HEALTH TIPS

ಎ.4ರಂದು ಕಾಟುಕುಕ್ಕೆಯಲ್ಲಿ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ- ಸ್ವಾಗತ ಸಮಿತಿ ರಚನೆ: ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಿತ್ತೂರು ಪುರುಷೋತ್ತಮ ಭಟ್ ಆಯ್ಕೆ


        ಪೆರ್ಲ:ಗಡಿನಾಡ ಧ್ವನಿ, ಗಡಿನಾಡ ಶ್ರೆಯೊಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಎ.4 ರಂದು ಕಾಟುಕುಕ್ಕೆ ಶ್ರಿ ಸುಬ್ರಾಯ ದೇವಸ್ಥಾನದ ನೂತನ ಸಭಾಂಗಣದಲ್ಲಿ 6ನೇ 'ಕರ್ನಾಟಕ ಗಡಿನಾಡ ಸಮ್ಮೇಳನ -2020' ನಡೆಯಲಿದ್ದು ಸಮ್ಮೇಳನದ ಪೂರ್ವಭಾವಿ ಸಭೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ವಠಾರದಲ್ಲಿ ಗುರುವಾರ ನಡೆಯಿತು.
       ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೆಶ್ವರ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಿ.ಸಂಜೀವ ರೈ ಕೆಂಗಣಾಜೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡು ಗಡಿನಾಡಿನ ವೈವಿಧ್ಯಮಯ ಸಂಸ್ಕøತಿ, ಆಚಾರ ವಿಚಾರ, ವಿವಿಧ ಭಾಷಿಕರ ಮಧ್ಯೆ ಕಾಸರಗೋಡಿನ ಕನ್ನಡಿಗರು ಅತ್ತ ಕರ್ನಾಟಕಕ್ಕೂ ಸೇರದೆ, ಕೇರಳದ ಸಂಸ್ಕೃತಿಯನ್ನೂ ಹೊಂದಿಕೊಳ್ಳಲಾಗದೆ, ಸಾಮಾನ್ಯ ಬದುಕು ನಡೆಸಲಾರದೆ ಸ್ವರ್ಗದಿಂದ ಹೊರತಳ್ಳಿದ ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟಕ್ಕೆ ರಾಜಕೀಯ ಬಲ ಇಲ್ಲದ ಕಾರಣ ಲಕ್ಷ್ಯ ತಲಪಲಾಗಿಲ್ಲ. ಯುವ ಪೀಳಿಗೆ, ನೌಕರರು ಕನ್ನಡ ಹೋರಾಟದಲ್ಲಿ ಹಿಂದಿನಂತೆ ಸೇರುತ್ತಿಲ್ಲ. ಹಿರಿಯ ಹೋರಾಟಗಾರರಲ್ಲಿ ಹಲವರು ವಿಧಿವಶರಾದರೆ, ಕೆಲವರು ನೇಪಥ್ಯಕ್ಕೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕನ್ನಡ ಪರ ಹೋರಾಟ ಕ್ಷೀಣಗೊಂಡಿದೆ. ಉಭಯ ರಾಜ್ಯ ಸರ್ಕಾರಗಳು ಗಡಿ ನಾಡಿನೊಂದಿಗೆ ನಿರ್ಲಿಪ್ತ ಭಾವನೆ ತೋರುತ್ತಿದೆ.ಕಾಸರಗೋಡು ಜಿಲ್ಲೆಯ ಅಚ್ಚಕನ್ನಡ ಭೂ ಪ್ರದೇಶವನ್ನು ಭಾಷಿಕವಾಗಿ, ಭೌಗೋಳಿಕವಾಗಿ, ವೃತ್ತಿಪರವಾಗಿ ಮಲಯಾಳೀಕರಣ ಗೊಳಿಸಲು ಕೇರಳ ಸರ್ಕಾರ ಪ್ರಯತ್ನಿಸುತ್ತಿದೆ.ಕನ್ನಡ ಪರ ಸಂಘಟನೆಗಳು ಒಗ್ಗಟ್ಟಾಗಿ ಕಾಲಕಾಲಕ್ಕೆ ಕಾಸರಗೋಡಿನ ಕನ್ನಡಿಗರ ಸ್ಥಿತಿಗತಿಗಳನ್ನು ಉಭಯ ಸರ್ಕಾರಗಳ ಗಮನಕ್ಕೆ ತರುವ ಪ್ರಯತ್ನಗಳು ನಡೆಯಬೇಕು ಎಂದರು.
        ಸಮ್ಮೇಳನದ ಸಂಯೋಜಕ, ಗಡಿನಾಡ ಶ್ರೆಯೊಭಿವ್ರದ್ಧಿ ಟ್ರಸ್ಟ್ ಅಧ್ಯಕ್ಷ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಮಾತನಾಡಿ, ಗಡಿ ನಾಡಿನ ಸಮಸ್ಯೆ, ಹಾಗೂ ಇಲ್ಲಿನ ಸವಾಲುಗಳನ್ನು ಗಡಿನಾಡ ಪ್ರಾಧಿಕಾರದ ಮೂಲಕ ಕರ್ನಾಟಕ ಸರ್ಕಾರದ ಗಮನಕ್ಕೆ ತರಲಾಗುವುದು. 6ನೇ ಸಮ್ಮೇಳನದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ, ಬಹಿರಂಗ ಅಧಿವೇಶನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಭಜನಾ ತಂಡಗಳು, ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ, ಠರಾವು ಮಂಡನೆ ನಡೆಯಲಿದೆ ಎಂದು ತಿಳಿಸಿ ಸಮ್ಮೇಳನದ ರೂಪು ರೇಷೆಗಳನ್ನು ವಿವರಿಸಿದರು. ಸಮ್ಮೇಳನದ ಯಶಸ್ವಿಯಾಗಿ ನಡೆಯಲು ಗಡಿನಾಡಿನ ಎಲ್ಲರ ಸರ್ವ ರೀತಿಯ ಸಹಕಾರ ಕೋರಿದರು.
     ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್, ಎಣ್ಮಕಜೆ ಗ್ರಾ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಗ್ರಾ.ಪಂ. ಸದಸ್ಯೆ ಮಲ್ಲಿಕಾ ಜೆ.ರೈ, ಈಶ್ವರ ಭಟ್ ಕಡಂದೇಲು ಉಪಸ್ಥಿತರಿದ್ದರು. ಶ್ರೀ ಮಧ್ವಾಧೀಶ ವಿಠಲದಾಸ (ರಾಮಕೃಷ್ಣ ಕಾಟುಕುಕ್ಕೆ) ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಬಿ.ಎಸ್.ಗಾಂಭೀರ ವಂದಿಸಿದರು. ಮುಂದಿನ ಸಭೆ ಮಾ.7ರಂದು ಸಂಜೆ 4ಕ್ಕೆ ಕಾಟುಕುಕ್ಕೆ ದೇವಳ ಪರಿಸರದಲ್ಲಿ ನಡೆಯಲಿದೆ.
   ಮಹಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಆಯ್ಕೆಯಾದರು. ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries