ಕಾಸರಗೋಡು: ಕಳನಾಡಿನ ವ್ಯಕ್ತಿಯಲ್ಲಿ ಕೋವಿಡ್-19 ವೈರಸ್ ಖಾತ್ರಿಗೊಂಡಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿ ಸಂಪರ್ಕಿಸಿರುವ 42ಮಂದಿಯಲ್ಲಿ 34ಮಂದಿಯನ್ನು ಗುರುತಿಸಲಾಗಿದ್ದು, ಇವರ ಮೇಲೆ ನಿಗಾಯಿರಿಸಲಾಗಿದೆ. ಉಳಿದವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಅಲ್ಲದೆ ವಿದೇಶದಿಂದ ಆಗಮಿಸುವ ಸಂದರ್ಭ ಸುಮಾರು 250ಮಂದಿಯನ್ನು ಇವರು ಸಂಪರ್ಕಿಸಿರುವ ಸಾಧ್ಯತೆಯಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸುತ್ತಾರೆ.
ಕೊರೊನಾ ವೈರಸ್ ಸೋಂಕು ತಡೆಗಟ್ಟಲು ಸರ್ಕಾರ ನೀಡಿದ್ದ ನಿರ್ದೇಶ ಉಲ್ಲಂಘಿಸುವವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕ್ರಮ ಆರಂಭಿಸಿದೆ.

