ಮುಳ್ಳೇರಿಯ: ತಾಲೂಕು ಮಟ್ಟದಲ್ಲಿ ಆಯ್ದ ಒಂದು ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಫ್ಲವರ್ಸ್ ಟಿವಿ ಆಯೋಜಿಸುವ 'ಈಸಿ ಎಕ್ಸಾಮ್' ಒಂದು ದಿನದ ಪರೀಕ್ಷೆ ಪೂರ್ವ ತಯಾರಿ ಮಾಹಿತಿ ಕಾರ್ಯಾಗಾರ ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು.
ಪ್ರಾಂಶುಪಾಲೆ ಸುಧಾ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ವಾರಿಜಾ ನೇರೋಳು ಅಧ್ಯಕ್ಷತೆ ವಹಿಸಿದ್ದರು.ಬಾಲು ಮಹೇಂದ್ರ ತರಗತಿ ನೀಡಿದರು.
ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಗೋಳಿಕಟ್ಟೆ, ಬೆಳ್ಳೂರು ಪಂ.ಸಂಯೋಜಕಿ ಸುಜಾತ, ಕಾರಡ್ಕ ಪಂ.ಸಂಯೋಜಕ ಸುರೇಶ್ ಯಾದವ್, ಮೊಗ್ರಾಲ್ ಪುತ್ತೂರು ಪಂ.ಸಂಯೋಜಕಿ ಶ್ರೀಜಾ, ಚೆಮ್ನಾಡ್ ಪಂ. ಸಂಯೋಜಕ ವಿಜಯಕುಮಾರ್ ಉಪಸ್ಥಿತರಿದ್ದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್.ಎಚ್. ಮೊಹಮ್ಮದ್ ಸ್ವಾಗತಿಸಿ, ಎಫ್.ಎಫ್.ಸಿ.ಕಾಸರಗೋಡು ತಾಲೂಕು ಸಂಚಾಲಕ ಧನರಾಜ್ ಬೇಡಗಂ ವಂದಿಸಿದರು. ದಾಸಪ್ಪ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರು ಸಹಕರಿಸಿದರು.




