡಲು ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದಾರೆ.
      ನಿರ್ಮಲಾ ಸೀತಾರಾಮನ್ ಅವರ ಭಾಷಣದ ಪ್ರಮುಖಾಂಶಗಳು:
 ಬ್ಯಾಂಕ್ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆಗಾಗಿನ ಶುಲ್ಕ ವಿಧಿಸುವುದಿಲ್ಲ ಡಿಜಿಟಲ್ ವ್ಯಾಪಾರ ಮತ್ತು ವಹಿವಾಟುಗಳಿಗೆ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಲಾಗಿದೆ.
 ನಾವು ಆರ್ಥಿಕ ಪ್ಯಾಕೇಜ್ ನೊಡನೆ ಅತಿ ಶೀಘ್ರದಲ್ಲೇ ಬರಲಿದ್ದೇವೆ. 2019-2020ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟನ್ರ್ಸ್ ಸಲ್ಲಿಸುವ ಕೊನೆಯ ದಿನಾಂಕವನ್ನು 2020 ರ ಜೂನ್ 30 ಕ್ಕೆ ವಿಸ್ತರಿಸಲಾಗಿದೆ. ವಿಳಂಬವಾದ ಪಾವತಿಗಳಿಗಾಗಿ ಬಡ್ಡಿದರವನ್ನು 12% ರಿಂದ 9% ಕ್ಕೆ ಇಳಿಸಲಾಗಿದೆ.
 ಆಧಾರ್-ಪ್ಯಾನ್ ಲಿಂಕ್ ಮಾಡುವ ದಿನಾಂಕ ಮತ್ತು ವಿವಾದ್  ಸೆ ವಿಶ್ವಾಸ್ ಯೋಜನೆಯನ್ನು 2020 ರ ಜೂನ್ 30ರವರೆಗೆ ಮುಂದುವರಿಸಲಾಗುವುದು.
 ಮಾರ್ಚ್, ಏಪ್ರಿಲ್, ಮೇ 2020 ರ  ಜಿಎಸ್ಟಿ ರಿಟನ್ರ್ಸ್ ಹಾಗೂ ಕಾಂಪೇಷನ್ ರಿಟನ್ರ್ಸ್ ಸಲ್ಲಿಕೆಯ ಅಂತಿಮ ದಿನಾಂಕವನ್ನಾಗಿ ಜೂನ್ 30, 2020ನ್ನು ನಿಗದಿ ಮಾಡಲಾಗಿದೆ.
 5 ಕೋಟಿ ರೂ.ಗಿಂತ ಕಡಿಮೆ ವಹಿವಾಟು,ನಡೆಸುವ ಯಾವುದೇ ಕಂಪನಿಗೆ  ದಂಡ ಅಥವಾ ಬಡ್ಡಿ ಅಥವಾ ವಿಳಂಬ ಶುಲ್ಕ ವಿಧಿಸಲಾಗುವುದಿಲ್ಲ.5 ಕೋಟಿ ರೂ.ಗಳ ವಹಿವಾಟು ಹೊಂದಿರುವ ದೊಡ್ಡ ಕಂಪನಿಗಳಿಗೆ, ಶೇಕಡಾ 9 ರಷ್ಟು ಕಡಿಮೆ ದರದಲ್ಲಿ ಬಡ್ಡಿ ವಿಧಿಸಲಾಗುತ್ತದೆ.
 ಆಮದು / ರಫ್ತುದಾರರಿಗೆ ಪರಿಹಾರ: ಕಸ್ಟಮ್ಸ್ ಇಲಾಖೆ ತನ್ನ ಕರ್ತವ್ಯ ಪಾಲನೆಯಲ್ಲಿದೆ.  ಜೂನ್ 30, 2020 ರವರೆಗೆ  ಈ ವಿಭಾಗವು 24x7 ಅತ್ಯಗತ್ಯ ಸೇವೆಯಾಗಿ ಮುಂದುವರಿಯಲಿದೆ.
 ಸಂಪತ್ತು ತೆರಿಗೆ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಬೆನಾಮಿ ವಹಿವಾಟು ಕಾಯ್ದೆ, ಕಪ್ಪು ಹಣ ಕಾಯ್ದೆ ಅಡಿಯಲ್ಲಿರುವ ಎಲ್ಲಾ  ಅನುಸರಣೆಗಳನ್ನು 2020 ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ.
 ಕಂಪನಿಯ ನಿರ್ದೇಶಕರು ಕನಿಷ್ಟ ರೆಸಿಡೆನ್ಸಿಯನ್ನು ಅನುಸರಿಸದಿದ್ದಲ್ಲಿ (182 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ಉಳಿಯುವುದು), ಇದನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ:
 "ಹೊಸದಾಗಿ ಸಂಯೋಜಿತ ಕಂಪನಿಗಳಿಗೆ, 6 ತಿಂಗಳಲ್ಲಿ ವ್ಯವಹಾರ ಪ್ರಾರಂಭದ ಘೋಷಣೆಯನ್ನು ಸಲ್ಲಿಸುವ ಅವಶ್ಯಕತೆಯಿದೆ, ನಾವು ಈಗ ಹೆಚ್ಚುವರಿ 6 ತಿಂಗಳ ಸಮಯವನ್ನು ನೀಡುತ್ತೇವೆ" ಎಂದು ಸೀತಾರಾಮನ್ ಹೇಳಿದ್ದಾರೆ.
 ಸಣ್ಣ ಉದ್ಯಮಗಳಿಗೆ ಪರಿಹಾರವಾಗಿ, ದಿವಾಳಿತನ ಪ್ರಕ್ರಿಯೆಗಳ  ಮಿತಿಯನ್ನು ಅಸ್ತಿತ್ವದಲ್ಲಿರುವ 1 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ವಿಸ್ತರಿಸಲಾಗಿದೆ: .
 ಎಟಿಎಂಗಳಿಂದ ಡೆಬಿಟ್ ಕಾರ್ಡ್ ನಿಂದ ಹಣ ವಿತ್ ಡ್ರಾ ಮಾಡುವವರಿಗೆ ಮುಂದಿನ ಮೂರು ತಿಂಗಳವರೆಗೆ ಹೆಚ್ಚುವರಿ ಹಣ ವಿತ್ ಡ್ರಾಗಾಗಿನ ಶುಲ್ಕ ವಿಧಿಸಲಾಗುವುದಿಲ್ಲ. ಈ ಹಿಂಪಡೆಯುವಿಕೆಯನ್ನು ಯಾವುದೇ ಎಟಿಎಂಗಳಿಂದ ಮಾಡಬಹುದಾಗಿದೆ ಎಂದು ಹಣಕಾಸು ಸಚಿವರು ಹೇಳಿದರು,
 ಪ್ರಸ್ತುತ ಪರಿಸ್ಥಿತಿಗಳು ಆರು ತಿಂಗಳುಗಳನ್ನು ಮೀರಿದರೆ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್ 7, 9 ಮತ್ತು 10 ಅನ್ನು ಅಮಾನತುಗೊಳಿಸುವ ಬಗೆಗೆ ನಾವು ಪರಿಗಣಿಸುತ್ತೇವೆ.
Even as we are readying an economic package to help us through the Corona lockdown (on priority, to be announced soon) I will address the media at 2pm today, specifically on statutory and regulatory compliance matters. Via video conference. @FinMinIndia @PIB_India @ANI @PTI_News
4,076 people are talking about this

.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries