ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಯೋಜನೆಗಳಿಗೆ ಹಸಿರು ನಿಶಾನೆ ಲಭಿಸಿದ್ದು ಅದರ ಯಶಸ್ಸಿಗೆ ಸಮಾಜ ಬಾಂಧವರ ಪೂರ್ಣ ಸಹಕಾರ ಅನಿವಾರ್ಯವೆಂದು ಸಮಿತಿಯ ಗೌರವ ಸಲಹೆಗಾರ ಕೃಷ್ಣ ಡಿ. ದರ್ಭೆತ್ತಡ್ಕ ಹೇಳಿದರು.
ದರ್ಭೆತ್ತಡ್ಕ ಶ್ರೀ ಶ್ರೀ ಧ್ಯಾನಮಂಟಪದಲ್ಲಿ ನಡೆದ ಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳಿಯತ್ತಡ್ಕ ಮೂಲಸ್ಥಾನದಲ್ಲಿ ಮದರುವಿಗೆ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, ದೇವಪ್ರಶ್ನೆಯಲ್ಲಿ ತಿಳಿದು ಬಂದ ಪ್ರಕಾರ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಸಮಿತಿಯ ಸಂಕಲ್ಪ ಕೈಗೊಳ್ಳುವಂತೆ ಸರ್ವರೂ ಸಹಕರಿಸಬೇಕೆಂಉ ಕೃಷ್ಣ ಡಿ.ವಿನಂತಿಸಿದರು.
ಸಮಿತಿಯ ಜಿಲ್ಲಾ ಅಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಇದುವರೆಗಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ಅವರು ಮುಂದಿನ ಚಟುವಟಿಕೆಗಳಿಗೆ ಎಲ್ಲರ ಸಹಕಾರವನ್ನು ಕೋರಿದರು. ಸಮಿತಿಯ ಗೌರವಾಧ್ಯಕ್ಷ ಆನಂದ ಕೆ.ಮವ್ವಾರು ಸಮಿತಿ ನಡೆದು ಬಂದ ಹಾದಿ ಮತ್ತು ಮುಂದಿನ ಯೋಜನೆಗಳನ್ನು ತಿಳಿಸಿದರು. ಗೌರವ ಸಲಹೆಗಾರರಾದ ರಾಮಪ್ಪ ಮಂಜೇಶ್ವರ, ನಿಟ್ಟೋಣಿ ಬಂದ್ಯೋಡು, ಅನಿಲ್ ಅಜಕ್ಕೋಡು, ಚಂದ್ರ ಕಟ್ಟೆಪುನಿ, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ಕೋಶಾಧಿಕಾರಿ ಡಿ.ಕೃಷ್ಣದಾಸ್, ಮಹಿಳಾ ಸಮಿತಿ ಅಧಕ್ಷ ಜಯಾ ರಾಮಪ್ಪ ಶುಭಹಾರೈಸಿದರು. ಮೊಗೇರ ಸಮಾಜ ಮತ್ತು ಮದರು ಎಂಬ ವಿಷಯದ ಬಗ್ಗೆ ಗೌರವ ಸಲಹೆಗಾರ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಮಾತನಾಡಿದರು. ಯುವಜನ ಸಮಿತಿ ಅಧ್ಯಕ್ಷ ಸುಂದರ ಮಾಳಂಗೈ ಉಪಸ್ಥಿತರಿದ್ದರು. ಮಹಿಳಾ ಜಿಲ್ಲಾ ಸಮಿತಿಗೆ ರೂಪುರೇಷೆಯನ್ನು ನೀಡಲಾಯಿತು. ಪ್ರ.ಕಾರ್ಯದರ್ಶಿ ಶಂಕರ ಡಿ. ದರ್ಭೆತ್ತಡ್ಕ ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು. ಸಾಂಸ್ಕøತಿಕ ಸಮಿತಿ ಸಂಚಾಲಕ ರಾಮಪಟ್ಟಾಜೆ ಕಾರ್ಯಕ್ರಮ ನಿರೂಪಿಸಿದರು.




