ಕುಂಬಳೆ: ಲೇಖಕಿ, ಕವಯಿತ್ರಿ ಸ್ನೇಹಲತಾ ದಿವಾಕರ್ ನಾಯ್ಕಾಪು ಅವರು ಬರೆದಿರುವ ಮಗ್ಗ ಕಥಾ ಸಂಕಲನದ ಬಿಡುಗಡೆ ಸಮಾರಂಭ ಇಂದು(ಶನಿವಾರ) ಸಂಜೆ 4ಕ್ಕೆ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ನಡೆಯಲಿದೆ.
ಖ್ಯಾತ ರಂಗಕರ್ಮಿ, ಲೇಖಕ ಡಾ.ನಾ.ದಾ.ಶೆಟ್ಟಿ ಹಾಗೂ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಜಂಟಿಯಾಗಿ ಕೃತಿಯನ್ನು ಬಿಡುಗಡೆಗೊಳಿಸುವರು. ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಕೃತಿಪರಿಚಯ ನೀಡುವರು. ಚಲನಚಿತ್ರ ನಿರ್ದೇಶಕ, ಪ್ರಕಾಶಕ ಸಿರಿವರ ರವೀಂದ್ರನಾಥ್, ಮಂಗಳೂರು ಆಕೃತಿ ಪ್ರಿಂಟರ್ಸ್‍ನ ಕಲ್ಲೂರು ನಾಗೇಶ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶುಭಹಾರೈಸುವರು. ಕತೆಗಾರ್ತಿ ಸ್ನೇಹಲತಾ ದಿವಾಕರ್ ಸಹಿತ ವಿವಿಧ ವಲಯಗಳ ಪ್ರಮುಖರು ಉಪಸ್ಥಿತರಿರುವರು.




