ಬದಿಯಡ್ಕ: ನೀರ್ಚಾಲು ಸೇಡಿಕಟ್ಟೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಮಾ.13ರಂದು ಉಳಿಯ ಬ್ರಹ್ಮಶ್ರೀ ವಿಷ್ಣು ಆಸ್ರರ ನೇತೃತ್ವದಲ್ಲಿ ನಡೆಯಲಿರುವುದು. ಹಾಗೂ ಸೇಡಿಕಟ್ಟೆ ಶ್ರೀ ಶಾಸ್ತಾರ ಹಾಗೂ ಶುಳ್ಯ ಶ್ರೀ ಧೂಮಾವತಿ ದೈವದ ಸನ್ನಿಧಿಯಲ್ಲಿ ವರ್ಷಂಪ್ರತಿಯ ನೇಮೋತ್ಸವವು ಮಾ.27ರಿಂದ ಮಾ.30ರ ತನಕ ನಡೆಯಲಿರುವುದು.
ಮಾ.13ರಂದು ಬೆಳಗ್ಗೆ 8.30ರಿಂದ ಗಣಪತಿ ಹೋಮ, ಏಕಾದಶರುದ್ರಾಭಿಷೇಕ, ನವಕಾಭಿಷೇಕ, ತಂಬಿಲ, 9.30ರಿಂದ ಸೇಡಿಕಟ್ಟೆ ಶ್ರೀ ಶಾಸ್ತಾರ ಯಕ್ಷಗಾನ ಕಲಾಸಂಘ ಇವರಿಂದ ಯಕ್ಷಗಾನ ತಾಳಮದ್ದಳೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 4.30ಕ್ಕೆ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಸಂಘದವರಿಂದ ಭಜನೆ, ಸಾಯಂ6.15ಕ್ಕೆ ಅವಲಕ್ಕಿ ಪದಸೇವೆ, ಪ್ರಸಾದ ವಿತರಣೆ ನಡೆಯಲಿದೆ.
ಮಾ.27ರಂದು ಮಧ್ಯಾಹ್ನ 12.30ಕ್ಕೆ ಸೇಡಿಕಟ್ಟೆ ಶ್ರೀ ಶಾಸ್ತಾರ ಸನ್ನಿಧಿಯಲ್ಲಿ ಪ್ರಾರ್ಥನೆ, ಬಲಿವಾಡುಕೂಟ, ಮಹಾಪೂಜೆ, ರಾತ್ರಿ 8ಕ್ಕೆ ಶ್ರೀ ಶುಳ್ಯ ಧೂಮಾವತೀ ದೈವಸ್ಥಾನಕ್ಕೆ ಭಂಡಾರದ ಆಗಮನ, ತೊಡಂಗಲ್, ರಾತ್ರಿ 1 ಗಂಟೆಯಿಂದ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಮಾ.28ರಂದು ಸೇಡಿಕಟ್ಟೆಯಲ್ಲಿ ಮಧು ಪುದ್ವಾರು ನೇಮೋತ್ಸವಕ್ಕೆ ಭಂಡಾರದ ಆಗಮನ, ತೊಡಂಗಲ್, ಅನ್ನಸಂತರ್ಪಣೆ. ಮಾ.29ರಂದು ಪೂರ್ವಾಹ್ನ 7ರಿಂದ ಧೂಮಾವತಿ, ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ನೇಮೋತ್ಸವ, ರಾತ್ರಿ 8 ಗಂಟೆಗೆ ಧರ್ಮನೇಮೋತ್ಸವದ ತೊಡಂಗಲ್, ಧರ್ಮ ಸಮಾರಾಧನೆ. ಮಾ.30ರಂದು ಪೂರ್ವಾಹ್ನ 7ರಿಂದ ಧರ್ಮ ನೇಮೋತ್ಸವ ಜರಗಲಿದೆ. ಊರ ಪರವೂರ ಭಕ್ತಾದಿಗಳು ಈ ಸತ್ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ತಿಳಿಸಲಾಗಿದೆ.



