ಬದಿಯಡ್ಕ: ಕಳೆದ ಏಳು ವರ್ಷಗಳಿಂದ ರಾಮಾಯಣ ಮಾಸಾಚರಣೆಯನ್ನು ಮನ ಮನೆಗಳಲ್ಲಿ ದೈವೀಗುಣಗಳನ್ನು ಉಳಿಸಿ ಬೆಳೆಸು ಉದ್ದೇಶದಿಂದ ಪುಂಡರೀಕಾಕ್ಷ ಬೆಳ್ಳೂರು ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಕರ್ಕಾಟಕ ಸಂಕ್ರಾಂತಿಯಿಂದ ಸಿಂಹ ಸಂಕ್ರಮಣದವರೆಗೆ 33 ದಿನಗಳ ಕಾಲ, ಪುತ್ರಕಾಮೇಷ್ಠಿಯಿಂದ ರಾಮ ನಿರ್ಯಾಣದವರೆಗೆ ಹರಿಕಥೆಯ ಮೂಲಕ ರಾಮಾದರ್ಶ ಜೀವನ-ಗ್ರಾಮಾದರ್ಶ ಮನೆಯ ಲಕ್ಷ್ಯವಿರಿಸಿ ರಾಮನಾಮ ಜಪವನ್ನು ಮಾಡಿಸಿ ಕೊನೆಯಲ್ಲಿ, ಆದಿತ್ಯ ಹೃದಯ ಹವನ, ಸೀತಾಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, 108 ಕಾಯಿ ಗಣಪತಿ ಹೋಮ ಹಾಗೂ ಇನ್ನಿತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವರ್ಷ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶ್ರೀರಾಮ ಪಟ್ಟಾಭಿಷೇಕ ಹಾಗೂ ಸುತ್ತಮುತ್ತಲಿನ ಭಜನಾ ಮಂದಿರ, ಮನೆಗಳಲ್ಲಿ ಹರಿಕಥಾ ಸತ್ಸಂಗ, ರಾಮನಾಮ ಜಪಯಜ್ಞವನ್ನು ಮಾಡುವುದಾಗಿ ತೀರ್ಮಾನಿಸಲಾಗಿದ್ದು, ಈ ಕಾರ್ಯದ ಯಶಸ್ಸಿಗಾಗಿ ಮಾ.8ರಂದು ಭಾನುವಾರ ಸಂಜೆ 3.30ಕ್ಕೆ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು, ಭಕ್ತಾದಿಗಳು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಪುಂಡರೀಕಾಕ್ಷ ಬೆಳ್ಳೂರು ತಿಳಿಸಿರುತ್ತಾರೆ.



