ಕುಂಬಳೆ: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ದರ್ಬಾರ್‍ಕಟ್ಟೆ ಮುಂಡಪ್ಪಳ್ಳ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಇಂದು ಬ್ರಹ್ಮಕಲಶಾಭಿಷೇಕ ಸಂಪನ್ನಗೊಳ್ಳಲಿದೆ.
ಶುಕ್ರವಾರ ಬೆಳಿಗ್ಗೆ 5 ರಿಂದ ಸಹಸ್ರ ಕಲಶ ಮಂಟಪ ಶುದ್ದಿ, ಸೃಷ್ಟಿ ತತ್ವಹೋಮ ಶುದ್ದಿ, ಮಹಾಪೂಜೆ, ಸಂಜೆ 4.30 ರಿಂದ ಅಧಿವಾಸ ಹೋಮ, ಅಧಿವಾಸ ಪೂಜೆ, ಅಂಕುರಪೂಜೆ, ರಾತ್ರಿ ಪೂಜೆ, ಶ್ರೀದುರ್ಗಾಪೂಜೆಗಳು ನೆರವೇರಿತು.
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 11 ರಿಂದ ರಾಮ ಭಟ್ ಕಾರಿಂಜ ಹಳೆಮನೆ ಹಾಗೂ ಜಯರಾಮ ಭಟ್ ದೇವಸ್ಯ ಅವರಿಂದ ಶ್ರೀದೇವೀ ಮಹಾತ್ಮ್ಯೆ ಪುರಾಣ ವಾಚನ-ಪ್ರವಚನ, ಸಂಜೆ 5 ರಿಂದ ಭಸ್ಮಾಸುರ ಮೋಹಿನಿ ಯಕ್ಷಗಾನ ಬಯಲಾಟ, 6.30 ರಿಂದ ಬಂಟರ ಸಂಘ ಬೆಳ್ಳೂರು ತಂಡದಿಂದ ಕಾರ್ಯಕ್ರಮ ವೈವಿಧ್ಯ, ರಾತ್ರಿ 8.30 ರಿಂದ ತಿರುವಾದಿರ ಕಳಿ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಿತು.
ಇಂದಿನ ಕಾರ್ಯಕ್ರಮ:
ಶನಿವಾರ ಬೆಳಿಗ್ಗೆ 5 ರಿಂದ ಕವಾಟೋದ್ಘಾಟನೆ, ಕಣಿದರ್ಶನ, ನಿರ್ಮಾಲ್ಯ ದರ್ಶನ, ತೈಲಪೂರ್ಣ ಕಲಶಾಭಿಷೇಕ, ಪಾಯಸ ಪೂಜೆ, ಕುಂಭೇಶ ಕಲಶಾಭಿಷೇಕ, ಪರಿಕಲಶಾಭಿಷೇಕಗಳು ನಡೆದು 7.30 ರಿಂದ 9.20ರ ಮೀನಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಬಳಿಕ ಆವಶ್ರಾವ ಪ್ರೋಕ್ಷಣಂ, ಮಹಾಪೂಜೆ, ನಿತ್ಯನೈಮಿತ್ತಿಕ ನಿರ್ಣಯ, ಪ್ರಸಾದ ವಿತರಣೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12ಕ್ಕೆ ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಧ್ಯಕ್ಷತೆಯಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡುವರು. ತಂತ್ರಿವರ್ಯ ಚಕ್ರಪಾಣಿ ದೇವಪೂಜಿತ್ತಾಯ ಉಪಸ್ಥಿತರಿರುವರು. ಅನಂತಪುರ ಶ್ರೀಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ಐಲ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಕೊರಕ್ಕೋಡು ಶ್ರೀಕ್ಷೇತ್ರದ ಅರ್ಚಕ ಕೃಷ್ಣ ದರೇಕರ್, ಉದ್ಯಮಿ ಸುರೇಂದ್ರ ಕಂಬಳಿ ಅಡ್ಯಾರ್ ಗುತ್ತು, ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಬ್ಲಾಕ್ ಅಭಿವೃದ್ದಿ ಅಧಿಕಾರಿ ಸುಂದರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಯೋಗೀಶ ಕಡಮಣ್ಣಾಯ ಆರಿಕ್ಕಾಡಿ, ಬೋನಂತಾಯ ಮಹದೇವ ಭಟ್, ವಿನಯ ಕೆ.ಕೆ.ಶೆಟ್ಟಿ ಅಹಮ್ಮದ್ ನಗರ, ಡಾ.ಕೃಪಾ ಕೆ.ಪಿ.ರೈ, ಕೆ.ವಿ.ಶಿವರಾಮ್ ಕುಂಬಳೆ, ಶಂಕರ ರೈ ಮಾಸ್ತರ್, ಬಿ.ಶಂಕರ ವಾಣಿಯ, ಹರಿಶ್ಚಂದ್ರ ಆಚಾರ್ಯ, ರವಿ ನಾಯ್ಕಾಪು ಮೊದಲಾದವರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 9.30 ರಿಂದ ಭಕ್ತಿ-ಭಾವ-ಗಾನ-ಲಹರಿ, 11 ರಿಂದ ಶ್ರೀಮದ್ವಾಧೀಶ ವಿಠಲದಾಸ ಕಾಟುಕುಕ್ಕೆ ಅವರಿಂದ ದಾಸವಾಣಿ ನಡೆಯಲಿದೆ.
(ಶ್ರೀಕ್ಷೇತ್ರದಲ್ಲಿ ಗುರುವಾರ ನಡೆದ ಧಾರ್ಮಿಕ ಸಭೆಯ ವೇದಿಕೆಯಲ್ಲಿ ಕ್ಷೇತ್ರದ ನಿರ್ಮಾತೃ ಕೆ.ಕೆ.ಶೆಟ್ಟಿ ಅವರನ್ನು ಸನ್ಮಾನಿಸುತ್ತಿರುವ ಗಣ್ಯರು.)




