ಮುಳ್ಳೇರಿಯ: ಕುಂಬಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರವೆನಿಸಿದ ಅಡೂರು ಕ್ಷೇತ್ರದಲ್ಲಿ ಮಾ.11 ರಂದು ಧ್ವಜಾರೋಹಣವಾಗಲಿದ್ದು, ಮಾ.20 ರ ವರೆಗೆ ವೈಭವದ ಜಾತ್ರೋತ್ಸವ ನಡೆಯಲಿದೆ.
ಜಾತ್ರೋತ್ಸವದ ಅಂಗವಾಗಿ ವಿಶೇಷ ಸಭೆಯು ಉತ್ಸವ ಸಮಿತಿಯ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದು ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಉತ್ಸವ ಸಮಯದಲ್ಲಿ ಶುಚಿತ್ವ ಕಾಪಾಡುವುದು, ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ನಿರ್ಣಯ, ಬೆಳಕು ಹಾಗೂ ಶುಭ್ರ ನೀರಿನ ಸರಬರಾಜು ಮಾಡುವುದು, ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಆಡಳಿತದ ಸಹಕಾರ ಪಡೆಯುವುದು. ರಾತ್ರಿ ಉತ್ಸವ ಸಮಯದಲ್ಲಿ ಆರಕ್ಷಕರ ಸೂಕ್ತ ಸಹಕಾರ ಪಡೆಯುವುದು. ಬಂದಂತಹ ಅತಿಥಿಗಳನ್ನು ಸ್ವಾಗತಿಸಿ ಗೌರವಿಸುವುದು ಎಂಬೀ ವಿಷಯವಾಗಿ ಚರ್ಚಿಸಿ ಹೆಚ್ಚು ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕ್ಷೇತ್ರದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅಡೂರಿನಲ್ಲಿ ಶ್ರೀ ಧರ್ಮಶಾಸ್ತಾರ ಭಜನಾ ಮಂದಿರ ನಿರ್ಮಾಣಕ್ಕೆ ಕಾರಣರಾದ ಅಲ್ಲದೇ ನೂರಿನ್ನೂರು ಶಿಷ್ಯರನ್ನು ಹೊಂದಿ ಕಳೆದ 38 ವರ್ಷಗಳಲ್ಲಿ ನಿರಂತರ ಶಬರಿಮಲೆ ಯಾತ್ರೆ ಮಾಡುತ್ತಿದ್ದು ಮಾ.6 ರಂದು ನಿಧನರಾದ ಅಪ್ಪಕುಂಞÂ ಗುರಸ್ವಾಮಿಯವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಉತ್ಸವ ಸಮಿತಿಯ ಪ್ರತಿನಿಧಿ ಬೆಳ್ಳಿಪ್ಪಾಡಿ ಸದಾಶಿವ ರೈ ನುಡಿ ನಮನ ಸಲ್ಲಿಸಿದರು. ಮೇನೇಜರ್ ಗಂಗಾಧರ ರಾವ್ ಉಪಸ್ಥಿತರಿದ್ದರು.
ಸಭೆಯಲ್ಲಿ ಪಾರಂಪರಿಕ ಮನೆತನಗಳ ಸಲಹಾ ಸಮಿತಿ ಸದಸ್ಯರು, ಚೀನಪ್ಪಾಡಿ ರಮೇಶ ಮಣಿಯಾಣಿ, ಡಾ|ಜನಾರ್ಧನ ರಾವ್ ಅಡೂರು, ರವಿಶಂಕರ ನಾೈಕ್, ರವಿ ನಾರಾಯಣ ಮಿತ್ತೊಟ್ಟಿ, ರಾಮ ನಾೈಕ್ ಅಡೂರು, ಬಾಲಕೃಷ್ಣ ಮಾಸ್ತರ್, ಶ್ರೀಪತಿ ರಾವ್ ಗುಂಡಿಮನೆ, ಪಿ.ಧನಂಜಯ, ಅಶೋಕ ನಾೈಕ್ ತಲಮನೆ ಪಾಂಡಿ, ಗಂಗಾಧರ ಮಾಸ್ತರ್ ಅಡೂರು ಮೊದಲಾದ ಪ್ರಮುಖರು ಹಾಗೂ ಪ್ರಾದೇಶಿಕ ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗಳು ಸಲಹೆ ಸೂಚನೆ ನೀಡಿದರು. ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿ, ವಂದಿಸಿದರು.


