ವಾಷಿಂಗ್ಟನ್: 'ಜಗತ್ತಿಗೇ ಮಹಾಮಾರಿಯಾಗಿ ಕಾಡುತ್ತಿರುವ ಕೊರೋನಾ ವೈರಸ್ ನ್ನು ಹರಡಲು ಬಿಟ್ಟ ಚೀನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರಾರಂಭಿಕ ಹಂತದಲ್ಲಿ ಕೊರೋನಾ ವೈರಾಣುವಿನ ಬಗ್ಗೆ ಸರಿಯಾದ ಮಾಹಿತಿ ನೀಡದೇ ಹರಡಲು ಬಿಟ್ಟು, ಗೌಪ್ಯವಾಗಿಟ್ಟಿದ್ದಕ್ಕೆ ಚೀನಾ ವಿರುದ್ಧ ಹಾಗೂ ತಪ್ಪು ಮಾಹಿತಿ ನೀಡಿದ ಇರಾನ್, ರಷ್ಯಾ, ವಿರುದ್ಧ ಅಮೆರಿಕ ಸಚಿವ ಮೈಕ್ ಪೆÇಂಪಿಯೊ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೊರೋನಾ ಗೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿರುವ ಡೊನಾಲ್ಡ್ ಟ್ರಂಪ್ ಕೊರೋನಾ ವೈರಸ್ ನ್ನು ಚೀನಾ ವೈರಸ್ ಎಂದು ಹೇಳಿದ್ದರು. ಆ ವೈರಸ್ ಚೀನಾದಿಂದ ಬಂದಿದ್ದು, ಕೈ ಮೀರಿ ಹೋಗಿದೆ. ಕೆಲವು ಜನರಿಗೆ ಇದರಿಂದ ಬೇಸರವಾಗಿದೆ, ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಚೀನಾವನ್ನು ಪ್ರೀತಿಸುತ್ತಾರೆ. ಅಮೆರಿಕವನ್ನು ಗೌರವಿಸುತ್ತಾರೆ. ನಾನೂ ಚೀನಾವನ್ನು ಗೌರವಿಸುತ್ತೇನೆ, ಕ್ಸೀ ಜಿನ್ ಪಿಂಗ್ ಅವರನ್ನೂ ಗೌರವಿಸುತ್ತೇನೆ ಎಂದು ಟ್ರಂಪ್ ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೇ ಫಾಕ್ಸ್ ನ್ಯೂಸ್ ಕೊರೋನಾ ವೈರಸ್ ಸಂಬಂಧ ನಡೆಸಿದ ವಿಶ್ಲೇಷಣೆಯಲ್ಲಿ ಕೊರೋನಾ ಹರಡಿದ್ದಕ್ಕೆ ಚೀನಾ ಕಾನೂನಿಗೆ ಉತ್ತರದಾಯಿಯಾಗಬೇಕಾಗುತ್ತದೆ ಎಂದು ಹೇಳಲಾಗಿದೆ.
ಹೇಗೆ ಭಯೋತ್ಪಾದನೆಗೆ ಬೆಂಬಲಿಸುವುದಕ್ಕೆ ಕಾನೂನು ಕ್ರಮ ಜರುಗಿಸಬಹುದೋ ಹಾಗೆಯೇ ವಿಶ್ವಾದ್ಯಂತ ಹರಡುವ ಸಾಮಥ್ರ್ಯ ಹೊಂದಿರುವ ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸಿ, ಮಾಹಿತಿ ಮುಚ್ಚಿಟ್ಟಿದ್ದಕ್ಕೆ ಚೀನಾ ಕಾನೂನುಬದ್ಧವಾಗಿ ಹೊಣೆಗಾರನಾಗುತ್ತದೆ ಎಂಬ ವಾದ ಮಂಡಿಸಬಹುದು ಎಂದು ಇಸ್ರೇಲ್ ಮೂಲದ ಅಟಾರ್ನಿಯೊಬ್ಬರು ಹೇಳಿದ್ದಾರೆ.


