ಕುಂಬಳೆ: ಆರಿಕ್ಕಾಡಿ ಕಾರ್ಳೆ ಶ್ರೀಕಾಳಿಕಾಂಬಾ ಕ್ಷೇತ್ರದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶುಕ್ರವಾರ ಆರಂಭಗೊಂಡಿದ್ದು ಮಾ.12ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 7 ರಿಂದ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿಹೋಮ, ಶ್ರೀದೇವರ ಉಷಃಪೂಜೆ ನಡೆಯಿತು. ಬಳಿಕ 10ಕ್ಕೆ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮಧ್ಯಾಹ್ನ 12.30ಕ್ಕೆ ಶ್ರೀದೇವರ ಪೂಜೆ, ಸಂಜೆ 6.30ಕ್ಕೆ ಯಾಗಮಂಟಪ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತು ರಾಕ್ಷೋಘ್ನಾದಿ ಹೋಮಾದಿಗಳು ನಡೆಯಿತು. ವಿವಿಧ ಭಜನಾ ತಂಡಗಳಿಂದ ಬೆಳಿಗ್ಗೆ 8 ರಿಂದ ಭಜನಾ ಸಂಕೀರ್ತನೆ ರಾತ್ರಿ 8ರ ವರೆಗೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1ರಿಂದ ಕಲಾರತ್ನ ಶಂ.ನಾ ಅಡಿಗ ಕುಂಬಳೆ ಅವರ ಶಿಷ್ಯವೃಂದದಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಿತು. ಸಂಜೆ 7 ರಿಂದ ನೃತ್ಯೋತ್ಸವ ನಡೆಯಿತು.
ಇಂದಿನ ಕಾರ್ಯಕ್ರಮ(ಶನಿವಾರ)
ಶನಿವಾರ ಬೆಳಿಗ್ಗೆ 6.30ರಿಂದ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿ ಹೋಮ, ಬಿಂಬ ಸಂಕೋಚ, ಬಿಂಬ ಶುದ್ದಿ, ಬಿಂಬ ಜಲಾಧಿವಾಸ, ಪೀಠಾಧಿವಾಸ, ಬಾಲಾಲಯ ವಿಸರ್ಜನೆ, ಯಾಗ ಮಂಟಪದಲ್ಲಿ 108 ಕಾಯಿ ಮಹಾಗಣಪತಿ ಹವನ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ 6.30 ರಿಂದ ಮಹಾಗಣಪತಿ ಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಧ್ಯಾನಾಧಿವಾಸ, ಬಿಂಬ ಶುದ್ದಿ, ತತ್ವನ್ಯಾಸ, ಶಯ್ಯಾಧಿವಾಸ, ನಿದ್ರಾಕುಂಭ ಸ್ಥಾಪನೆ, ಪ್ರತಿಷ್ಠಾಂಗ ತತ್ವಹೋಮ, ಅಧಿವಾಸ ಹೋಮ, ಪೀಠಾಧಿವಾಸ, ಶಿಖರಾಧಿವಾಸ, ಪ್ರಾಯಶ್ಚಿತ್ತಾದಿ ಹೋಮ, ಮಹಾಬಲಿಪೀಠ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಕವಿಗೋಷ್ಠಿ ನಡೆಯಲಿದೆ. ಅಶೋಕ ಎನ್ ಆಚಾರ್ಯ ಕಡೇಶಿವಾಲಯ ಅಧ್ಯಕ್ಷತೆ ವಹಿಸುವರು. ಪೂಜ್ಯ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಡಾ.ಜಿ.ಜ್ಞಾನಾನಂದ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಮಲಾರ್ ಜಯರಾಮ ರೈ ಉಪಸ್ಥಿತರಿರುವರು. ರಾತ್ರಿ 7 ರಿಂದ ಕುಂಟಾರು ಪ್ರಕಾಶ ಆಚಾರ್ಯ ತಂಡದವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ, ಬಳಿಕ ಭಕ್ತಿಗಾನಸುಧಾ ನಡೆಯಲಿದೆ. ಸಂಜೆ 4ಕ್ಕೆ ಯುವ ಸಂಗಮ ನಡೆಯಲಿದ್ದು ಯೋಗೀಶ ಆಚಾರ್ಯ ಮಠದಮೂಲೆ ಅಧ್ಯಕ್ಷತೆ ವಹಿಸುವರು. ಕಾಳಹಸ್ತೇಂದ್ರ ಸರಸ್ವತೀ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು.



